ಬಾರಾಬಂಕಿಯಲ್ಲಿ ಬಸ್​-ಟ್ರಕ್​ ನಡುವೆ ಭೀಕರ ಅಪಘಾತ; 9ಮಂದಿ ಸ್ಥಳದಲ್ಲೇ ಸಾವು

| Updated By: Lakshmi Hegde

Updated on: Oct 07, 2021 | 10:11 AM

ಡಿಕ್ಕಿಯ ರಭಸಕ್ಕೆ ಬಸ್​ ಮತ್ತು ಟ್ರಕ್​ ಒಂದಕ್ಕೊಂದು ಎಷ್ಟರ ಮಟ್ಟಿಗೆ ಅಂಟಿಕೊಂಡಿದ್ದವು ಎಂದರೆ, ಅದನ್ನು ಜೆಸಿಬಿ ತಂದು ಪ್ರತ್ಯೇಕ ಮಾಡಲಾಯಿತು.

ಬಾರಾಬಂಕಿಯಲ್ಲಿ ಬಸ್​-ಟ್ರಕ್​ ನಡುವೆ ಭೀಕರ ಅಪಘಾತ; 9ಮಂದಿ ಸ್ಥಳದಲ್ಲೇ ಸಾವು
ಅಪಘಾತದ ಸಾಂಕೇತಿಕ ಚಿತ್ರ
Follow us on

ಉತ್ತರಪ್ರದೇಶದ ಬಾರಾಬಂಕಿಯಲ್ಲಿ ಇಂದು ಬೆಳಗ್ಗೆ ಸುಮಾರು 5.30ರ ಹೊತ್ತಿಗೆ ಪ್ರವಾಸಿಗರ ಬಸ್​ ಮತ್ತು ಟ್ರಕ್​ ಡಿಕ್ಕಿಯಾಗಿ 9 ಜನ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸುಮಾರು 27 ಮಂದಿ ಗಾಯಗೊಂಡಿದ್ದಾರೆ. ಬಾರಾಬಂಕಿ ಜಿಲ್ಲೆಯ ​ ಬಾಬುರಿ ಎಂಬ ಗ್ರಾಮದ ಕಿಸಾನ್​ ಪಾತ್ ರಿಂಗ್ ರೋಡ್​​ನಲ್ಲಿ, ದೇವಾ ಪೊಲೀಸ್​ ಸ್ಟೇಶನ್​ ಬಳಿ ದುರ್ಘಟನೆ ನಡೆದಿದೆ.   ಈ ಟೂರಿಸ್ಟ್​ ಬಸ್​ ದೆಹಲಿಯಿಂದ ಬಹ್ರೈಚ್​ಗೆ ತೆರಳುತ್ತಿತ್ತು ಎಂದು ಹೇಳಲಾಗಿದೆ. ಗಾಯಗೊಂಡ 27 ಮಂದಿಯಲ್ಲಿ ಐವರ ಸ್ಥಿತಿ ತೀವ್ರ ಗಂಭೀರವಾಗಿದೆ.

ಬಸ್​ ಮತ್ತು ಟ್ರಕ್​ ಎರಡೂ ವಾಹನಗಳು ಅತಿಯಾದ ವೇಗದಲ್ಲಿ ಹೋಗುತ್ತಿದ್ದವು. ಬಸ್​ ಬಹ್ರೈಚ್​ಗೆ ಹೋಗುತ್ತಿದ್ದರೆ, ಟ್ರಕ್​ ಎದುರಿನಿಂದ ಬರುತ್ತಿತ್ತು. ಇವೆರಡರ ಮಧ್ಯೆ ಜಾನುವಾರವೊಂದು ಬಂದ ಕಾರಣ ಈ ಎರಡೂ ವಾಹನಗಳು ಅದನ್ನು ತಪ್ಪಿಸಲು ಮುಂದಾದವು. ಆದರೆ ಚಾಲಕರು ಸಮತೋಲನ ಕಳೆದುಕೊಂಡಿದ್ದಾರೆ. ಈ ಎರಡೂ ವಾಹನಗಳು ಡಿಕ್ಕಿಯಾಗಿವೆ. ಬಸ್​ನಲ್ಲಿ ಸುಮಾರು 70 ಜನರಿದ್ದರು. ಹಾಗೇ ಟ್ರಕ್​​ ಮರಳು ತುಂಬಿಕೊಂಡು ಬರುತ್ತಿತ್ತು. ಸದ್ಯ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದು, ಗಾಯಗೊಂಡವರನ್ನೆಲ್ಲ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಡಿಕ್ಕಿಯ ರಭಸಕ್ಕೆ ಬಸ್​ ಮತ್ತು ಟ್ರಕ್​ ಒಂದಕ್ಕೊಂದು ಎಷ್ಟರ ಮಟ್ಟಿಗೆ ಅಂಟಿಕೊಂಡಿದ್ದವು ಎಂದರೆ, ಅದನ್ನು ಜೆಸಿಬಿ ತಂದು ಪ್ರತ್ಯೇಕ ಮಾಡಲಾಯಿತು. ಬಸ್​ ಮತ್ತು ಟ್ರಕ್​ಗಳ ಮುಂದಿನ ಭಾಗ ಸಂಪೂರ್ಣ ಜಖಂಗೊಂಡಿದೆ. ಅತಿಯಾದ ವೇಗ, ಮತ್ತು ಜಾನುವಾರ ಮಧ್ಯೆ ಬಂದಿದ್ದೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದ್ದರೂ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇನ್ನಷ್ಟು ತನಿಖೆ ಶುರು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Viral Video: ಬಟ್ಟೆ ತೊಳೆಯಲು ದೇಸಿ ವಾಶಿಂಗ್​ ಮಷೀನ್​ ಕಂಡುಹಿಡಿದ ವಿದ್ಯಾರ್ಥಿ! ವಿಡಿಯೋ ಮಿಸ್​ ಮಾಡ್ಕೊಳ್ಬೇಡಿ

ಎಲ್ಲ ಚುನಾವಣೆಗಳೂ ಮುಂದಿನ ಚುನಾವಣೆಗಳಿಗೆ ದಿಕ್ಸೂಚಿ ಅಂತಾ ಹೇಳೋಕಾಗಲ್ಲ: ಡಿ.ಕೆ. ಶಿವಕುಮಾರ್​ ಯಾಕೆ ಹೀಗಂದ್ರು?

Published On - 9:59 am, Thu, 7 October 21