AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯ ಇಸ್ರೇಲಿ ರಾಯಭಾರಿ ಕಚೇರಿ ಬಳಿ ಸ್ಫೋಟ: ಸಿಸಿಟಿವಿಯಲ್ಲಿ ಕಾಣಿಸಿಕೊಂಡ ಆ ಇಬ್ಬರು ಯಾರು?

ಸ್ಫೋಟಗೊಂಡ ಜಾಗದಲ್ಲಿ ಪತ್ರವೊಂದು ಸಿಕ್ಕಿದ್ದು, ಅದರದಲ್ಲಿ ಕಳೆದ ವರ್ಷ ಜನವರಿಯಲ್ಲಿ ಅಮೆರಿಕ ಸೇನೆಯ ದಾಳಿ ವೇಳೆ ಹತ್ಯೆಯಾದ ಇರಾನ್​ನ ಮೇಜರ್​ ಜನರಲ್​ ಆಗಿದ್ದ ಖಾಸಿಂ ಸುಲೇಮಾನಿ ಹೆಸರನ್ನು ಬರೆಯಲಾಗಿದೆ.

ದೆಹಲಿಯ ಇಸ್ರೇಲಿ ರಾಯಭಾರಿ ಕಚೇರಿ ಬಳಿ ಸ್ಫೋಟ: ಸಿಸಿಟಿವಿಯಲ್ಲಿ ಕಾಣಿಸಿಕೊಂಡ ಆ ಇಬ್ಬರು ಯಾರು?
ದೆಹಲಿಯಲ್ಲಿ ಪೊಲೀಸ್ ಕಟ್ಟೆಚ್ಚರ
Lakshmi Hegde
| Edited By: ಸಾಧು ಶ್ರೀನಾಥ್​|

Updated on: Jan 30, 2021 | 11:45 AM

Share

ದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿರುವ ಇಸ್ರೇಲಿ ರಾಯಭಾರಿ ಕಚೇರಿ ಬಳಿ ನಿನ್ನೆ ನಡೆದ ಸ್ಫೋಟಕ್ಕೆ ಸಂಬಂಧಪಟ್ಟಂತೆ ತನಿಖೆ ಚುರುಕುಗೊಂಡಿದೆ. ಈ ಮಧ್ಯೆ ನಿನ್ನೆ ಕ್ಯಾಬ್​ನಲ್ಲಿ ಬಂದ ಇಬ್ಬರು ರಾಯಭಾರಿ ಕಚೇರಿ ಎದುರು ಇಳಿದುಕೊಂಡಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಸ್ಫೋಟದಲ್ಲಿ ಈ ಇಬ್ಬರ ಪಾತ್ರ ಇದೆಯಾ? ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ದೊಡ್ಡದಾದ ಯಾವುದೋ ಸ್ಫೋಟದ ಸಂಚಿಗೆ ಪೂರ್ವಭಾವಿಯಾಗಿ ಇದೊಂದು ಪ್ರಯೋಗ ಎಂದು ಮೂಲಗಳು ತಿಳಿಸಿದ್ದು, ಸದ್ಯ ದೆಹಲಿಯಲ್ಲಿ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ. ನಿನ್ನೆಯ ಸ್ಫೋಟಕದಲ್ಲಿ ಅಮೋನಿಯಂ ನೈಟ್ರೇಟ್​ ಬಳಕೆಯಾಗಿದೆ ಎಂದು ವಿಧಿವಿಜ್ಞಾನ ತಂಡ ತಿಳಿಸಿದೆ. ಅಲ್ಲದೆ, ಸ್ಫೋಟಗೊಂಡ ಜಾಗದಲ್ಲಿ ಸಣ್ಣ ಕಂದಕವೂ ಉಂಟಾಗಿದೆ. ಒಂದೊಮ್ಮೆ ಆರ್​ಡಿಎಕ್​ ಸ್ಫೋಟಕವಾಗಿದ್ದರೆ, ಪರಿಣಾಮ ಇನ್ನೂ ಗಂಭೀರವಾಗಿರುತ್ತಿತ್ತು ಎನ್ನಲಾಗಿದೆ.

