ಮತ್ತೊಂದು ಭಾರೀ ನೈಸರ್ಗಿಕ ದುರಂತ: ಅನಿಲ ಸೋರಿಕೆಯಾಗುತ್ತಲೇ ಇದೆ! ಗ್ರಾಮಸ್ಥರ ಎತ್ತಂಗಡಿ

ಮೇ 27 ರಂದು ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯಲ್ಲಿ ನೈಸರ್ಗಿಕ ಅನಿಲ ಬಾವಿಯಲ್ಲಿ ಸ್ಫೋಟ ಸಂಭವಿಸಿದ್ದು, ಅಂದಿನಿಂದ ನಿರಂತರವಾಗಿ ನೈಸರ್ಗಿಕ ಅನಿಲ ಸೋರಿಕೆಯಾಗುತ್ತಲೇ ಇದೆ. ಅನಿಲ ಬಾವಿಯಲ್ಲಿನ ಸ್ಫೋಟವನ್ನು ನಿಯಂತ್ರಿಸುವ ಪ್ರಯತ್ನದಲ್ಲಿ, ಸಿಂಗಾಪುರ ಮೂಲದ ತಜ್ಞರ ತಂಡ ಅನಿಲ ಸೋರಿಕೆ ನಿಯಂತ್ರಣ ಮಾಡುವ ಕಾರ್ಯದಲ್ಲಿ ತೊಡಗಿದೆ. ಸುತ್ತಮುತ್ತಲಿನ ಗ್ರಾಮಗಳಲ್ಲಿನ 2500ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ನೈಸರ್ಗಿಕ ಅನಿಲ ಸೋರಿಕೆಯಿಂದಾಗಿ, ವಿವಿಧ ರೀತಿಯ ಮೀನುಗಳು ಮತ್ತು ಅಳಿವಿನಂಚಿನಲ್ಲಿರುವ ಡಾಲ್ಫಿನ್‌, ಜಲಚರಗಳು ಸಾಯಬಹುದು ಎಂಬ ಭಯ ಉಂಟಾಗಿದೆ. ಅನಿಲ ಬಾವಿ ಎಲ್ಲಿದೆ? […]

ಮತ್ತೊಂದು ಭಾರೀ ನೈಸರ್ಗಿಕ ದುರಂತ: ಅನಿಲ ಸೋರಿಕೆಯಾಗುತ್ತಲೇ ಇದೆ! ಗ್ರಾಮಸ್ಥರ ಎತ್ತಂಗಡಿ
Follow us
ಆಯೇಷಾ ಬಾನು
|

Updated on:Jun 08, 2020 | 2:40 PM

ಮೇ 27 ರಂದು ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯಲ್ಲಿ ನೈಸರ್ಗಿಕ ಅನಿಲ ಬಾವಿಯಲ್ಲಿ ಸ್ಫೋಟ ಸಂಭವಿಸಿದ್ದು, ಅಂದಿನಿಂದ ನಿರಂತರವಾಗಿ ನೈಸರ್ಗಿಕ ಅನಿಲ ಸೋರಿಕೆಯಾಗುತ್ತಲೇ ಇದೆ. ಅನಿಲ ಬಾವಿಯಲ್ಲಿನ ಸ್ಫೋಟವನ್ನು ನಿಯಂತ್ರಿಸುವ ಪ್ರಯತ್ನದಲ್ಲಿ, ಸಿಂಗಾಪುರ ಮೂಲದ ತಜ್ಞರ ತಂಡ ಅನಿಲ ಸೋರಿಕೆ ನಿಯಂತ್ರಣ ಮಾಡುವ ಕಾರ್ಯದಲ್ಲಿ ತೊಡಗಿದೆ.

ಸುತ್ತಮುತ್ತಲಿನ ಗ್ರಾಮಗಳಲ್ಲಿನ 2500ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ನೈಸರ್ಗಿಕ ಅನಿಲ ಸೋರಿಕೆಯಿಂದಾಗಿ, ವಿವಿಧ ರೀತಿಯ ಮೀನುಗಳು ಮತ್ತು ಅಳಿವಿನಂಚಿನಲ್ಲಿರುವ ಡಾಲ್ಫಿನ್‌, ಜಲಚರಗಳು ಸಾಯಬಹುದು ಎಂಬ ಭಯ ಉಂಟಾಗಿದೆ.

ಅನಿಲ ಬಾವಿ ಎಲ್ಲಿದೆ? Blowout ಎಂದರೇನು? ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯ ಬಾಗ್ಜನ್ ಗ್ರಾಮದಲ್ಲಿರುವ ಬಾವಿಯಲ್ಲಿ ಸ್ಫೋಟ ಸಂಭವಿಸಿದೆ. ಇದು ಸಂಪೂರ್ಣವಾಗಿ ಅನಿಲ ಉತ್ಪಾದಿಸುವ ಬಾವಿ. 2006ರಲ್ಲಿ ಆಯಿಲ್ ಇಂಡಿಯಾ ಲಿಮಿಟೆಡ್ (ಒಐಎಲ್) ನೈಸರ್ಗಿಕ ಅನಿಲವನ್ನು ಕೊರೆಯಲು ಆರಂಭಿಸಿತ್ತು.

ಇದು 3,870 ಮೀಟರ್ ಆಳದಿಂದ ದಿನಕ್ಕೆ ಸುಮಾರು 80,000 ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್ (ಎಸ್‌ಸಿಎಂಡಿ) ಅನಿಲವನ್ನು ಉತ್ಪಾದಿಸುತ್ತದೆ. Blowout ಎಂದರೆ ಸಡನ್ ಆಗಿ ಹಾಗೂ ನಿಯಂತ್ರಿಸಲಾಗದೆ ಅನಿಲ ಬಿಡುಗಡೆಯಾಗುವುದು ಎಂದರ್ಥ. Blowout ಅನ್ನು ನಿಯಂತ್ರಿಸಲು, ಮೊದಲು ನೀರಿನಲ್ಲಿ ಪಂಪ್ ಮಾಡಬೇಕು. ಇದರಿಂದಾಗಿ ಅನಿಲವು ಬೆಂಕಿಯನ್ನು ಹಿಡಿಯುವುದಿಲ್ಲ.

Published On - 12:47 pm, Mon, 8 June 20