ಕೇರಳದಲ್ಲಿ ಒಂದೇ ಕುಟುಂಬದ 5 ಮಂದಿಗೆ ವಕ್ಕರಿಸಿದ ಕೊರೊನಾ
ತಿರುವನಂತಪುರಂ: ದೇವರನಾಡು ಕೇರಳದಲ್ಲಿ ಮಹಾಮಾರಿ ಕೊರೊನಾ ವೈರೆಸ್ ಮತ್ತೆ ಬಂದು ವಕ್ಕರಿಸಿದೆ. 5 ಮಂದಿಗೆ ಈ ಸೋಂಕು ಇದೆ ಎಂದು ಕೇರಳ ಸರ್ಕಾರ ಮಾಹಿತಿ ಖಚಿತ ಪಡಿಸಿದೆ. ಸೋಂಕಿತರು ಕೇರಳದ ಪಟ್ಟನಂತಿಟ್ಟದ ಒಂದೇ ಕುಟುಂಬದವರಾಗಿದ್ದು, ಇತ್ತೀಚಿಗೆ ಇಟಲಿಗೆ ಭೇಟಿ ನೀಡಿ ಬಂದಿದ್ದ ಮೂವರಲ್ಲಿ ಸೋಂಕು ಪತ್ತೆಯಾಗಿತ್ತು. ಅವರಿಂದಲೇ ಉಳಿದ ಇಬ್ಬರಿಗೆ ಸೋಂಕು ಹರಡಿದೆ ಎಂದು ಕೇರಳಾದ ಆರೋಗ್ಯ ಸಚಿವೆ ಕೆ.ಕೆ ಶೈಲಜಾ ತಿಳಿಸಿದ್ದಾರೆ. ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ 39ಕ್ಕೆ ಏರಿಕೆಯಾಗಿದೆ. ಕೊರೊನಾ ಸೋಂಕು ಪೀಡಿತರಿಗೆ ಆಸ್ಪತ್ರೆಯಲ್ಲಿ […]
ತಿರುವನಂತಪುರಂ: ದೇವರನಾಡು ಕೇರಳದಲ್ಲಿ ಮಹಾಮಾರಿ ಕೊರೊನಾ ವೈರೆಸ್ ಮತ್ತೆ ಬಂದು ವಕ್ಕರಿಸಿದೆ. 5 ಮಂದಿಗೆ ಈ ಸೋಂಕು ಇದೆ ಎಂದು ಕೇರಳ ಸರ್ಕಾರ ಮಾಹಿತಿ ಖಚಿತ ಪಡಿಸಿದೆ.
ಸೋಂಕಿತರು ಕೇರಳದ ಪಟ್ಟನಂತಿಟ್ಟದ ಒಂದೇ ಕುಟುಂಬದವರಾಗಿದ್ದು, ಇತ್ತೀಚಿಗೆ ಇಟಲಿಗೆ ಭೇಟಿ ನೀಡಿ ಬಂದಿದ್ದ ಮೂವರಲ್ಲಿ ಸೋಂಕು ಪತ್ತೆಯಾಗಿತ್ತು. ಅವರಿಂದಲೇ ಉಳಿದ ಇಬ್ಬರಿಗೆ ಸೋಂಕು ಹರಡಿದೆ ಎಂದು ಕೇರಳಾದ ಆರೋಗ್ಯ ಸಚಿವೆ ಕೆ.ಕೆ ಶೈಲಜಾ ತಿಳಿಸಿದ್ದಾರೆ.
ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ 39ಕ್ಕೆ ಏರಿಕೆಯಾಗಿದೆ. ಕೊರೊನಾ ಸೋಂಕು ಪೀಡಿತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಮೇಲೆ ವೈದ್ಯರು ತೀವ್ರ ನಿಗಾ ವಹಿಸಿದ್ದಾರೆ. ಈ ಹಿನ್ನೆಲೆ ಕೇರಳದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ.
Published On - 12:10 pm, Sun, 8 March 20