ಪ್ರಾಣಿಗಳಂತೆ ಆಸ್ಪತ್ರೆಯ ಮಂಚಕ್ಕೆ ಕಟ್ಟಿಹಾಕಿರುವ ಪತಿಯನ್ನು ಬಿಡಿಸುವಂತೆ ಭಾರತದ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದ ಕಪ್ಪನ್ ಪತ್ನಿ
ಹತ್ರಾಸ್ನಲ್ಲಿ ದಲಿತ ಮಹಿಳೆಯೊಬ್ಬರು ನಾಲ್ವರು ಸವರ್ಣೀಯರಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಮರಣ ಹೊಂದಿದ ಆರೋಪದ ಹಿನ್ಲೆಲೆಯಲ್ಲಿ ಅಕೆಯ ಮನೆಯವರನ್ನು ಭೆಟಿಯಾಗಲು ಕಳೆದ ವರ್ಷ ಅಕ್ಟೋಬರ್ನಲ್ಲಿ ಕಪ್ಪನ್ ಅವರು ಹತ್ರಾಸ್ಗೆ ತೆರಳುತ್ತಿದ್ದಾಗ ಅವರನ್ನು ಬಂಧಿಸಲಾಗಿತ್ತು.
ಉತ್ತರ ಪ್ರದೇಶದಲ್ಲಿರುವ ಹತ್ರಾಸ್ಗೆ ಹೋಗುವ ಸಂದರ್ಭದಲ್ಲಿ ಆ ರಾಜ್ಯದ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಕೇರಳದ ಪತ್ರಕರ್ತ ಸಿದ್ದಿಖ್ ಕಪ್ಪನ್ ಅವರ ಪತ್ನಿಯು ಭಾರತದ ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ಎನ್ ವಿ ರಣ ಅವಿರಗ ಪತ್ರವೊಂದನ್ನು ಬರೆದು ಆಸ್ಪತ್ರಯಲ್ಲಿರುವ ತಮ್ಮ ಪತಿಯನ್ನು ಶೀಘ್ರ ಬಿಡುಗಡೆ ಮಾಡಬೇಕೆಂದು ಕೋರಿದ್ದಾರಲ್ಲದೆ, ಅವರನ್ನು ಆಸ್ಪತ್ರೆಯ ಮಂಚಕ್ಕೆ ಸರಪಳಿಯಿಂದ ಪ್ರಾಣಿಗಳ ಹಾಗೆ ಕಟ್ಟಿಹಾಕಲಾಗಿದೆ ಎಂದು ಹೇಳಿದ್ದಾರೆ.
ಹತ್ರಾಸ್ನಲ್ಲಿ ದಲಿತ ಮಹಿಳೆಯೊಬ್ಬರು ನಾಲ್ವರು ಸವರ್ಣೀಯರಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಮರಣ ಹೊಂದಿದ ಆರೋಪದ ಹಿನ್ಲೆಲೆಯಲ್ಲಿ ಅಕೆಯ ಮನೆಯವರನ್ನು ಭೆಟಿಯಾಗಲು ಕಳೆದ ವರ್ಷ ಅಕ್ಟೋಬರ್ನಲ್ಲಿ ಕಪ್ಪನ್ ಅವರು ಹತ್ರಾಸ್ಗೆ ತೆರಳುತ್ತಿದ್ದಾಗ ಅವರನ್ನು ಬಂಧಿಸಲಾಗಿತ್ತು. ಏಪ್ರಿಲ್ 21ರಂದು ಕೊರೊನಾ ಸೋಂಕು ದೃಢಪಟ್ಟ ನಂತರ ಮಥುರಾದ ಮೆಡಿಕಲ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ.
ಮುಖ್ಯ ನ್ಯಾಯಾಧೀಶರಿಗೆ ಬರೆದಿರುವ ಪತ್ರದಲ್ಲಿ ರೈಹಂತ್ ಕಪ್ಪನ್ ಅವರು, ಎಪ್ರಿಲ್ 20 ರಂದು ಅವರ ಪತಿ ಜೈಲಿನ ಬಾತ್ರೂಮಲ್ಲಿ ಜಾರಿ ಬಿದ್ದು ಗಾಯಗೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ಸೇರಿಸಿದ ಒಂದು ದಿನದ ನಂತರ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ ಎಂದು ಹೇಳಿದ್ದಾರೆ. ‘ಏಪ್ರಿಲ್ 21 ರಂದು ಕಪ್ಪಣ್ ಅವರನ್ನು ಮಥುರಾದ ಕೆ ಎಮ್ ಮೆಡಿಕಲ್ ಕಾಲೇಜಿಗೆ ಸ್ಥಳಾಂತರಿಸಿದ್ದು ಅವರನ್ನು ಪ್ರಾಣಿಗಳ ಹಾಗೆ ಅಸ್ಪತ್ರೆಯ ಮಂಚಕ್ಕೆ ಅಲ್ಲಾಡದಂತೆ ಸರಪಣಿಯಿಂದ ಕಟ್ಟಿಹಾಕಲಾಗಿದೆ, 4 ದಿಗಳಿಂದ ಅವರು ಊಟ ಮಾಡಿಲ್ಲ, ಬಾತ್ರೂಮಿಗೂ ಹೋಗಿಲ್ಲ,’ ಎಂದು ಪತ್ರದಲ್ಲಿ ಹೇಳಿರುವ ಶ್ರೀಮತಿ ಕಪ್ಪನ್ ತಮ್ಮ ಪತಿಯ ಸ್ಥಿತಿ ಚಿಂತಾಜನಕವಾಗಿದೆ ಎಂದಿದ್ದಾರೆ.
‘ಸೂಕ್ತ ಕ್ರಮಗಳನ್ನು ಕೂಡಲೇ ಕೈಗೊಳ್ಳದಿದ್ದರೆ ತಮ್ಮ ಪತಿ ಅಕಾಲಿಕ ಮರಣವನ್ನಪ್ಪುತ್ತಾರೆ,’ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.
‘ನ್ಯಾಯಾಲಯನ್ನು ಸಂಪರ್ಕಿಸುವ ವಿಧಾನದ ಬಗ್ಗೆ ನನಗೆ ತಿಳುವಳಿಕೆ ಇದ್ದರೂ ತಮಗೆ ನೇರವಾಗಿ ಪತ್ರ ಬರೆಯುವ ಅನಿವಾರ್ಯತೆ ನನಗೆ ಎದುರಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಬಿಯಸ್ ಕಾರ್ಪಸ್ ಮನವಿಯೊಂದು 6 ತಿಂಗಳುಗಳಿಂದ ನೆನೆಗುದಿಗೆ ಬಿದ್ದಿದೆ. ನ್ಯಾಯವೆನ್ನುವುದು ಎಲ್ಲಕ್ಕಿಂತ ಮೇಲಿದೆ, ಕಾನೂನುಗಳು, ಕಾಯಿದೆಗಳು ಮತ್ತು ಮಾರ್ಗಸೂಚಿಗಳೆಲ್ಲ ಅದರೆದುರು ತಲೆ ಬಾಗಲೇಬೇಕು,’ ಎಂದು ರೈಹಂತ್ ಪತ್ರದಲ್ಲಿ ಬರೆದಿದ್ದಾರೆ.
‘ಮತ್ತೊಂದು ಮುಖ್ಯವಾದ ಸಂಗತಿಯೆಂದರೆ, ಮಾಧ್ಯಮವು ಪ್ರಜಾಪ್ರಭುತ್ವದ ಉಸಿರಾಗಿದೆ ಮತ್ತು ಮಾಧ್ಯಮಕ್ಕೆ ಸೇರಿದ ವ್ಯಕ್ತಿಯೊಬ್ಬರಿಗೆ ಉಸಿರು ನೀಡುವ ಪ್ರಯತ್ನ ಮಾಡಬೇಕಿದೆ. ಅವರು ಆರು ತಿಂಗಳುಗಳಿಂದ ಜೈಲಿನಲ್ಲಿದ್ದಾರೆ ಮತ್ತು ಹೇಬಿಯಸ್ ಕಾರ್ಪಸ್ ಅರ್ಜಿ ಅಕ್ಟೋಬರ್ 6, 2020ರಿಂದ ಪೆಂಡಿಂಗ್ನಲ್ಲಿದೆ,’ ಎಂದು ಪತ್ರದಲ್ಲಿ ಹೇಳಲಾಗಿದೆ.
’ಬಹಳ ಗೌರವ ಮತ್ತು ವಿನಯಪೂರ್ವಕವಾಗಿ ನಾನು ನಿಮ್ಮನ್ನು ಕೇಳಿಕೊಳ್ಳುವುದೇನೆಂದರೆ, ನನ್ನ ಪತಿಯ ತಾತ್ಕಾಲಿಕ ನಿರಾಳತೆಗಾಗಿ ಅವರನ್ನು ಕೂಡಲೇ ಮೆಡಿಕಲ್ ಕಾಲೇಜು ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿ ಮಥುರಾ ಜೈಲಿಗೆ ಸ್ಥಳಾಂತರಿಸುವ ಹಾಗೆ ತಾವು ಆದೇಶ ಇಲ್ಲವೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಮಥುರಾದ ಜೈಲು ಅಧೀಕ್ಷರಿಗೆ ನಾನು ಕಳಿಸಿರುವ ಸಂದೇಶಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ,’ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.
ಮಥುರಾದಲ್ಲಿನ ಅಧಿಕಾರಿಗಳ ಪ್ರಕಾರ ಕಪ್ಪನ್ ಅವರ ಆರೋಗ್ಯದಲ್ಲಿ ಕ್ರಮೇಣ ಚೇತರಿಕೆ ಕಂಡುಬರುತ್ತಿದೆ.
ಇದನ್ನೂ ಓದಿ: Hathras Case: ಪತ್ರಕರ್ತ ಸಿದ್ದಿಕ್ ಕಪ್ಪನ್ಗೆ ಸುಪ್ರೀಂಕೋರ್ಟ್ನಿಂದ ಮಧ್ಯಂತರ ಜಾಮೀನು