ಅಸ್ಸಾಂ ಬೋಟ್ಗಳ ಡಿಕ್ಕಿ; ಕ್ರಿಮಿನಲ್ ಕೇಸ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದ ಸಿಎಂ ಹಿಮಂತ ಬಿಸ್ವಾ ಶರ್ಮಾ
ಬ್ರಹ್ಮಪುತ್ರ ನದಿಯ ದಕ್ಷಿಣ ದಡದಲ್ಲಿರುವ ಜೊರಹತ್ನ ನಿಮಾತಿ ಘಾಟ್ನಿಂದ ಮಜುಲಿಗೆ ಏನಿಲ್ಲವೆಂದರೂ ಸುಮಾರು 10 ಖಾಸಗಿ ಮಶಿನ್ ಬೋಟ್ಗಳು ಸಂಚರಿಸುತ್ತಿವೆ.
ಅಸ್ಸಾಂನ ಜೊರಹತ್ ಜಿಲ್ಲೆಯ ಬ್ರಹ್ಮಪುತ್ರ ನದಿಯಲ್ಲಿ ಎರಡು ಬೋಟುಗಳು (Assam Boat Capsize)Him ಡಿಕ್ಕಿಯಾಗಿ ಒಬ್ಬರು ಮೃತಪಟ್ಟಿರುವ ಘಟನೆಗೆ ಸಂಬಂಧಪಟ್ಟಂತೆ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Assam Chief Minister Himanta Biswa Sarma), ಜೊರಹತ್ ಪೊಲೀಸರಿಗೆ ಆದೇಶಿಸಿದ್ದಾರೆ. ನಿನ್ನೆ ಈ ದುರಂತ ನಡೆದಿತ್ತು. ಎರಡೂ ಬೋಟ್ನಿಂದ ಸುಮಾರು 90 ಪ್ರಯಾಣಿಕರಿದ್ದು, ಅದರಲ್ಲೀಗ ಇಬ್ಬರು ಇನ್ನೂ ಪತ್ತೆಯಾಗಿಲ್ಲ. ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಎರಡೂ ಬೋಟ್ಗಳು ಡಿಕ್ಕಿಯಾಗಲು ಕೆಟ್ಟದಾದ ನಿರ್ವಹಣೆಯೇ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲೇ ಗೊತ್ತಾಗಿದೆ. ನಾವು ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.
ಏಕ ಎಂಜಿನ್ ಬೋಟ್ಗಳು ಬಂದ್ ಬ್ರಹ್ಮಪುತ್ರ ನದಿಯ ದಕ್ಷಿಣ ದಡದಲ್ಲಿರುವ ಜೊರಹತ್ನ ನಿಮಾತಿ ಘಾಟ್ನಿಂದ ಮಜುಲಿಗೆ ಏನಿಲ್ಲವೆಂದರೂ ಸುಮಾರು 10 ಖಾಸಗಿ ಮಶಿನ್ ಬೋಟ್ಗಳು ಸಂಚರಿಸುತ್ತಿವೆ. ಇವೆಲ್ಲವೂ ಸಿಂಗಲ್ ಎಂಜಿನ್ನ ಬೋಟ್ಗಳಾಗಿವೆ. ಆದರೆ ಇನ್ನು ಮುಂದೆ ಅಂಥ ಏಕ ಎಂಜಿನ್ ಬೋಟ್ಗಳ ಸಂಚಾರವನ್ನು ನಿಷೇಧಿಸಲಾಗುವುದು. ಯಾಕೆಂದರೆ ಆ ಎಂಜಿನ್ಗಳು ಮರಿನ್ ಎಂಜಿನ್ಗಳಲ್ಲ. ಇದರಿಂದ ಖಂಡಿತ ಅಪಾಯವಾಗಲಿದೆ. ಹಾಗೊಮ್ಮೆ, ಈ ದೋಣಿಗಳ ಮಾಲೀಕರು ಯಾರಾದರೂ ತಮ್ಮ ಬೋಟ್ನ ಎಂಜಿನ್ನ್ನು ಸಾಗರ ಎಂಜಿನ್ ಆಗಿ ಬದಲಿಸಲು ಮುಂದೆ ಬಂದರೆ ಅದಕ್ಕೆ ನಮ್ಮ ಒಪ್ಪಿಗೆಯೂ ಇದೆ. ನಂತರ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ತಿಳಿಸಿದ್ದಾರೆ. ಈ ಮರಿನ್ ಎಂಜಿನ್ಗೆ ಏನಿಲ್ಲವೆಂದರೂ 10 ಲಕ್ಷ ರೂಪಾಯಿ ಇರುತ್ತದೆ. ಯಾವುದೇ ದೋಣಿ ಮಾಲೀಕರು ಅರ್ಜಿ ಸಲ್ಲಿಸಿದರೆ ಸರ್ಕಾರದಿಂದ ನೆರವು ನೀಡಲಾಗುವುದು ಎಂದೂ ಮಾಹಿತಿ ನೀಡಿದ್ದಾರೆ.
Rescue operation going on in Majuli. As of now 1 death and 2 missing. Efforts are on to find out more information pic.twitter.com/4q61vHKsFu
— Himanta Biswa Sarma (@himantabiswa) September 9, 2021
Sad News: Two boats collided and capsized in #Brahmaputra near Majuli, Assam.
100+ people reported missing. pic.twitter.com/ANpxBfxHOw
— AIUWC (@aiuwcindia) September 8, 2021
ಇದನ್ನೂ ಓದಿ:ಪ್ರತಿಭಟಿಸುತ್ತಿರುವ ಆಫ್ಘನ್ ಮಹಿಳೆಯರ ವಿರುದ್ಧ ತಾಲಿಬಾನ್-ಪರ ಮಹಿಳೆಯರನ್ನೇ ಛೂಬಿಟ್ಟ ತಾಲಿಬಾನಿಗಳು!