ಅಸ್ಸಾಂನ ಧುಬ್ರಿ ಜಿಲ್ಲೆಯಲ್ಲಿ ದೋಣಿ ಮುಳುಗಿ 7 ಮಂದಿ ನಾಪತ್ತೆ; ಮುಂದುವರಿದ ರಕ್ಷಣಾ ಕಾರ್ಯಾಚರಣೆ
ಧುಬ್ರಿ-ಫುಲ್ಬರಿ ಸೇತುವೆಯ ಬಳಿ ಸಣ್ಣ ಕಾಲುವೆ ಇದೆ. ತಂಡವು ಮರದ ದೋಣಿಯಲ್ಲಿ ಈ ಕಾಲುವೆ ದಾಟುತ್ತಿದ್ದಾಗ ಡಿಕ್ಕಿ ಹೊಡೆದು ದೋಣಿ ಮಗುಚಿದೆ...
ಗುರುವಾರ ಅಸ್ಸಾಂನ (Assam) ಧುಬ್ರಿ ಜಿಲ್ಲೆಯ ಬ್ರಹ್ಮಪುತ್ರ (Brahmaputra) ನದಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆಯ ಬಳಿ ಸವೆತದ ತಪಾಸಣೆಗಾಗಿ ತಂಡವನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿದ್ದು ಅಧಿಕಾರಿ ಸೇರಿದಂತೆ ಕನಿಷ್ಠ ಏಳು ಜನರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಧುಬ್ರಿ-ಫುಲ್ಬರಿ ಸೇತುವೆಯ ಬಳಿ ಸಣ್ಣ ಕಾಲುವೆ ಇದೆ. ತಂಡವು ಮರದ ದೋಣಿಯಲ್ಲಿ ಈ ಕಾಲುವೆ ದಾಟುತ್ತಿದ್ದಾಗ ಡಿಕ್ಕಿ ಹೊಡೆದು ದೋಣಿ ಮಗುಚಿತು ಎಂದು ಧುಬ್ರಿ ಜಿಲ್ಲಾಧಿಕಾರಿ ಎಂ.ಪಿ.ಅನ್ಬಮುತ್ತನ್ ತಿಳಿಸಿದ್ದಾರೆ. ದೋಣಿಯಲ್ಲಿ ಸುಮಾರು 25 ಮಂದಿ ಇದ್ದರು ಅವರಲ್ಲಿ ಹಲವರು ಧುಬ್ರಿ ಸರ್ಕಲ್ ಆಫೀಸಿನಿಂದ ಬಂದವರು ಎಂದು ಅವರು ಹೇಳಿದ್ದಾರೆ. ದೋಣಿಯಲ್ಲಿ ಕನಿಷ್ಠ 100 ಮಂದಿ ಇದ್ದು, ಹೆಚ್ಚಿನವರು ಶಾಲಾ ಮಕ್ಕಳು . ಅದರಲ್ಲಿ 10 ಮೋಟರ್ ಸೈಕಲ್ ಕೂಡಾ ಇತ್ತು ಎಂದು ಹೇಳಲಾಗುತ್ತಿದೆ. ಪಿಟಿಐ ಸುದ್ದಿಸಂಸ್ಥೆ ಪ್ರಕಾರ, ಜಿಲ್ಲೆಯ ಹಿರಿಯ ಅಧಿಕಾರಿಗಳು ಈ ಅವಘಡದಲ್ಲಿ ನಾಪತ್ತೆಯಾಗಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾಪಡ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ಶೋಧ ಕಾರ್ಯ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.ಸ್ಥಳೀಯರು ಸ್ಥಳೀಯ ದೋಣಿಯ ಸಹಾಯದಿಂದ ರಕ್ಷಣಾಕಾರ್ಯದಲ್ಲಿ ನಿರತರಾಗಿದ್ದಾರೆ.
ಭಶಾನಿ ಮೂಲದ ಈ ದೋಣಿ ಧುಬ್ರಿಯಿಂದ ಮೂರು ಕಿಮೀ ದೂರವಿರುವ ಅಡಾಬರಿಯಲ್ಲಿರುವ ಸೇತುವೆಯ ಕಂಬಕ್ಕೆ ಡಿಕ್ಕಿ ಹೊಡೆದು ಮಗುಚಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಇಲ್ಲಿಯವರೆಗೆ 15 ಮಂದಿಯನ್ನು ರಕ್ಷಿಸಲಾಗಿದೆ.
“ಧುಬ್ರಿ ಜಿಲ್ಲೆಯಲ್ಲಿ ದೋಣಿಯೊಂದು ಬ್ರಹ್ಮಪುತ್ರ ನದಿಯಲ್ಲಿ ಮುಳುಗಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಾಯಲಾಗುತ್ತಿದೆ” ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜ್ಞಾನೇಂದ್ರ ದೇವ್ ತ್ರಿಪಾಠಿ ಹೇಳಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.
ಹಲವಾರು ಶಾಲಾ ಮಕ್ಕಳು ದೋಣಿಯಲ್ಲಿದ್ದರು. ಇಲ್ಲಿಯವರೆಗೆ ಯಾರನ್ನೂ ರಕ್ಷಿಸಲಾಗಿಲ್ಲ ಎಂದು ಅವರು ಹೇಳಿದರು. ಧುಬ್ರಿ ಸರ್ಕಲ್ ಆಫೀಸರ್ ಸಂಜು ದಾಸ್, ಭೂ ದಾಖಲೆ ಅಧಿಕಾರಿ ಮತ್ತು ಕಚೇರಿ ಸಿಬ್ಬಂದಿ ಸಹ ಸವೆತ ಪೀಡಿತ ಪ್ರದೇಶವನ್ನು ಸಮೀಕ್ಷೆ ಮಾಡಲು ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು. ದಾಸ್ ನಾಪತ್ತೆಯಾಗಿದ್ದು, ಇನ್ನಿಬ್ಬರು ಈಜಿ ದಡ ಸೇರಿದ್ದಾರೆ.
Published On - 1:45 pm, Thu, 29 September 22