Delhi Chalo ಮಹಿಳಾ ಚಳವಳಿಕಾರರ ಸಂಕಷ್ಟ ತಪ್ಪಿಸಲು ಜೈವಿಕ ಶೌಚಾಲಯ ನಿರ್ಮಿಸಿಕೊಟ್ಟ ಸರಕಾರೇತ ಸಂಸ್ಥೆ
ದೆಹಲಿ ಗಡಿಭಾಗದಲ್ಲಿ ಚಳುವಳಿ ನಿರತರಾಗಿರುವವರಲ್ಲಿ ಸಾವಿರಾರು ಮಹಿಳೆಯರೂ ಇದ್ದಾರೆ. ಅವರ ಸಂಕಷ್ಟ ಅರಿತ ಸರಕಾರೇತರ ಸಂಸ್ಥೆಯೊಂದು ಜೈವಿಕ ಶೌಚಾಲಯ ನಿರ್ಮಿಸಿಕೊಟ್ಟಿದೆ.
ದೆಹಲಿ: 37ನೇ ದಿನಕ್ಕೆ ಕಾಲಿಟ್ಟಿರುವ ದೆಹಲಿ ಚಲೋ ಚಳವಳಿಯನ್ನು ಹರಿಯಾಣ ಮತ್ತು ಪಂಜಾಬ್ನ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ಸಾವಿರಾರು ಮಹಿಳೆಯರು ಸೇರುತ್ತಿದ್ದಾರೆ. ಸಿಂಘು ಮತ್ತು ಟಿಕ್ರಿ ಗಡಿಗಳೆರಡನ್ನೂ ಸೇರಿಸಿ ಸುಮಾರು 18 ಸಾವಿರಕ್ಕೂ ಹೆಚ್ಚು ರೈತ ಚಳವಳಿಕಾರರಿದ್ದಾರೆಂದು ಅಂದಾಜಿಸಿಲಾಗಿದ್ದು, ಈ ಪೈಕಿ ಮಹಿಳೆಯರ ಸಂಖ್ಯೆಯೇನೂ ಕಡಿಮೆಯಿಲ್ಲ. ಹಾಗಾದರೆ, ಇಷ್ಟೊಂದು ಪ್ರಮಾಣದ ರೈತರು ಶೌಚ ಕ್ರಿಯೆಗೆ ಏನು ಮಾಡುತ್ತಿದ್ದಾರೆ ಎಂಬ ಆತಂಕದ ಪ್ರಶ್ನೆ ಎದುರಾಗುತ್ತದೆ. ಅದರಲ್ಲೂ ಚಳವಳಿ ನಿರತ ಮಹಿಳೆಯರ ಸಂಕಷ್ಟಗಳನ್ನು ಅರಿತ ಬೇಸಿಕ್ಶಿಟ್ ಎಂಬ ಸರಕಾರೇತರ ಸಂಸ್ಥೆಯೊಂದು ಜೈವಿಕ ಶೌಚಾಲಯಗಳನ್ನು ನಿರ್ಮಿಸಿದೆ.
‘ಚಳವಳಿ ನಡೆಯುತ್ತಿದ್ದ ರಸ್ತೆಯೊಂದರ ಚಿತ್ರದಲ್ಲಿ ಹೊಲಸು ತುಂಬಿರುವುದನ್ನು ನೋಡುತ್ತಿದ್ದೆ. ಆಗ ನಮ್ಮ ಸಂಸ್ಥೆಯಿಂದ ಜೈವಿಕ ಶೌಚಾಲಯಗಳನ್ನು ನಿರ್ಮಿಸಬಹುದು’ ಎಂದೆನಿಸಿತು. ಈಗಾಗಲೇ ನಾವು ಅಳವಡಿಸಿದ ಜೈವಿಕ ಶೌಚಾಲಯಗಳನ್ನು ನೂರಾರು ಮಹಿಳೆಯರು, ವೃದ್ಧರು ಮತ್ತು ವಿಶೇಷ ಚೇತನರು ಬಳಸುತ್ತಿದ್ದಾರೆ ಎಂದು ಬೇಸಿಕ್ಶಿಟ್ ಸಂಸ್ಥೆಯ ಸ್ಥಾಪಕಿ ಮತ್ತು ಸಿಇಒ ಅಶ್ವಿನಿ ಅಗರ್ವಾಲ್ ವಿವರಿಸುತ್ತಾರೆ.
ಈ ಜೈವಿಕ ಶೌಚಾಲಯಗಳನ್ನು ಎಲ್ಲಿ ಬೇಕಾದರೂ ಅಳವಡಿಸಬಹುದಾಗಿದ್ದು, ಒಂದು ಶೌಚಾಲಯಕ್ಕೆ 60,000 ರೂ ವೆಚ್ಚವಾಗುತ್ತದೆ. ರೈತ ಚಳವಳಿಕಾರರಿಗೆ ಜೈವಿಕ ಶೌಚಾಲಯದ ಅಳವಡಿಕೆ ಮತ್ತು ಬಳಕೆಯನ್ನು ತಿಳಿಸಿದ್ದು, ಇನ್ನಷ್ಟು ಶೌಚಾಲಯಗಳನ್ನು ಅಳವಡಿಸಲು ರೈತ ಚಳವಳಿಕಾರರು ಬೇಡಿಕೆಯಿಟ್ಟಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
ಪುರುಷರ ಮೂತ್ರಾಲಯವೂ ಸಿದ್ಧ ಪುರುಷರ ಮೂತ್ರಾಲಯಕ್ಕೂ ಸಂಸ್ಥೆ ಕ್ರಿಯಾತ್ಮಕ ಯೋಜನೆ ರೂಪಿಸಿದೆ. ಖಾಲಿಯಾದ ಅಡಿಗೆ ಎಣ್ಣೆ ಮತ್ತು ತುಪ್ಪಗಳ ಡಬ್ಬಗಳನ್ನು ರೈತರಿಂದ ಸಂಗ್ರಹಿಸಿ ಪುರುಷರ ಮೂತ್ರಾಲಯಗಳನ್ನು ನಿರ್ಮಿಸುತ್ತಿದ್ದೇವೆ ಎಂದು ಬೇಸಿಕ್ಶಿಟ್ ಸಂಸ್ಥೆ ತಿಳಿಸಿದೆ.
Published On - 5:38 pm, Fri, 1 January 21