ಅಸ್ಸಾಂನ ಬ್ರಹ್ಮಪುತ್ರಾ ನದಿಯಲ್ಲಿ((Brahmaputra River) ಸೆಪ್ಟೆಂಬರ್ 8ರಂದು ನಡೆದ ಎರಡು ಬೋಟ್ಗಳ ಡಿಕ್ಕಿಗೆ ಸಂಬಂಧಪಟ್ಟಂತೆ ಪೊಲೀಸರು ಇದೀಗ 6 ಮಂದಿಯನ್ನು ಬಂಧಿಸಿದ್ದಾರೆ. ಹಾಗೇ, ವಿಚಾರಣೆಗಾಗಿ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಅಸ್ಸಾಂನ ಜೋರ್ಹತ್ ಜಿಲ್ಲೆಯ ನೇಮತಿಘಾಟ್ ಎಂಬಲ್ಲಿ ಎರಡು ಬೋಟ್ಗಳು ಡಿಕ್ಕಿಯಾಗಿದ್ದವು. ಎರಡೂ ಬೋಟ್ಗಳಿಂದ ಸುಮಾರು 90 ಮಂದಿ ಪ್ರಯಾಣಿಕರಿದ್ದರು. ಅದರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ತನಿಖೆ ನಡೆಸುವುದಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದರು. ಹಾಗೇ, ಘಟನೆ ಸಂಬಂಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದರು.
ಇದೀಗ ತನಿಖೆಯ ಬೆಳವಣಿಗೆಗಳ ಬಗ್ಗೆ ಇಂಡಿಯಾ ಟುಡೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಜೋರ್ಹತ್ ಜಿಲ್ಲಾ ಎಸ್ಪಿ ಅಂಕುರ್ ಜೈನ್, ಜೋರ್ಹತ್ ಪೊಲೀಸರು ಈಗಾಗಲೇ ಆರು ಮಂದಿಯನ್ನು ಬಂಧಿಸಿದ್ದಾರೆ. ಮಜುಲಿ ಜಿಲ್ಲೆ ಪೊಲೀಸರು ಮೂವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಹಾಗೇ, ತಾವು ಕ್ರಿಮಿನಲ್ ಕೇಸ್ ದಾಖಲಿಸಿಕೊಂಡೇ ತನಿಖೆ ನಡೆಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ. ಇನ್ನು ಬಂಧಿತ ಆರೂ ಮಂದಿ ಒಳನಾಡು ಜಲಸಾರಿಗೆ ವಿಭಾಗದ ಸಿಬ್ಬಂದಿಯೇ ಆಗಿದ್ದಾರೆ. ಅಂದು ನಡೆದ ಬೋಟ್ ಆ್ಯಕ್ಸಿಡೆಂಟ್ನಲ್ಲಿ ಮೃತಪಟ್ಟವರ ಸಂಖ್ಯೆ ಕಡಿಮೆಯಾದರೂ ಇದು ದೊಡ್ಡ ದುರಂತವೇ ಹೌದು ಎಂದು ಅಂಕುರ್ ಜೈನ್ ಹೇಳಿದ್ದಾರೆ.
ಇನ್ನು ಘಟನೆ ಸಂಬಂಧ ಹಲವರ ಹೇಳಿಕೆಗಳು ನಮಗೆ ಅಗತ್ಯವಿದೆ. ಎರಡೂ ಬೋಟ್ಗಳ ಮಾಲೀಕರಿಗೂ ಸಮನ್ಸ್ ನೀಡಲಾಗಿದ್ದು, ವಿಚಾರಣೆಗೆ ಹಾಜರಾಗಬೇಕಾಗುತ್ತದೆ. ಜೋಗನ್ ದಾಸ್, ಧನ್ಬರ್ ದಾಸ್, ಬಿಜು ಕುಮಾರ್ ದಾಸ್, ಜಯಂತ ದತ್ತ, ಬಿನೋದ್ ಬರುವಾ ಮತ್ತು ಬಾಬುಲ್ ನಿಯೋಗ್ ಬಂಧಿತರು ಎಂದು ಅಂಕುರ್ ಜೈನ್ ಮಾಹಿತಿ ನೀಡಿದ್ದಾರೆ.
ಅಂದು ಜೋರ್ಹತ್ನ ನೇಮತಿ ಘಾಟ್ನಲ್ಲಿ ಸಂಜೆ 4.30ರ ವೇಳೆಗೆ ಈ ದುರಂತ ಸಂಭವಿಸಿತ್ತು. ಎದುರು ಬದುರಾಗಿ ಚಲಿಸುತ್ತಿದ್ದ ಎರಡು ಬೋಟ್ಗಳು ಡಿಕ್ಕಿ ಹೊಡೆದಿದ್ದವು. ಗುವಾಹಟಿಯಿಂದ 350 ಕಿ.ಮೀ. ದೂರದಲ್ಲಿ ಈ ಘಟನೆ ನಡೆದಿದೆ. ಒಂದು ಬೋಟ್ ಬ್ರಹ್ಮಪುತ್ರನದಿಯ ದ್ವೀಪವಾದ ಮಜುಲಿ ಕಡೆಯಿಂದ ನೇಮತಿ ಘಾಟ್ಗೆ ಬರುತ್ತಿತ್ತು. ಇನ್ನೊಂದು ಬೋಟ್ ನೇಮತಿ ಘಾಟ್ನಿಂದ ವಾಪಾಸ್ ತೆರಳುತ್ತಿತ್ತು. ಹೀಗಾಗಿ ಘಟನೆ ಬಗ್ಗೆ ಜೋರ್ಹತ್ ಮತ್ತು ಮಜುಲಿ ಎರಡೂ ಜಿಲ್ಲೆಗಳ ಪೊಲೀಸರೂ ತನಿಖೆ ಶುರು ಮಾಡಿದ್ದಾರೆ.
ಇದನ್ನೂ ಓದಿ: ಅಸ್ಸಾಂ ಬೋಟ್ಗಳ ಡಿಕ್ಕಿ; ಕ್ರಿಮಿನಲ್ ಕೇಸ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದ ಸಿಎಂ ಹಿಮಂತ ಬಿಸ್ವಾ ಶರ್ಮಾ
ಚಿಕ್ಕಬಳ್ಳಾಪುರ: ಬೀದಿ ನಾಯಿಗೆ ಅದ್ದೂರಿ ಹುಟ್ಟುಹಬ್ಬ ಆಚರಣೆ; ಕೇಕ್ ಕತ್ತರಿಸಿ ಸನ್ಮಾನ ಮಾಡಿದ ಸ್ಥಳೀಯರು