ನರೇಂದ್ರ ಮೋದಿ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟು 20ವರ್ಷ; ಇಂದು ಬಿಜೆಪಿಯಿಂದ ರಾಷ್ಟ್ರಾದ್ಯಂತ ಸೇವಾ ಕಾರ್ಯ
PM Narendra Modi: ಇತ್ತೀಚೆಗಷ್ಟೇ ಪ್ರಧಾನಿ ನರೇಂದರ ಮೋದಿಯವರು ಸ್ವಚ್ಛ ಭಾರತ್ 2.0 ಮಿಷನ್ಗೆ ಚಾಲನೆ ನೀಡಿದ್ದರು. ಭಾರತದ ಪ್ರತಿ ನದಿಯೂ ಕೊಳಚೆ ನೀರಿನಿಂದ ಮುಕ್ತವಾಗಿ, ಜಲ ಸಂರಕ್ಷಣೆಯಾಗಬೇಕು. ಈ ಉದ್ದೇಶ ಇಟ್ಟುಕೊಂಡು ಸ್ವಚ್ಛ ಭಾರತ್ 2.0 ಉದ್ಘಾಟನೆಯಾಗಿದೆ ಎಂದಿದ್ದರು.
ಪ್ರಧಾನಿ ನರೇಂದ್ರ ಮೋದಿ (PM Narendra Modi)ಯವರು ಸಾರ್ವಜನಿಕ ಜೀವನಕ್ಕೆ ಕಾಲಿರಿಸಿ ಇಂದಿಗೆ 20ವರ್ಷ ಆಗುತ್ತದೆ. ಅದರಲ್ಲೂ ಸರ್ಕಾರದ ಮುಖ್ಯ ಹುದ್ದೆಯಲ್ಲೇ ಅವರು 20ವರ್ಷಗಳಿಂದ ನಿರಂತರವಾಗಿ ಮುಂದುವರಿಯುತ್ತಿದ್ದಾರೆ. ಪ್ರಧಾನಿ ಮೋದಿ 2001ರ ಅಕ್ಟೋಬರ್ 7ರಂದು ಗುಜರಾತ್ನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. 2001ರಿಂದ 2014ರವರೆಗೆ ಗುಜರಾತ್ನ ಸಿಎಂ ಆಗಿ ಸೇವೆ ಸಲ್ಲಿಸಿದ್ದ ಅವರು, ಅಲ್ಲಿಂದ 2014ರ ಲೋಕಸಭಾ ಚುನಾವಣೆಯಲ್ಲಿ ಎಂಪಿ ಸೀಟ್ನಿಂದ ಗೆದ್ದು ಪ್ರಧಾನಮಂತ್ರಿ ಹುದ್ದೆಗೆ ಏರಿದರು. ಇದೀಗ ಎರಡನೇ ಅವಧಿಗೆ ಮುಂದುವರಿಯುತ್ತಿದ್ದಾರೆ. ಈ ವಿಶೇಷ ಕಾರಣಕ್ಕಾಗಿ ಇಂದು ಬಿಜೆಪಿ ದೇಶಾದ್ಯಂತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಸಾರ್ವಜನಿಕ ಸೇವೆಯ 20ವರ್ಷಗಳಲ್ಲಿ 7 ವರ್ಷ ಪ್ರಧಾನಿ ಹುದ್ದೆ ನಿಭಾಯಿಸಿರುವ ನರೇಂದ್ರ ಮೋದಿ ಅವಧಿ ಇನ್ನೂ ಮೂರು ವರ್ಷ ಇದೆ. ಇಂದಿಗೆ ಸರಿಯಾಗಿ 20ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಬಿಜೆಪಿ ದೇಶಾದ್ಯಂತ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ. ಹಾಗೇ, ನರೇಂದ್ರ ಮೋದಿಯವರು ಸಾರ್ವಜನಿಕರಿಗೆ ಕೊಟ್ಟ ಅತ್ಯುಪಯೋಗಿ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲಿದೆ. ಪ್ರಧಾನಿ ಮೋದಿಯವರ ಬಹುಮುಖ್ಯ, ಮಹತ್ವಾಕಾಂಕ್ಷಿ ಯೋಜನೆಗಳಲ್ಲಾದ ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಇಂದು ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ಸ್ವಚ್ಛತಾ ಕಾರ್ಯ ನಡೆಸುವರು. ಅದರಲ್ಲೂ ಮುಖ್ಯವಾಗಿ ನದಿ ಶುದ್ಧೀಕರಣ ಕಾರ್ಯ ನಡೆಯಲಿದೆ.
