ಕೇರಳದ ಪಾಲಕ್ಕಾಡ್​ನಲ್ಲಿ ಭೀಕರ ಅಪಘಾತ; ಸರ್ಕಾರಿ ಬಸ್​​ಗೆ ಶಾಲಾ ಮಕ್ಕಳಿದ್ದ ಬಸ್​ ಡಿಕ್ಕಿ ಹೊಡೆದು 9 ಜನ ಸಾವು

ಕೇರಳದ ಪಲಕ್ಕಾಡ್‌ನಲ್ಲಿ ಪ್ರವಾಸಿ ವಾಹನ ಮತ್ತು ಸರ್ಕಾರಿ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ 6 ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಮೂವರು ಕೆಎಸ್‌ಆರ್‌ಟಿಸಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ.

ಕೇರಳದ ಪಾಲಕ್ಕಾಡ್​ನಲ್ಲಿ ಭೀಕರ ಅಪಘಾತ; ಸರ್ಕಾರಿ ಬಸ್​​ಗೆ ಶಾಲಾ ಮಕ್ಕಳಿದ್ದ ಬಸ್​ ಡಿಕ್ಕಿ ಹೊಡೆದು 9 ಜನ ಸಾವು
ಕೇರಳದಲ್ಲಿ ಬಸ್ ಅಪಘಾತ
Edited By:

Updated on: Oct 06, 2022 | 12:15 PM

ಪಾಲಕ್ಕಾಡ್: ಕೇರಳದ ಪಾಲಕ್ಕಾಡ್‌ನ (Palakkad) ವಡಕ್ಕೆಂಚೇರಿ ಪ್ರದೇಶದಲ್ಲಿ ಪ್ರವಾಸಿ ವಾಹನವು ಕೇರಳ ಸರ್ಕಾರಿ ಬಸ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ 9 ಜನರು ಸಾವನ್ನಪ್ಪಿದ್ದಾರೆ. ಬುಧವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ (Road Accident) ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಪ್ರವಾಸಿ ಬಸ್ ಕೆಎಸ್​ಆರ್​ಟಿಸಿ (KSRTC Bus) ಬಸ್​ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಶಾಲಾ ಬಸ್ ಮಂಗಲಂ ಬಳಿಯ ವಡಕ್ಕೆಂಚೇರಿಯಲ್ಲಿ ಪ್ರಪಾತಕ್ಕೆ ಉರುಳಿ 9 ಜನರು ಸಾವನ್ನಪ್ಪಿದ್ದಾರೆ ಮತ್ತು 35 ಜನರು ಗಾಯಗೊಂಡಿದ್ದಾರೆ.

ಕೇರಳದ ಪಾಲಕ್ಕಾಡ್‌ನಲ್ಲಿ ಪ್ರವಾಸಿ ವಾಹನ ಮತ್ತು ಸರ್ಕಾರಿ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ 9 ಜನರು ಸಾವನ್ನಪ್ಪಿದ್ದಾರೆ. ಪಾಲಕ್ಕಾಡ್‌ನ ವಡಕ್ಕೆಂಚೇರಿ ಪ್ರದೇಶದಲ್ಲಿ ಬುಧವಾರ ರಾತ್ರಿ ಈ ಅಪಘಾತ ಸಂಭವಿಸಿದೆ. ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಪ್ರವಾಸಿ ಬಸ್ ವಡಕ್ಕೆಂಚೇರಿಯಲ್ಲಿ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್​ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ 6 ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಮೂವರು ಕೆಎಸ್‌ಆರ್‌ಟಿಸಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಇನ್ನೂ 35 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಹರತಾಳ ವೇಳೆ ಸಾರ್ವಜನಿಕ ಆಸ್ತಿ ಹಾನಿ: ₹5.20 ಕೋಟಿ ಠೇವಣಿ ಇಡುವಂತೆ ಪಿಎಫ್ಐಗೆ ಆದೇಶಿಸಿದ ಕೇರಳ ಹೈಕೋರ್ಟ್

ಪ್ರವಾಸಿ ಬಸ್ ಎರ್ನಾಕುಲಂ ಜಿಲ್ಲೆಯ ಬಸೆಲಿಯೋಸ್ ವಿದ್ಯಾನಿಕೇತನದಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಕರೆದುಕೊಂಡು ತಮಿಳುನಾಡಿನ ಊಟಿ ಕಡೆಗೆ ಹೊರಟಿತ್ತು. KSRTC ಬಸ್ ಕೊಯಮತ್ತೂರು ಕಡೆಗೆ ಹೋಗುತ್ತಿತ್ತು. ರಾಷ್ಟ್ರೀಯ ಹೆದ್ದಾರಿ 544ರಲ್ಲಿ ಬುಧವಾರ ರಾತ್ರಿ 11.30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:14 am, Thu, 6 October 22