ಹೊಸ ವರ್ಷದಂದು.. ಚೀನಾವನ್ನು ಹಿಂದಿಕ್ಕಿದ ಭಾರತ! ಯಾವುದರಲ್ಲಿ ಗೊತ್ತಾ?

ಜನವರಿ 1ರಂದು ದೇಶದಲ್ಲಿ 60,000 ಶಿಶುಗಳ ಜನನವಾಗಿದೆ. ಈ ಕುರಿತು UNICEFನಿಂದ ಅಂದಾಜು ಅಂಕಿ ಅಂಶ ಬಿಡುಗಡೆಯಾಗಿದೆ. ಅಂದ ಹಾಗೆ, ಚೀನಾದಲ್ಲಿ ಹೊಸ ವರ್ಷದಂದು ಹುಟ್ಟಿದ್ದ ಶಿಶುಗಳ ಸಂಖ್ಯೆ ಎಷ್ಟು ಗೊತ್ತಾ? ಕೇವಲ 35,615.

ಹೊಸ ವರ್ಷದಂದು.. ಚೀನಾವನ್ನು ಹಿಂದಿಕ್ಕಿದ ಭಾರತ! ಯಾವುದರಲ್ಲಿ ಗೊತ್ತಾ?
ಸಾಂದರ್ಭಿಕ ಚಿತ್ರ
Edited By:

Updated on: Jan 01, 2021 | 5:25 PM

ದೆಹಲಿ: ನೆರೆಯ ಚೀನಾದ ಉಪಟಳದಿಂದ ಕೇವಲ ಭಾರತ ಮಾತ್ರವಲ್ಲದೆ ಇಡೀ ವಿಶ್ವವೇ ಕಂಗೆಟ್ಟು ಹೋಗಿದೆ. ಅದರಲ್ಲೂ ದೇಶಕ್ಕೆ ಡ್ರ್ಯಾಗನ್​ನ ಕೊರೊನಾ ಕಾಟದ ಜೊತೆಗೆ ಗಡಿ ವಿವಾದ ಸಹ ಅಂಟಿಕೊಂಡಿದೆ.

ಈ ನಡುವೆ, ಹೊಸ ವರ್ಷದಂದು ಭಾರತ ಚೀನಾವನ್ನು ಹಿಂದಿಕ್ಕಿ ಹೊಸ ದಾಖಲೆ ಸೃಷ್ಟಿಸಿದೆ. ಅದು ಯಾವುದರಲ್ಲಿ ಗೊತ್ತಾ? ಜನ ಸಂಖ್ಯೆಯಲ್ಲಿ.

ಚೀನಾ ಜನಸಂಖ್ಯೆಗೆ ಕಡಿವಾಣ?
ಹೌದು, ಜನವರಿ 1ರಂದು ದೇಶದಲ್ಲಿ 60,000 ಶಿಶುಗಳ ಜನನವಾಗಿದೆ. ಈ ಕುರಿತು UNICEFನಿಂದ ಅಂದಾಜು ಅಂಕಿ ಅಂಶ ಬಿಡುಗಡೆಯಾಗಿದೆ. ಅಂದ ಹಾಗೆ, ಚೀನಾದಲ್ಲಿ ಹೊಸ ವರ್ಷದಂದು ಹುಟ್ಟಿದ್ದ ಶಿಶುಗಳ ಸಂಖ್ಯೆ ಎಷ್ಟು ಗೊತ್ತಾ? ಕೇವಲ 35,615. ಈ ನಡುವೆ, ವಿಶ್ವದಾದ್ಯಂತ ಒಟ್ಟು 3,71,504 ಶಿಶುಗಳ ಜನನವಾಗಿದೆ ಎಂದು UNICEF ಅಂಕಿ ಅಂಶ ಬಿಡುಗಡೆಮಾಡಿದೆ.

ಚಾಮರಾಜನಗರದ ಮಹಿಳೆ ಕಟ್ಟಿಕೊಂಡ ಸುಂದರ-ಸದೃಢ ಮನೆಗೆ ಒಲಿಯಿತು ರಾಷ್ಟ್ರೀಯ ಪುರಸ್ಕಾರ; ಜಿಲ್ಲೆಗೆ ಕೀರ್ತಿ-ಹೆಮ್ಮೆ