ಇತ್ತೀಚೆಗಷ್ಟೇ ಪ್ರಧಾನಿ ನರೇಂದರ ಮೋದಿಯವರು ಸ್ವಚ್ಛ ಭಾರತ್ 2.0 ಮಿಷನ್ಗೆ ಚಾಲನೆ ನೀಡಿದ್ದರು. ಭಾರತದ ಪ್ರತಿ ನದಿಯೂ ಕೊಳಚೆ ನೀರಿನಿಂದ ಮುಕ್ತವಾಗಿ, ಜಲ ಸಂರಕ್ಷಣೆಯಾಗಬೇಕು. ಈ ಉದ್ದೇಶ ಇಟ್ಟುಕೊಂಡು ಸ್ವಚ್ಛ ಭಾರತ್ 2.0 ಉದ್ಘಾಟನೆಯಾಗಿದೆ ಎಂದಿದ್ದರು. ಅದರಂತೆ ಇಂದು ಎಲ್ಲೆಡೆ ನದಿಗಳ ಸ್ವಚ್ಛತೆ ನಡೆಯಲಿದೆ. ಹಾಗೇ, ಕೊರೊನಾ ಲಸಿಕೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನೂ ಬಿಜೆಪಿ ಕಾರ್ಯಕರ್ತರು ಮಾಡಲಿದ್ದಾರೆ.
ಈ ಕುರಿತು, ಟಿವಿ9 ಕನ್ನಡ ವಾಹಿನಿ ರಾತ್ರಿ 9.30 ಕ್ಕೆ ವಿಶೇಷ ಕಾರ್ಯಕ್ರಮವೊಂದನ್ನು ಪ್ರಸಾರ ಮಾಡಲಿದೆ.
ಸಿಖ್ರಿಂದ ಪ್ರಾರ್ಥನೆ, ಪೂಜೆ ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿಯವರು 71ನೇ ಜನ್ಮ ದಿನ ಆಚರಿಸಿಕೊಂಡಿದ್ದಾರೆ. ಅವರ ಜನ್ಮದಿನ ಮತ್ತು ಸಾರ್ವಜನಿಕ ಜೀವನಕ್ಕೆ ಕಾಲಿಟ್ಟು 20 ವರ್ಷ ಆದ ಹಿನ್ನೆಲೆಯಲ್ಲಿ ಈ ಬಾರಿ ಬಿಜೆಪಿ ಸೇವಾ ಮತ್ತು ಸಮರ್ಪಣಾ ಅಭಿಯಾನ ಪ್ರಾರಂಭಿಸಿದೆ. ಅದರ ಭಾಗವಾಗಿಯೇ ಇಂದು ಎಲ್ಲೆಡೆ ಸೇವಾ ಸಂಭ್ರಮಾಚರಣೆ ನಡೆಯಲಿದೆ. ಈ ಮಧ್ಯೆ ಸಿಖ್ ಸಮುದಾಯದವರು ಪ್ರಧಾನಿ ನರೇಂದ್ರ ಮೋದಿಯವರ ಆರೋಗ್ಯ-ಹೆಚ್ಚಿನ ಆಯುಷ್ಯಕ್ಕೆ ಪ್ರಾರ್ಥಿಸಿ ಎಲ್ಲ ಗುರುದ್ವಾರಗಳಲ್ಲಿ ಆರ್ದಾಸ್ ಆಚರಿಸಲಿದ್ದಾರೆ.
ಇದನ್ನೂ ಓದಿ: ಮುಖವನ್ನು ಹೆಚ್ಚು ಆಕರ್ಷಕವಾಗಿಸುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ? ಅಂದವಾಗಿ ಕಾಣಲು ಈ ಯೋಗಾಸನ ಮಾಡಿ
Navratri: ದುರ್ಗಾದೇವಿಯ ಈ ಮಂತ್ರಗಳನ್ನು ಪಠಿಸಿದರೆ ನಿಮ್ಮ ಬಾಳಲ್ಲಿ ಭಾರಿ ಬದಲಾವಣೆಯಾಗುತ್ತೆ
Published On - 8:50 am, Thu, 7 October 21