ಜಮ್ಮುವಿನಲ್ಲಿ ಒಂದೇ ಕುಟುಂಬದ 6 ಜನರ ನಿಗೂಢ ಸಾವು; ಮನೆಯೊಳಗೆ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ
ಈ 6 ಮಂದಿಯೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಎರಡು ಬೇರೆ ಬೇರೆ ಮನೆಗಳಲ್ಲಿ ವಾಸವಾಗಿದ್ದರು. ಒಂದು ಮನೆಯಲ್ಲಿ 2 ಶವಗಳು ಪತ್ತೆಯಾಗಿದ್ದು, ಅವರ 2ನೇ ಮನೆಯಲ್ಲಿ 4 ಶವಗಳು ಪತ್ತೆಯಾಗಿವೆ.
ಶ್ರೀನಗರ: ಜಮ್ಮು ಕಾಶ್ಮೀರದ ಸಿದ್ರಾ ಪ್ರದೇಶದಲ್ಲಿ ಇಂದು (ಬುಧವಾರ) ಒಂದೇ ಕುಟುಂಬದ ಒಟ್ಟು 6 ಮಂದಿ ತಮ್ಮ ಮನೆಯೊಳಗೆ ಶವವಾಗಿ ಪತ್ತೆಯಾಗಿದ್ದಾರೆ. ಈ ನಿಗೂಢ ಸಾವು ಭಾರೀ ಕುತೂಹಲ ಮತ್ತು ಆತಂಕ ಮೂಡಿಸಿದೆ. ಮೃತರ ಸಾವಿಗೆ ಕಾರಣವೇನೆಂದು ಇನ್ನೂ ಖಚಿತವಾಗಿಲ್ಲ. ಜಮ್ಮು (Jammu) ನಗರದ ಸಿದ್ರಾ ಪ್ರದೇಶದ ಮನೆಯೊಂದರಿಂದ ಇಬ್ಬರು ಹೆಣ್ಣು ಮತ್ತು ನಾಲ್ಕು ಪುರುಷರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮೂಲಗಳು ತಿಳಿಸಿವೆ.
6 ಮೃತದೇಹಗಳನ್ನು ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಗಿದೆ. ಅವರ ಸಾವಿಗೆ ನಿಖರವಾದ ಕಾರಣವನ್ನು ತನಿಖೆ ನಡೆಸಲಾಗುತ್ತಿದೆ. ಜಮ್ಮು ನಗರದ ಸಿದ್ರಾ ಪ್ರದೇಶದಲ್ಲಿ ಪತ್ತೆಯಾದ ಶವಗಳು ಅರೆ ಕೊಳೆತ ಸ್ಥಿತಿಯಲ್ಲಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Big News: ಕಾಶ್ಮೀರಿ ಪಂಡಿತರ ಹತ್ಯೆ ಪ್ರಕರಣ: ಬಿಟ್ಟಾ ಕರಾಟೆ ಪತ್ನಿ ಸೇರಿ ನಾಲ್ವರು ಸರ್ಕಾರಿ ಅಧಿಕಾರಿಗಳ ವಜಾ
ಈ 6 ಮಂದಿಯೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಎರಡು ಬೇರೆ ಬೇರೆ ಮನೆಗಳಲ್ಲಿ ವಾಸವಾಗಿದ್ದರು. ಒಂದು ಮನೆಯಲ್ಲಿ 2 ಶವಗಳು ಪತ್ತೆಯಾಗಿದ್ದು, ಅವರ 2ನೇ ಮನೆಯಲ್ಲಿ 4 ಶವಗಳು ಪತ್ತೆಯಾಗಿವೆ. ಈ ದೇಹಗಳ ಮೇಲೆ ಯಾವುದೇ ಬುಲೆಟ್ ಅಥವಾ ಇನ್ನಿತರ ಆಯುಧದ ಗುರುತುಗಳಿಲ್ಲ ಎಂದು ಮೂಲಗಳು ತಿಳಿಸಿವೆ.
ಜಮ್ಮುವಿನ ಸಿದ್ರಾದ ಐಷಾರಾಮಿ ತಾವಿ ವಿಹಾರ್ ವಸತಿ ಪ್ರದೇಶದಲ್ಲಿನ 2 ಮನೆಗಳಿಂದ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರೆಲ್ಲರೂ ಕಾಶ್ಮೀರಕ್ಕೆ ಸೇರಿದವರಾಗಿದ್ದು, ಅವರ ಕುಟುಂಬಗಳಿಗೆ ಮಾಹಿತಿ ನೀಡಲಾಗಿದೆ. ಈ ಪ್ರಕರಣದ ತನಿಖೆಗಾಗಿ ಎಸ್‌ಐಟಿ ತಂಡ ರಚಿಸುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮೃತದೇಹಗಳನ್ನು ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Shivmogga Violence: ಕೊಲೆ ಉದ್ದೇಶದಿಂದಲೇ ಪ್ರೇಮ್ ಸಿಂಗ್ ಮೇಲೆ ದಾಳಿ ನಡೆದ ಶಂಕೆ, ತೀವ್ರಗೊಂಡ ತನಿಖೆ
ಈ ಎಲ್ಲಾ ಮೃತ ದೇಹಗಳಿಗೆ ಡ್ರಿಪ್ ಲೈನ್ ಅಳವಡಿಸಲಾಗಿದೆ ಎಂದು ವೈದ್ಯಕೀಯ ಕಾಲೇಜಿನ ವೈದ್ಯರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಅವರ ಸಾವಿಗೆ ಕಾರಣವೇನು ಎಂದು ತಿಳಿಯುತ್ತದೆ ಎಂದು ಅವರು ಹೇಳಿದ್ದಾರೆ. ಮೃತರ ಕುಟುಂಬದ ಸದಸ್ಯರು ಜಮ್ಮುವಿಗೆ ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ದೇಹಗಳನ್ನು ಸಕೀನಾ ಬೇಗಂ ಮತ್ತು ಅವರ ಪುತ್ರಿ ನಸೀಮಾ, ರುಬಿನಾ ಬಾನೋ, ಜಾಫರ್ ಅಲಿ, ನೂರ್-ಉಲ್-ಹಬೀಬ್ ಮತ್ತು ಸಜಾದ್ ಅಹ್ಮದ್ ಎಂದು ಗುರುತಿಸಲಾಗಿದೆ.