AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಯ್ಸ್ ಲಾಕರ್ ರೂಮ್ ಬಟಾಬಯಲು ಮಾಡಿದ್ದ ಯುವತಿಗೆ ಜೀವಬೆದರಿಕೆ, FIR ದಾಖಲು!

ಇಡೀ ದೇಶದ ಗಮನವನ್ನು ಸೆಳೆದಿದ್ದ ಬಾಯ್ಸ್ ಲಾಕರ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೆಹಲಿ ಪೊಲೀಸರು ಮತ್ತೊಂದು ದೂರನ್ನು ದಾಖಲಿಸಿಕೊಂಡಿದ್ದಾರೆ. ಯುವತಿಯರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಚ್ಯಾಟ್ ಗಳನ್ನು ಮಾಡುತ್ತಿದ್ದ ಯುವಕರ ತಂಡವೊಂದರ ದುಷ್ಕೃತ್ಯವನ್ನು ಬಯಲಿಗೆಳೆದಿದ್ದ ಯುವತಿ ನೀಡಿರುವ ದೂರಿನನ್ವಯ ದೆಹಲಿ ಪೊಲೀಸರ ಸೈಬರ್ ಸೆಲ್ ವಿಭಾಗವು ಎಫ್ಐಆರ್ ದಾಖಲಿಸಿಕೊಂಡಿದೆ. ಸೋಷಿಯಲ್ ಮೀಡಿಯಾದಲ್ಲಿ ಅಪರಿಚಿತರಿಂದ ತನಗೆ ಬೆದರಿಕೆ ಸಂದೇಶಗಳು ಬರುತ್ತಿವೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ಮೇ ತಿಂಗಳಲ್ಲಿ ಎಲ್ಲರ ಗಮನ ಸೆಳೆದಿದ್ದ ಈ ಪ್ರಕರಣವು ಬಾಯ್ಸ್ ಲಾಕರ್ […]

ಬಾಯ್ಸ್ ಲಾಕರ್ ರೂಮ್ ಬಟಾಬಯಲು ಮಾಡಿದ್ದ ಯುವತಿಗೆ ಜೀವಬೆದರಿಕೆ, FIR ದಾಖಲು!
ಸಾಧು ಶ್ರೀನಾಥ್​
|

Updated on:Jun 08, 2020 | 6:11 PM

Share

ಇಡೀ ದೇಶದ ಗಮನವನ್ನು ಸೆಳೆದಿದ್ದ ಬಾಯ್ಸ್ ಲಾಕರ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೆಹಲಿ ಪೊಲೀಸರು ಮತ್ತೊಂದು ದೂರನ್ನು ದಾಖಲಿಸಿಕೊಂಡಿದ್ದಾರೆ. ಯುವತಿಯರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಚ್ಯಾಟ್ ಗಳನ್ನು ಮಾಡುತ್ತಿದ್ದ ಯುವಕರ ತಂಡವೊಂದರ ದುಷ್ಕೃತ್ಯವನ್ನು ಬಯಲಿಗೆಳೆದಿದ್ದ ಯುವತಿ ನೀಡಿರುವ ದೂರಿನನ್ವಯ ದೆಹಲಿ ಪೊಲೀಸರ ಸೈಬರ್ ಸೆಲ್ ವಿಭಾಗವು ಎಫ್ಐಆರ್ ದಾಖಲಿಸಿಕೊಂಡಿದೆ. ಸೋಷಿಯಲ್ ಮೀಡಿಯಾದಲ್ಲಿ ಅಪರಿಚಿತರಿಂದ ತನಗೆ ಬೆದರಿಕೆ ಸಂದೇಶಗಳು ಬರುತ್ತಿವೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

