ದೆಹಲಿಯ ತಾಪಮಾನ ಕೇಳಿದರೇ ಚಳಿ ಹುಟ್ಟುತ್ತೆ! 14 ವರ್ಷಗಳಲ್ಲೇ ಅತಿ ಕಡಿಮೆ ತಾಪಮಾನ ದಾಖಲು

ದೆಹಲಿ: ಕಳೆದ 14 ವರ್ಷಗಳಲ್ಲಿ ಕಂಡು ಕೇಳರಿಯದ ಚಳಿಗಾಲಕ್ಕೆ ರಾಷ್ಟ್ರ ರಾಜಧಾನಿ ಸಾಕ್ಷಿಯಾಗಿದೆ. ದೆಹಲಿಯ ತಾಪಮಾನ ಇಂದು ಮುಂಜಾನೆ 1.1 ಡಿಗ್ರಿ ಸೆಲ್ಸಿಯಸ್​ಗೆ ಕುಸಿದಿದ್ದು, ಕಳೆದ 14 ವರ್ಷಗಳಲ್ಲೇ ಅತಿ ಕಡಿಮೆ ತಾಪಮಾನ ಎಂಬ ಸ್ಥಾನಕ್ಕೆ ಇಂದಿನ ಬೆಳಗು ಪ್ರಾಪ್ತವಾಗಿದೆ. ಚಳಿಯ ಜತೆಗೆ ದಟ್ಟ ಮಂಜು ಸಹ ದೆಹಲಿಯ ಹೆದ್ದಾರಿಗಳನ್ನು ಆವರಿಸಿದೆ. 2006ರ ಜನವರಿ 8ರಂದು ಈವರೆಗಿನ ಅತಿ ಕಡಿಮೆ 0.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಈ ತಾಪಮಾನವೇ ದೆಹಲಿಯಲ್ಲಿ ದಾಖಲಾದ ಅತಿ ಕಡಿಮೆ ತಾಪಮಾನವಾಗಿದೆ. […]

ದೆಹಲಿಯ ತಾಪಮಾನ ಕೇಳಿದರೇ ಚಳಿ ಹುಟ್ಟುತ್ತೆ! 14 ವರ್ಷಗಳಲ್ಲೇ ಅತಿ ಕಡಿಮೆ ತಾಪಮಾನ ದಾಖಲು
2021ರ ಮೊದಲ ದಿನದ ಮುಂಜಾನೆ ಮಂಜು ಮುಸುಕಿದ ಹೆದ್ದಾರಿಯಲ್ಲಿ ಸಂಚರಿಸಲು ವಾಹನಗಳ ಪರದಾಟ
guruganesh bhat

| Edited By: sadhu srinath

Jan 01, 2021 | 11:50 AM

ದೆಹಲಿ: ಕಳೆದ 14 ವರ್ಷಗಳಲ್ಲಿ ಕಂಡು ಕೇಳರಿಯದ ಚಳಿಗಾಲಕ್ಕೆ ರಾಷ್ಟ್ರ ರಾಜಧಾನಿ ಸಾಕ್ಷಿಯಾಗಿದೆ. ದೆಹಲಿಯ ತಾಪಮಾನ ಇಂದು ಮುಂಜಾನೆ 1.1 ಡಿಗ್ರಿ ಸೆಲ್ಸಿಯಸ್​ಗೆ ಕುಸಿದಿದ್ದು, ಕಳೆದ 14 ವರ್ಷಗಳಲ್ಲೇ ಅತಿ ಕಡಿಮೆ ತಾಪಮಾನ ಎಂಬ ಸ್ಥಾನಕ್ಕೆ ಇಂದಿನ ಬೆಳಗು ಪ್ರಾಪ್ತವಾಗಿದೆ.

ಚಳಿಯ ಜತೆಗೆ ದಟ್ಟ ಮಂಜು ಸಹ ದೆಹಲಿಯ ಹೆದ್ದಾರಿಗಳನ್ನು ಆವರಿಸಿದೆ. 2006ರ ಜನವರಿ 8ರಂದು ಈವರೆಗಿನ ಅತಿ ಕಡಿಮೆ 0.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಈ ತಾಪಮಾನವೇ ದೆಹಲಿಯಲ್ಲಿ ದಾಖಲಾದ ಅತಿ ಕಡಿಮೆ ತಾಪಮಾನವಾಗಿದೆ. ಹಿಂದಿನ ವರ್ಷ 2.4 ಡಿಗ್ರಿ ಸೆಲ್ಸಿಯಸ್ ತಾಪಮಾನವೇ ಅತಿ ಕಡಿಮೆ ತಾಪಮಾನವಾಗಿತ್ತು.

ಅತಿ ಹೆಚ್ಚು ಮಂಜು ಆವರಿಸಿದಾದಗ 0 ದಿಂದ 50 ಮೀಟರ್​ವರೆಗಿನ ದೃಶ್ಯವನ್ನು ನೋಡಬಹುದು. ಆದರೆ ಇಂದು ಮುಂಜಾನೆ ಆರು ಘಂಟೆಯ ಮಂಜಿಗೆ ಕಿಂಚಿತ್ ದೂರವೂ ಕಣ್ಣಿಗೆ ಗೋಚರವಾಗುತ್ತಿರಲಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆಯ ಮುಖ್ಯಸ್ಥ ಕುಲ್ದೀಪ್ ಶ್ರೀವಾಸ್ತವ್ ತಿಳಿಸಿದ್ದಾರೆ. ಹಿಮಾಲಯದ ಕಡೆಯಿಂದ ಬೀಸುವ ಶೀತ ಮಾರುತಗಳು ಈ ಪ್ರಮಾಣದ ಚಳಿಯನ್ನು ಸೃಷ್ಟಿಸುತ್ತಿವೆ ಎಂದಿರುವ ಅವರು, ಜನವರಿ 5ರವರೆಗೆ ಸರಾಸರಿ 8 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗುವ ನಿರೀಕ್ಷೆಯಿದೆ ಎಂದಿದ್ದಾರೆ.

ಈ ಡಿಸೆಂಬರ್​ನ ಕನಿಷ್ಠ ಸರಾಸರಿ ತಾಪಮಾನ 7.1ಡಿಗ್ರಿ ಸೆಲ್ಸಿಯಸ್​ ಆಗಿದ್ದರೆ 2019ರ ಡಿಸೆಂಬರ್​ನಲ್ಲಿ 7.8 ಡಿಗ್ರಿ ಕನಿಷ್ಠ ಸರಾಸರಿ ತಾಪಮಾನ ದಾಖಲಾಗಿತ್ತು.

ಚುಮು ಚುಮು ಚಳಿ, ಫಳಫಳ ಮಂಜು: ಸ್ವೆಟರ್ ತೊಟ್ಟ ಉತ್ತರ ಭಾರತ!

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada