ಭರ್ಜರಿ ಉಡುಪುಗಳಿಲ್ಲ, ಚಿನ್ನದ ಒಡವೆಯನ್ನಂತೂ ಕೇಳ್ಬೇಡಿ..; ಪಿಪಿಇ ಕಿಟ್​ ಧರಿಸಿಯೇ ಸಪ್ತಪದಿ ತುಳಿದ ಜೋಡಿ

|

Updated on: Apr 27, 2021 | 10:59 AM

ಮದುವೆಗೆ ಮುಹೂರ್ತ ನಿಗದಿಯಾಗಿಹೋಗಿತ್ತು. ಆದರೆ ಏಪ್ರಿಲ್ 19ರಂದು ವರನಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಮದುವೆಯನ್ನು ಮುಂದೂಡುವಂತೆಯೂ ಇರಲಿಲ್ಲ.

ಭರ್ಜರಿ ಉಡುಪುಗಳಿಲ್ಲ, ಚಿನ್ನದ ಒಡವೆಯನ್ನಂತೂ ಕೇಳ್ಬೇಡಿ..; ಪಿಪಿಇ ಕಿಟ್​ ಧರಿಸಿಯೇ ಸಪ್ತಪದಿ ತುಳಿದ ಜೋಡಿ
ಪಿಪಿಇ ಕಿಟ್ ಧರಿಸಿ ಸಪ್ತಪದಿ ತುಳಿದ ಜೋಡಿ
Follow us on

ಮೊನ್ನೆಯಷ್ಟೇ ಕೇರಳದಲ್ಲಿ ಆಸ್ಪತ್ರೆಯೊಂದರ ಕೊವಿಡ್​ 19 ವಾರ್ಡ್​ನಲ್ಲಿ ಮದುವೆಯೊಂದು ನಡೆದಿತ್ತು. ಕೊವಿಡ್​ ಸೋಂಕು ಪಾಸಿಟಿವ್​ ಬಂದು ಆಸ್ಪತ್ರೆಗೆ ಅಡ್ಮಿಟ್ ಆಗಿದ್ದ ವರನನ್ನು ವಧು ಪಿಪಿಇ ಕಿಟ್​ ಧರಿಸಿ ಬಂದು ವರಿಸಿದ್ದಳು. ಈಗ ಅಂಥದ್ದೇ ಒಂದು ಮದುವೆ ಮಧ್ಯಪ್ರದೇಶದ ರತ್ಲಮ್​ನಲ್ಲಿ ನಡೆದಿದೆ. ಇಲ್ಲೂ ಸಹ ವರನಿಗೆ ಕೊವಿಡ್​ 19 ಸೋಂಕು ತಗುಲಿದ್ದರಿಂದ ಇಬ್ಬರೂ ಪಿಪಿಇ ಕಿಟ್ ಧರಿಸಿ ಮದುವೆಯಾಗಿದ್ದಾರೆ.

ವಧು -ವರರು ಪಿಪಿಇ ಕಿಟ್ ಧರಿಸಿ ವಿವಾಹವಾದ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಮದುವೆಯಲ್ಲಿ ವಧು-ವರರು ಸಾಂಪ್ರದಾಯಿಕ ಉಡುಪುಗಳನ್ನು ಧರಿಸುವುದು ಪದ್ಧತಿ. ಆದರೆ ಕೊರೊನಾ ಸಂಕಷ್ಟದಿಂದಾಗಿ ಈ ಜೋಡಿ ಪಿಪಿಇ ಕಿಟ್​ ಧರಿಸಿ ವಿವಾಹವಾಗಬೇಕಾಯಿತು. ಇವರಿಬ್ಬರೂ ಅಗ್ನಿಕುಂಡದ ಸುತ್ತ ತಿರುಗುವಾಗ ಹಿನ್ನೆಲೆಯಲ್ಲಿ ಮಂತ್ರಗಳ ಪಠಣೆಯನ್ನೂ ಕೇಳಬಹುದು.