ಮೇ ತಿಂಗಳಲ್ಲಿ ಎಲ್ಲರ ಗಮನ ಸೆಳೆದಿದ್ದ ಈ ಪ್ರಕರಣವು ಬಾಯ್ಸ್ ಲಾಕರ್ ಪ್ರಕರಣವೆಂದೇ ಕುಖ್ಯಾತಿ ಪಡೆದಿತ್ತು. ಸೋಷಿಯಲ್ ಮೀಡಿಯಾದ ಇನ್ಸ್ಟಾಗ್ರಾಮ್ನ ಚ್ಯಾಟ್ ಗ್ರೂಪ್ವೊಂದಾಗಿದ್ದ ಬಾಯ್ಸ್ ಲಾಕರ್ನಲ್ಲಿ ಹುಡುಗಿಯರ ಬಗ್ಗೆ ಅಶ್ಲೀಲ ಚರ್ಚೆಗಳನ್ನು ನಡೆಸುವುದಲ್ಲದೆ ಚ್ಯಾಟ್ ಗ್ರೂಪ್ನ ಇತರೆ ಸದಸ್ಯರಿಗೆ ಹುಡುಗಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸುವಂತೆ ಪ್ರಚೋದನೆ ಸಹ ನೀಡಲಾಗುತ್ತಿತ್ತು. 17ರಿಂದ 19ರ ಹರೆಯದ ಹುಡುಗರಿದ್ದ ಈ ಚ್ಯಾಟ್ ಗ್ರೂಪ್ನಲ್ಲಿ ಯುವತಿಯರ ಅಶ್ಲೀಲ ಫೋಟೋಗಳನ್ನು ಸಹ ಪೋಸ್ಟ್ ಮಾಡಲಾಗುತ್ತಿತ್ತು.

ಮೇ ತಿಂಗಳಲ್ಲಿ ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಸಾರವಾಗುತ್ತಿದ್ದಂತೆ ದೆಹಲಿ ಪೊಲೀಸರ ಸೈಬರ್ ಸೆಲ್ ವಿಭಾಗ ಮೊದಲನೇ ದೂರು ದಾಖಲಿಸಿಕೊಂಡು ಚ್ಯಾಟ್ ಗ್ರೂಪ್ನ ಅಡ್ಮಿನಿಸ್ಟ್ರೇಟರ್ನನ್ನು ಬಂಧಿಸಿತ್ತು. ಜೊತೆಗೆ ಗುಂಪಿನ ಇತರೆ ಯುವಕರನ್ನು ಸಹ ವಿಚಾರಣೆಗೆ ಒಳಪಡಿಸಿತ್ತು. ಈ ಮಧ್ಯೆ ಗ್ರೂಪ್​ನ ಸದಸ್ಯನೊಬ್ಬ ಹದಿಹರೆಯದ ಯುವಕ ಅಪಾರ್ಟ್​ಮೆಂಟ್​ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಮಧ್ಯೆ, ದೆಹಲಿಯ ಮಹಿಳಾ ಆಯೋಗವು ಕೂಡ ಇನ್ಸ್ಟಾಗ್ರಾಮ್ ಸಂಸ್ಥೆ ಹಾಗೂ ದೆಹಲಿ ಪೊಲೀಸರಿಗೆ ನೋಟಿಸ್ ಸಹ ನೀಡಿತ್ತು. ಜೊತೆಗೆ, ದೆಹಲಿ ಹೈ ಕೋರ್ಟ್ ಸಹ ಈ ಪ್ರಕರಣದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸುವಂತೆ ಪೊಲೀಸರಿಗೆ ತಾಕೀತು ಮಾಡಿತ್ತು.

ಇದೀಗ ಪ್ರಕರಣವನ್ನು ಬಯಲಿಗೆಳೆದ ಯುವತಿಗೆ ಬೆದರಿಕೆ ಸಂದೇಶಗಳು ಬಂದಿರುವ ಹಿನ್ನೆಲೆಯಲ್ಲಿ ಪೊಲೀಸರು ಸೂಕ್ತ ಕ್ರಮವನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆ. ತನಿಖೆ ಚುರುಕುಗೊಳಿಸಿ ಇಂಥ ಕಿಡಿಗೇಡಿಗಳನ್ನು ಮಟ್ಟಹಾಕಬೇಕಿದೆ.

Published On - 5:12 pm, Mon, 8 June 20