ಹರತಾಳ ವೇಳೆ ಸಾರ್ವಜನಿಕ ಆಸ್ತಿ ಹಾನಿ: ₹5.20 ಕೋಟಿ ಠೇವಣಿ ಇಡುವಂತೆ ಪಿಎಫ್ಐಗೆ ಆದೇಶಿಸಿದ ಕೇರಳ ಹೈಕೋರ್ಟ್

ಪಿಎಫ್‌ಐ ಹರತಾಳ ಪ್ರಕರಣದ ಆಧಾರದ ಮೇಲೆ ಜಾಮೀನು ಅರ್ಜಿ ಬಂದಾಗಲೆಲ್ಲಾ ಹಾನಿಗೊಳಗಾದ ಆಸ್ತಿಯಿಂದ ನಷ್ಟವಾದ ಮೊತ್ತವನ್ನು ಠೇವಣಿ ಮಾಡುವ ಷರತ್ತಿನ ಮೇಲೆ ಜಾಮೀನು ನೀಡಬೇಕು ಎಂದು...

ಹರತಾಳ ವೇಳೆ ಸಾರ್ವಜನಿಕ ಆಸ್ತಿ ಹಾನಿ: ₹5.20 ಕೋಟಿ ಠೇವಣಿ ಇಡುವಂತೆ ಪಿಎಫ್ಐಗೆ ಆದೇಶಿಸಿದ ಕೇರಳ ಹೈಕೋರ್ಟ್
ಕೇರಳ ಹೈಕೋರ್ಟ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Sep 29, 2022 | 4:15 PM

ತಿರುವನಂತಪುರಂ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಗೆ (PFI) ನಡೆಸಿದ ಹರತಾಳದ ವೇಳೆ ರಾಜ್ಯ ಸರ್ಕಾರ ಮತ್ತು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಆಸ್ತಿ ಹಾನಿಗೆ ಮಾಡಿದ ವೆಚ್ಚವನ್ನು ಭರಿಸಲು ₹5.20 ಕೋಟಿ ಠೇವಣಿ ಇರಿಸುವಂತೆ ಪಿಎಫ್ಐಗೆ ಕೇರಳ ಹೈಕೋರ್ಟ್ (Kerala High Court) ಗುರುವಾರ ಆದೇಶಿಸಿದೆ. ಸೆಪ್ಟೆಂಬರ್ 23 ರಂದು ಪಿಎಫ್ಐ ಸಂಘಟನೆ ಕೇರಳದಲ್ಲಿ ದಿಢೀರ್ ಹರತಾಳ ನಡೆಸಿದ್ದು, ಈ ವೇಳೆ ಕೆಎಸ್‌ಆರ್‌ಟಿಸಿ ಬಸ್​​ಗಳ ಮೇಲೆ ಕಲ್ಲುತೂರಾಟ ನಡೆದಿತ್ತು.  ನ್ಯಾಯಮೂರ್ತಿ ಎಕೆ ಜಯಶಂಕರನ್ ನಂಬಿಯಾರ್ ಮತ್ತು ಮೊಹಮ್ಮದ್ ನಿಯಾಸ್ ಸಿಪಿ ಅವರ ವಿಭಾಗೀಯ ಪೀಠ ಈ ಆದೇಶ ನೀಡಿದ್ದು, ನ್ಯಾಯಾಲಯದ ಪೂರ್ವ ನಿರ್ದೇಶನವನ್ನು ನೇರವಾಗಿ ಧಿಕ್ಕರಿಸಿ ಹರತಾಳದಲ್ಲಿ ತೊಡಗುವ ರಾಜಕೀಯ ಪಕ್ಷಗಳು ಗಂಭೀರ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ ಎಂದಿದೆ. ಯಾವುದೇ ರಾಜಕೀಯ ಪಕ್ಷಗಳಾಗಲೀ ರಾಜ್ಯದಲ್ಲಿ ದಿಢೀರ್ ಹರತಾಳ ನಡೆಸುವಂತಿಲ್ಲ. ಸಾಮಾನ್ಯ ಜನರ ಜೀವನಕ್ಕೆ ಈ ರೀತಿ ತೊಂದರೆ ಕೊಡುವಂತಿಲ್ಲ. ಈ ಸಂದೇಶ ದೃಢ ಮತ್ತು ಸ್ಪಷ್ಟವಾಗಿದೆ. ಯಾರೇ ಆಗಲಿ,ಈ ರೀತಿ ಮಾಡಿದರೆ ಪರಿಣಾಮ ಎದುರಿಸಲೇಬೇಕಾಗುತ್ತದೆ ಎಂದು ಪೀಠ ಹೇಳಿದೆ.  ಯಾವುದಾದರೂ ವಿಷಯ ಬಗ್ಗೆ ಸಂಘಟನೆಗಳು ಪ್ರತಿಭಟನೆ ನಡೆಸಬಹುದು, ಅದನ್ನು ಸಂವಿಧಾನ ಅನುಮತಿಸುತ್ತದೆ. ಆದರೆ ದಿಢೀರ್ ಹರತಾಳಗಳು ನಡೆಸುವಂತಿಲ್ಲ. ಯಾವುದೇ ಪ್ರತಿಭಟನೆ ಸಾರ್ವಜನಿಕರ ಸಂಚಾರಕ್ಕೆ ಅಂದರೆ ರಸ್ತೆ ತಡೆ ಅಥವಾ ಟ್ರಾಫಿಕ್ ಸಮಸ್ಯೆ ಉಂಟುಮಾಡುವುದಾದರೆ ಅಂಥಾ ಪ್ರತಿಭಟನೆಗಳನ್ನು ಅನುಮತಿಸುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಕ್ಲೈಮ್ ಕಮೀಷನರ್ ನ್ನು ಈಗಾಗಲೇ ಆಯ್ಕೆ ಮಾಡಲಾಡಗಿದ್ದು, ಈ ಕ್ಲೈಮ್ ಗಳನ್ನು ಪರಿಹರಿಸಲು ಪಿಎಫ್ಐ ಎಷ್ಟು ಪಾವತಿ ಮಾಡಬೇಕು ಎಂದು ಅವರ ನಿರ್ಧರಿಸುತ್ತಾರೆ ಎಂದು ನ್ಯಾಯಾಲಯ ಹೇಳಿದೆ. ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರ ಮುಂದೆ ಪಿಎಫ್ಐ ಈ ಹಣ ಠೇವಣಿ ಇಡಲು ವಿಫಲವಾದರೆ ರಾಜ್ಯ ಸರ್ಕಾರ ಪ್ರಸ್ತುತ ಸಂಘಟನೆಯಿಂದ ವಸೂಲಿ ಮಾಡುವ ಪ್ರಕ್ರಿಯೆ ನಡೆಸಲಿದೆ ಎಂದು ನ್ಯಾಯಾಲಯ ಹೇಳಿದೆ.