ಇನ್ನು ಸ್ಫೋಟಗೊಂಡ ಜಾಗದಲ್ಲಿನ ಪ್ರತ್ಯೇಕ ಸಿಸಿಟಿವಿ ಫೂಟೇಜ್​, ಅರ್ಧ ಸುಟ್ಟ ಗುಲಾಬಿ ಬಣ್ಣದ ಸ್ಕಾರ್ಫ್​ ಮತ್ತು ಇಸ್ರೇಲಿ ರಾಯಭಾರಿ ವಿಳಾಸ ಬರೆದಿದ್ದ ಎನ್ವೆಲಪ್​ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲಿಯೇ ಪಕ್ಕದಲ್ಲಿದ್ದ ಮರದ ಹಿಂದೆ ಕ್ಯಾಮರಾವೊಂದನ್ನು ಅಳವಡಿಸಿದ್ದನ್ನು ಪತ್ತೆಹಚ್ಚಲಾಗಿದೆ. ಈ ಕ್ಯಾಮರಾ ಫೂಟೇಜ್​ಗಳು ಸ್ಪಷ್ಟವಾಗಿಲ್ಲ, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹಾಗೇ ಈ ಎಲ್ಲ ವಸ್ತುಗಳ ಮೇಲಿನ ಫಿಂಗರ್​ಪ್ರಿಂಟ್ ಚೆಕ್​ ಕೂಡ ಮಾಡಲಾಗುತ್ತಿದೆ.

ಇಸ್ರೇಲಿ ರಾಯಭಾರಿ ಕಚೇರಿಗೆ ರಕ್ಷಣೆ ದೆಹಲಿಯ ಇಸ್ರೇಲಿ ರಾಯಭಾರಿ ಕಚೇರಿ ಬಳಿ ಕಡಿಮೆ ತೀವ್ರತೆಯ ಸ್ಫೋಟ ಉಂಟಾದ ಬೆನ್ನಲ್ಲೇ, ಕಚೇರಿಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಇಸ್ರೇಲಿ ರಾಯಭಾರಿ ಕಚೇರಿಗೆ ಅಷ್ಟೇ ಅಲ್ಲ, ದೆಹಲಿ ಅನೇಕ ಸೂಕ್ಷ್ಮ ಪ್ರದೇಶಗಳಲ್ಲಿ ಬಂದೋಬಸ್ತ್​ ಹೆಚ್ಚಿಸಲಾಗಿದೆ.

ಇರಾನಿಯನ್​ ಲಿಂಕ್​ ಸ್ಫೋಟಗೊಂಡ ಜಾಗದಲ್ಲಿ ಪತ್ರವೊಂದು ಸಿಕ್ಕಿದ್ದು, ಅದರದಲ್ಲಿ ಕಳೆದ ವರ್ಷ ಜನವರಿಯಲ್ಲಿ ಅಮೆರಿಕ ಸೇನೆಯ ದಾಳಿ ವೇಳೆ ಹತ್ಯೆಯಾದ ಇರಾನ್​ನ ಮೇಜರ್​ ಜನರಲ್​ ಆಗಿದ್ದ ಖಾಸಿಂ ಸುಲೇಮಾನಿ ಹೆಸರನ್ನು ಬರೆಯಲಾಗಿದೆ. ಅಷ್ಟೇ ಅಲ್ಲ, ಇದು ಟ್ರೇಲರ್​ ಅಷ್ಟೇ ಎಂಬ ಎಚ್ಚರಿಕೆಯ ವಾಕ್ಯವೂ ಇದೆ.

ದೆಹಲಿಯ ಇಸ್ರೇಲ್‌ ರಾಯಭಾರ ಕಚೇರಿ ಬಳಿ IED ಸ್ಫೋಟ: ವಾಹನದಲ್ಲಿ ಬಂದು ಬಾಂಬ್​ ಎಸೆದು ಹೋಗಿರುವ ಶಂಕೆ

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