ಮದುವೆಗೆ ಮುಹೂರ್ತ ನಿಗದಿಯಾಗಿಹೋಗಿತ್ತು. ಆದರೆ ಏಪ್ರಿಲ್ 19ರಂದು ವರನಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಮದುವೆಯನ್ನು ಮುಂದೂಡುವಂತೆಯೂ ಇರಲಿಲ್ಲ. ಹೀಗಾಗಿ ಸ್ಥಳೀಯ ಹಿರಿಯ ಅಧಿಕಾರಿಗಳ ಅನುಮತಿ ಪಡೆದು ಈ ಜೋಡಿ ವಿವಾಹವಾಗಿದೆ. ನಾವು ಒಪ್ಪಿಗೆ ಕೊಡಲೇಬೇಕಾಯಿತು. ಆದರೆ ಪಿಪಿಇ ಕಿಟ್ ಧರಿಸಿ, ಕೊವಿಡ್ 19 ಮುನ್ನೆಚ್ಚರಿಕಾ ಕ್ರಮದೊಂದಿಗೆ ಮದುವೆಯಾಗಬೇಕು ಎಂದು ಷರತ್ತು ವಿಧಿಸಲಾಗಿತ್ತು. ಈ ಷರತ್ತಿನಂತೆ ಜೋಡಿ ಮದುವೆಯಾಗಿದ್ದಾರೆ ಎಂದು ರತ್ಲಮ್​​ನ ತಹಸೀಲ್ದಾರ್​ ತಿಳಿಸಿದ್ದಾರೆ.

ದೇಶದ ಎಲ್ಲ ರಾಜ್ಯಗಳಲ್ಲೂ ಕೊವಿಡ್​ ಸೋಂಕು ಹೆಚ್ಚುತ್ತಿರುವ ಕಾರಣಕ್ಕೆ ಕಠಿಣ ನಿಯಮಗಳನ್ನು ಜಾರಿ ಮಾಡಲಾಗಿದೆ. ಮಧ್ಯಪ್ರದೇಶದಲ್ಲಿ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ಜನರು ಗುಂಪುಗೂಡುವಂತಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದೆ. ಮದುವೆ ಕಾರ್ಯಕ್ರಮಕ್ಕೆ ಕೇವಲ 50 ಜನರು ಮಾತ್ರ ಸೇರಬಹುದು ಎಂದು ಸೂಚನೆ ಇದೆ. ಇನ್ನು ಇಲ್ಲಿನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮತ್ತೊಂದು ಐಡಿಯಾ ಮಾಡಿದ್ದಾರೆ. ಯಾವ ಜೋಡಿ ಕೇವಲ 10 ಜನ ಅತಿಥಿಗಳ ಸಮ್ಮುಖದಲ್ಲಿ ಮದುವೆಯಾಗುತ್ತಾರೋ, ಅವರಿಗೆ ನಮ್ಮ ಮನೆಯಲ್ಲೇ ಆತಿಥ್ಯ, ಔತಣಕೂಟ ವಹಿಸುವುದಾಗಿಯೂ ಹೇಳಿಕೊಂಡಿದ್ದಾರೆ. ಈ ಮೂಲಕ ಜನರು ಗುಂಪುಗೂಡುವುದನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ: ನಿರ್ಮಾಪಕ ಕೋಟಿ ರಾಮು ಅಂತ್ಯಕ್ರಿಯೆಗೆ ಕುಣಿಗಲ್​ನಲ್ಲಿ ಸಕಲ ಸಿದ್ಧತೆ

ನಾಲ್ಕು ತಿಂಗಳಲ್ಲಿ ಹುಬ್ಬಳ್ಳಿಯ ತೋಳನಕೆರೆ ಉದ್ಯಾನವನ ಲೋಕಾರ್ಪಣೆಗೊಳ್ಳುತ್ತದೆ; ಪ್ರಹ್ಲಾದ್ ಜೋಶಿ ಮಾಹಿತಿ

A couple in got married in PPE suits In Madhya Pradesh Watch Video

Published On - 10:58 am, Tue, 27 April 21