ಕೇಕ್ ಕತ್ತರಿಸುವ ವಿಚಾರಕ್ಕೆ ಗುಂಪುಗಳ ಮಧ್ಯೆ ಗಲಾಟೆ.. ಗ್ರಾಮದಲ್ಲಿ ಗುಂಡಿನ ಮೊರೆತ, ಮುಂದೇನಾಯ್ತು?
ಹೊಸ ವರ್ಷ ಹಿನ್ನೆಲೆಯಲ್ಲಿ ಮೊದಲು ಕತ್ತರಿಸುವ ವಿಚಾರಕ್ಕೆ ವೈಸಿಪಿಯ 2 ಗುಂಪುಗಳ ಮಧ್ಯೆ ಗಲಾಟೆ ನಡೆದಿದೆ. ಈ ವೇಳೆ ಲಾಂಗು, ಗುಂಡುಗಳ ಮೊರೆತ ಕೇಳಿ ಬಂದಿದೆ.
ಹೈದರಾಬಾದ್: ಕೇಕ್ ಕತ್ತರಿಸುವ ವಿಚಾರಕ್ಕೆ 2 ಗುಂಪುಗಳ ಮಧ್ಯೆ ಭೀಕರ ಗಲಾಟೆ ನಡೆದು ಮನೆಯ ಆವರಣ ರಕ್ತಸಿಕ್ತವಾದ ಘಟನೆ ಆಂಧ್ರಪ್ರದೇಶದ ಕಡಪ ಜಿಲ್ಲೆಯ ಪಾಯಿಸಂಪಲ್ಲಿಯಲ್ಲಿ ನಡೆದಿದೆ. ಈ ವೇಳೆ ಲಾಂಗು, ಗುಂಡುಗಳ ಮೊರೆತ ಕೇಳಿ ಬಂದಿದೆ.
ಹೊಸ ವರ್ಷ ಹಿನ್ನೆಲೆಯಲ್ಲಿ ಮೊದಲು ಕತ್ತರಿಸುವ ವಿಚಾರಕ್ಕೆ ವೈಸಿಪಿಯ 2 ಗುಂಪುಗಳ ಮಧ್ಯೆ ಗಲಾಟೆ ನಡೆದಿದೆ. ನಿಮ್ಮಕಾಯಲ ಸುಧಾಕರ ರೆಡ್ಡಿ ಮತ್ತು ಮಹೇಶ್ವರ ರೆಡ್ಡಿ ಗುಂಪುಗಳ ನಡುವೆ ಈ ದಾಳಿ ನಡೆದಿದ್ದು ಅಧಿಪತ್ಯಕ್ಕಾಗಿ ಮೇಲುಗೈ ಸಾಧಿಸಲಿಕ್ಕಾಗಿ ಈ ದಾಳಿ ನಡೆದಿರುವುದು ಎಂದು ಹೇಳಲಾಗುತ್ತಿದೆ.
ಇನ್ನು ಈ ವೇಳೆ ಎರಡೂ ಗುಂಪುಗಳು ಕತ್ತಿ, ದೊಣ್ಣೆ, ಕಲ್ಲುಗಳಿಂದ ಹೊಡೆದಾಡುಕೊಂಡಿದ್ದಾರೆ. ದಾಳಿಯಲ್ಲಿ ನಿಮ್ಮಲಕಾಯ ಸುಧಾಕರ ರೆಡ್ಡಿ ಗುಂಪಿನ ಹಲವರಿಗೆ ಗಾಯವಾದ ಹಿನ್ನೆಲೆಯಲ್ಲಿ ನಿಮ್ಮಕಾಯಲ ಸುಧಾಕರ ರೆಡ್ಡಿ ಗುಂಡು ಹಾರಿಸಿದ್ದಾರೆ. ಹಾಗೂ ಸುಧಾಕರರೆಡ್ಡಿ ಹಾರಿಸಿದ ಗುಂಡಿನಿಂದ ಮಹೇಶ್ವರ ರೆಡ್ಡಿ ಗುಂಪಿನ ಹಲವರಿಗೆ ತೀವ್ರ ಗಾಯಗಳಾಗಿದ್ದು, ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸ್ ಬಿಗಿಭದ್ರತೆ ಕೈಗೊಳ್ಳಲಾಗಿದೆ.
ತಮಗೆ ಮತ ಹಾಕಲಿಲ್ಲ ಅಂತಾ ಗ್ರಾಮಸ್ಥನ ಮನೆಗೆ ನುಗ್ಗಿ.. ಮನಬಂದಂತೆ ಹಲ್ಲೆ ಮಾಡಿದ ಸಹೋದರರು, ಯಾವೂರಲ್ಲಿ?