ಹೊಸ ವರ್ಷದ ಸ್ವಾಗತಕ್ಕೆ ಪ್ರಧಾನಿ ನರೇಂದ್ರ ಮೋದಿ ಕವಿತೆ ‘ಈಗಷ್ಟೇ ಸೂರ್ಯ ಉದಯಿಸಿದ್ದಾನೆ’
ಪ್ರಧಾನಿ ನರೇಂದ್ರ ಮೋದಿಯವರ ಕವಿತೆಯನ್ನು ಟ್ವೀಟ್ ಮಾಡುವ ಮೂಲಕ ಭಾರತ ಸರ್ಕಾರವು ಹೊಸವರ್ಷಕ್ಕೆ ಸ್ವಾಗತ ಕೋರಿದೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಕವಿತೆಯನ್ನು ಟ್ವೀಟ್ ಮಾಡುವ ಮೂಲಕ ಭಾರತ ಸರ್ಕಾರವು ಹೊಸವರ್ಷಕ್ಕೆ ಸ್ವಾಗತ ಕೋರಿದೆ.
‘ಅಭೀ ತೋ ಸೂರಜ್ ಉಗಾ ಹೈ’ ಎಂಬ ಕವಿತೆಯನ್ನು ಕೇಂದ್ರ ಸರ್ಕಾರ ತನ್ನ ಟ್ವಿಟರ್ ಹ್ಯಾಂಡಲ್ನಲ್ಲಿ ಶೇರ್ ಮಾಡಿದೆ. ಮೇ 22, 2019ರಂದು ಮೋದಿಯವರ ಇದೇ ಕವಿತೆಯನ್ನು ಅಮೇಥಿಯ ಬಿಜೆಪಿ ಘಟಕ ಟ್ವೀಟ್ ಮಾಡಿತ್ತು.
Let's start our first day of the new year with a mesmerizing and motivating poem 'Abhi toh Suraj Uga hai', written by our beloved PM @narendramodi. @PIB_India @MIB_India @PMOIndia pic.twitter.com/9ajaqAX76w
— MyGovIndia (@mygovindia) January 1, 2021
ಮೋದಿ ಕವನದ ಕನ್ನಡ ಅನುವಾದ ಆಕಾಶದಲ್ಲಿ ತಲೆಯೆತ್ತಿ ದಟ್ಟ ಮೋಡಗಳನ್ನು ಸೀಳಿ ಬೆಳಕಿನ ಸಂಕಲ್ಪ ಮಾಡೋಣ
ದೃಢ ನಿಶ್ಚಯದೊಂದಿಗೆ ಮುಂದೆ ಸಾಗಿ ಎಲ್ಲ ಕಷ್ಟಗಳನ್ನು ಮೀರಿ ಗಾಢ ಇರುಳನ್ನು ಇಲ್ಲವಾಗಿಸಲು ಈಗಷ್ಟೇ ಸೂರ್ಯ ಉದಯಿಸಿದ್ದಾನೆ
ವಿಶ್ವಾಸದ ಕಿಡಿಯೊಂದನ್ನು ಬೆಳಗಿ ವಿಕಾಸದ ದೀಪವನ್ನು ಹಿಡಿದು ಕನಸನ್ನು ಸಾಕಾರಗೊಳಿಸಲು ಈಗಷ್ಟೇ ಸೂರ್ಯ ಉದಯಿಸಿದ್ದಾನೆ.
ನಮ್ಮವರು ಅಥವಾ ಪರರು ಎಂಬಂತಿಲ್ಲ ನಿನ್ನದು ನನ್ನದು ಎಂಬುದಿಲ್ಲ ಎಲ್ಲರ ಬೆಳಕಾಗಲು ಈಗಷ್ಚೇ ಸೂರ್ಯ ಉದಯಿಸಿದ್ದಾನೆ
ಬೆಂಕಿಯನ್ನು ಒಗ್ಗೂಡಿಸಿ ಪ್ರಕಾಶವನ್ನು ಹರಡಿ ನಡೆಯುತ್ತಾ ಮತ್ತು ನಡೆಸುತ್ತಾ ಈಗಷ್ಟೇ ಸೂರ್ಯ ಉದಯಿಸಿದ್ದಾನೆ
Published On - 5:30 pm, Fri, 1 January 21