ಪಿಎಫ್‌ಐ ಹರತಾಳ ಪ್ರಕರಣದ ಆಧಾರದ ಮೇಲೆ ಜಾಮೀನು ಅರ್ಜಿ ಬಂದಾಗಲೆಲ್ಲಾ ಹಾನಿಗೊಳಗಾದ ಆಸ್ತಿಯಿಂದ ನಷ್ಟವಾದ ಮೊತ್ತವನ್ನು ಠೇವಣಿ ಮಾಡುವ ಷರತ್ತಿನ ಮೇಲೆ ಜಾಮೀನು ನೀಡಬೇಕು ಎಂದು ನ್ಯಾಯಾಲಯ ಮ್ಯಾಜಿಸ್ಟ್ರೇಟ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಸೂಚನೆ ನೀಡಿದೆ. ಹರತಾಳದ ಸಂದರ್ಭದಲ್ಲಿ ಉಂಟಾದ ಹಾನಿಗಳಿಗೆ ಸಂಬಂಧಿಸಿದಂತೆ ಹಲವಾರು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದ ಕಾರಣ ಇದನ್ನು ಮಾಡಲಾಗಿದೆ.

ಅಗತ್ಯವಿರುವ 7 ದಿನಗಳ ನೋಟಿಸ್ ನೀಡದೆ ಪಿಎಫ್‌ಐ ಹರತಾಳಕ್ಕೆ ಕರೆ ನೀಡಿದ್ದನ್ನು ಗಮನಿಸಿದ ಕೇರಳ ಹೈಕೋರ್ಟ್, ಹರತಾಳಕ್ಕೆ ಕರೆ ನೀಡಿದ ಸೆಪ್ಟೆಂಬರ್ 23 ರಂದು ಸ್ವಯಂ ಪ್ರೇರಿತ ಅರ್ಜಿ ವಿಚಾರಣೆ ಪ್ರಕ್ರಿಯೆಯಲ್ಲಿ ಈ ತೀರ್ಪು ನೀಡಿದೆ.

ಹರತಾಳದ ವೇಳೆ  ಪ್ರತಿಭಟನಾಕಾರರಿಂದ 5 ಕೋಟಿ ಆರು ಲಕ್ಷ ರೂಪಾಯಿ ನಷ್ಟ ಉಂಟಾಗಿದ್ದು, ಪರಿಹಾರ ನೀಡಬೇಕು ಎಂದು ಕೆಎಸ್‌ಆರ್‌ಟಿಸಿ ಹೈಕೋರ್ಟ್‌ ಮೆಟ್ಟಿಲೇರಿತ್ತು. ಪರಿಹಾರ ವಸೂಲಿ ಮಾಡುವಂತೆ ನ್ಯಾಯಾಲಯ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೆಎಸ್‌ಆರ್‌ಟಿಸಿ ಆಗ್ರಹಿಸಿತ್ತು.  ಕೆಎಸ್‌ಆರ್‌ಟಿಸಿಯ ನಷ್ಟ ಮತ್ತು ಆದಾಯ ನಷ್ಟವನ್ನು  ಪ್ರತಿಭಟನಾಕಾರರಿಂದ ವಸೂಲಿ ಮಾಡಿ ವಿಸ್ತೃತ ವರದಿ ಸಲ್ಲಿಸುವಂತೆ ಹೈಕೋರ್ಟ್ ಈ ಹಿಂದೆ ಸರ್ಕಾರಕ್ಕೆ ಸೂಚಿಸಿತ್ತು. ಹರತಾಳದ ವೇಳೆ  ಪ್ರತಿಭಚನಾಕಾರರು  58  ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಧ್ವಂಸಗೊಳಿಸಿದ್ದು, 10 ನೌಕರರು ಗಾಯಗೊಂಡಿದ್ದಾರೆ ಎಂದು ರಾಜ್ಯ  ಸಾರಿಗೆ ಸಂಸ್ಥೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.

Published On - 2:46 pm, Thu, 29 September 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್