AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಡಿಯಲ್ಲಿ ಕಾಡುತ್ತಿದ್ದವರಿಗೆ ತಕ್ಕ ಪಾಠ ಕಲಿಸಿದ ಸೇನೆ, ಒಂದೇ ದಿನ 9 ಉಗ್ರರು ಫಿನಿಶ್

ದೆಹಲಿ: ಅತ್ತ ಕೊರೊನಾ ಅನ್ನೋ ಡೆಡ್ಲಿ ವೈರಸ್ ಇಡೀ ದೇಶವನ್ನು ಕಾಡುತ್ತಿದೆ. ಮತ್ತೊಂದ್ಕಡೆ ಟೆರರಿಸ್ಟ್ ಅನ್ನೋ ವೈರಸ್​ಗಳು ದೇಶದ ಗಡಿಯನ್ನ ಹರಿದು ಮುಕ್ಕಲು ಕಾಯ್ತಿದ್ದಾರೆ. ಇಂತಹ ದುಷ್ಟರಿಗೆ ಸಿಂಹಸ್ವಪ್ನವಾಗಿರುವ ನಮ್ಮ ವೀರ ಯೋಧರು ಭಯೋತ್ಪಾದಕರ ಹೆಡೆ ಮುರಿ ಕಟ್ಟಿ, ಅವರನ್ನೆಲ್ಲಾ ಯಮಪುರಿಗೆ ಅಟ್ಟಿದ್ದಾರೆ. ಜಮ್ಮುಕಾಶ್ಮೀರ ಗಡಿಯನ್ನ ಬಿಟ್ಟೂ ಬಿಡದೆ ಕಾಡುತ್ತಿರುವ ಪಾಕ್ ಪ್ರೇರೇಪಿತ ಆಗಂತುಕರು ಪದೇ ಪದೆ ಕೊಲೆ, ಸುಲಿಗೆಗಳನ್ನ ಮಾಡ್ತಾನೆ ಬಂದಿದ್ದಾರೆ. ಅತ್ತ ಡ್ರ್ಯಾಗನ್ ರಾಷ್ಟ್ರದ ಕಿತಾಪತಿಯಾದ್ರೆ, ಮತ್ತೊಂದ್ಕಡೆ ಇಷ್ಟು ದಿನ ತೆಪ್ಪಗಿದ್ದ ನೇಪಾಳವೂ ಕಿತಾಪತಿ […]

ಗಡಿಯಲ್ಲಿ ಕಾಡುತ್ತಿದ್ದವರಿಗೆ ತಕ್ಕ ಪಾಠ ಕಲಿಸಿದ ಸೇನೆ, ಒಂದೇ ದಿನ 9 ಉಗ್ರರು ಫಿನಿಶ್
ಸಾಧು ಶ್ರೀನಾಥ್​
| Edited By: |

Updated on:Jun 09, 2020 | 10:33 AM

Share

ದೆಹಲಿ: ಅತ್ತ ಕೊರೊನಾ ಅನ್ನೋ ಡೆಡ್ಲಿ ವೈರಸ್ ಇಡೀ ದೇಶವನ್ನು ಕಾಡುತ್ತಿದೆ. ಮತ್ತೊಂದ್ಕಡೆ ಟೆರರಿಸ್ಟ್ ಅನ್ನೋ ವೈರಸ್​ಗಳು ದೇಶದ ಗಡಿಯನ್ನ ಹರಿದು ಮುಕ್ಕಲು ಕಾಯ್ತಿದ್ದಾರೆ. ಇಂತಹ ದುಷ್ಟರಿಗೆ ಸಿಂಹಸ್ವಪ್ನವಾಗಿರುವ ನಮ್ಮ ವೀರ ಯೋಧರು ಭಯೋತ್ಪಾದಕರ ಹೆಡೆ ಮುರಿ ಕಟ್ಟಿ, ಅವರನ್ನೆಲ್ಲಾ ಯಮಪುರಿಗೆ ಅಟ್ಟಿದ್ದಾರೆ.

ಜಮ್ಮುಕಾಶ್ಮೀರ ಗಡಿಯನ್ನ ಬಿಟ್ಟೂ ಬಿಡದೆ ಕಾಡುತ್ತಿರುವ ಪಾಕ್ ಪ್ರೇರೇಪಿತ ಆಗಂತುಕರು ಪದೇ ಪದೆ ಕೊಲೆ, ಸುಲಿಗೆಗಳನ್ನ ಮಾಡ್ತಾನೆ ಬಂದಿದ್ದಾರೆ. ಅತ್ತ ಡ್ರ್ಯಾಗನ್ ರಾಷ್ಟ್ರದ ಕಿತಾಪತಿಯಾದ್ರೆ, ಮತ್ತೊಂದ್ಕಡೆ ಇಷ್ಟು ದಿನ ತೆಪ್ಪಗಿದ್ದ ನೇಪಾಳವೂ ಕಿತಾಪತಿ ಶುರುವಿಟ್ಟುಕೊಂಡಿದೆ. ಈ ನಡುವೆ ನಂದೇನು ಕಡಿಮೆ ಅಂತಾ ಪಾಕಿಸ್ತಾನ ಕೂಡ ಭಾರತಕ್ಕೆ ತೊಂದರೆ ಕೊಡ್ತಾನೆ ಬಂದಿದೆ. ಈ ಕಿತಾಪತಿಗಳಿಗೆ ನಿನ್ನೆ ಸರಿಯಾಗಿಯೇ ರೀಪ್ಲೇ ಕೊಟ್ಟ ಭಾರತದ ಯೋಧರು, 9 ಉಗ್ರರನ್ನ ಹೊಡೆದುರುಳಿಸಿದ್ದಾರೆ.

ಹೌದು ಭಾರತದಲ್ಲಿ ‘ಕೊರೊನಾ’ ಆತಂಕದ ಮಧ್ಯೆ ಜಮ್ಮುಕಾಶ್ಮೀರದಲ್ಲಿ ಉಗ್ರರ ಉಪಟಳ ಮುಂದುವರಿದಿದೆ. ಕೊರೊನಾ ಬಿಕ್ಕಟ್ಟನ್ನೇ ಬಂಡವಾಳ ಮಾಡಿಕೊಂಡು ವಿದ್ವಂಸಕ ಕೃತ್ಯ ಎಸಗಲು ಹುನ್ನಾರ ನಡೆದಿದೆ. ಆದ್ರೆ ಭಾರತೀಯ ಸೈನಿಕರು ಉಗ್ರರಿಗೆ ತಕ್ಕ ಉತ್ತರ ನೀಡುತ್ತಿದ್ದಾರೆ. ನಿನ್ನೆ ಜಮ್ಮುಕಾಶ್ಮೀರದ ಶೋಪಿಯಾನ್​ನಲ್ಲಿ ಉಗ್ರರು ಮತ್ತು ಭಾರತೀಯ ಸೇನೆಯ ನಡುವೆ ಕಾಳಗ ನಡೆದಿದ್ದು ಒಂದೇ ದಿನದಲ್ಲಿ 2 ಬಾರಿ ಎನ್​ಕೌಂಟರ್ ಆಗಿದೆ.

9 ಉಗ್ರರು ಫಿನಿಶ್: ಈ ಕಾಳಗದಲ್ಲಿ 9 ಉಗ್ರರನ್ನ ಸೇನೆ ಹೊಡೆದು ಉರುಳಿಸಿದೆ. ದಕ್ಷಿಣ ಕಾಶ್ಮೀರದ ಪಿನ್ಜೋರಾ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿದ್ದಾರೆಂಬ ಮಾಹಿತಿ ಪಡೆದ ಭದ್ರತಾಪಡೆ ಆ ಜಾಗ ಸುತ್ತುವರಿದು ಶೋಧ ನಡೆಸಿತ್ತು. ಶೋಧಕಾರ್ಯ ನಡೆಸುತ್ತಿದ್ದ ವೇಳೆ ಉಗ್ರರು ಭದ್ರತಾ ಪಡೆಯ ಮೇಲೆ ಗುಂಡಿನ ದಾಳಿ ನಡೆಸಿದ್ರು. ಆಗ ಭದ್ರತಾ ಪಡೆ ನಡೆಸಿದ ಪ್ರತಿದಾಳಿಯಲ್ಲಿ 9 ಉಗ್ರರು ಫಿನಿಶ್ ಆಗಿದ್ದಾರೆ.

ಒಟ್ನಲ್ಲಿ ಪದೇ ಪದೆ ಕಿರಿಕ್ ಮಾಡುತ್ತಾ ನಮ್ಮ ಸೇನೆಯನ್ನ ಕಾಡುತ್ತಿದ್ದವರಿಗೆ ತಕ್ಕಪಾಠ ಕಲಿಸಲಾಗಿದೆ. ಆದ್ರೆ ಯುವಕರು ಉಗ್ರ ಸಂಘಟನೆಗಳಿಗೆ ಸೇರಬಾರದು ಅನ್ನೋ ಕಾರಣಕ್ಕೆ ಜಾರಿಯಲ್ಲಿರುವ ಹೊಸ ನಿಯಮದನ್ವಯ, ಮೃತಪಟ್ಟಿರುವ ಆಗಂತುಕರ ಹೆಸರುಗಳನ್ನು ಬಹಿರಂಗ ಮಾಡಿಲ್ಲ. ಆದರೆ ಕಾಶ್ಮೀರದಲ್ಲಿ ಮಾತ್ರ ‘ಆಪರೇಷನ್ ಆಲ್​ಔಟ್’ ನಡೀತಾನೆ ಇದೆ.

Published On - 7:38 am, Tue, 9 June 20