ಬಾರಾಬಂಕಿಯಲ್ಲಿ ಬಸ್-ಟ್ರಕ್ ನಡುವೆ ಭೀಕರ ಅಪಘಾತ; 9ಮಂದಿ ಸ್ಥಳದಲ್ಲೇ ಸಾವು
ಡಿಕ್ಕಿಯ ರಭಸಕ್ಕೆ ಬಸ್ ಮತ್ತು ಟ್ರಕ್ ಒಂದಕ್ಕೊಂದು ಎಷ್ಟರ ಮಟ್ಟಿಗೆ ಅಂಟಿಕೊಂಡಿದ್ದವು ಎಂದರೆ, ಅದನ್ನು ಜೆಸಿಬಿ ತಂದು ಪ್ರತ್ಯೇಕ ಮಾಡಲಾಯಿತು.
ಉತ್ತರಪ್ರದೇಶದ ಬಾರಾಬಂಕಿಯಲ್ಲಿ ಇಂದು ಬೆಳಗ್ಗೆ ಸುಮಾರು 5.30ರ ಹೊತ್ತಿಗೆ ಪ್ರವಾಸಿಗರ ಬಸ್ ಮತ್ತು ಟ್ರಕ್ ಡಿಕ್ಕಿಯಾಗಿ 9 ಜನ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸುಮಾರು 27 ಮಂದಿ ಗಾಯಗೊಂಡಿದ್ದಾರೆ. ಬಾರಾಬಂಕಿ ಜಿಲ್ಲೆಯ ಬಾಬುರಿ ಎಂಬ ಗ್ರಾಮದ ಕಿಸಾನ್ ಪಾತ್ ರಿಂಗ್ ರೋಡ್ನಲ್ಲಿ, ದೇವಾ ಪೊಲೀಸ್ ಸ್ಟೇಶನ್ ಬಳಿ ದುರ್ಘಟನೆ ನಡೆದಿದೆ. ಈ ಟೂರಿಸ್ಟ್ ಬಸ್ ದೆಹಲಿಯಿಂದ ಬಹ್ರೈಚ್ಗೆ ತೆರಳುತ್ತಿತ್ತು ಎಂದು ಹೇಳಲಾಗಿದೆ. ಗಾಯಗೊಂಡ 27 ಮಂದಿಯಲ್ಲಿ ಐವರ ಸ್ಥಿತಿ ತೀವ್ರ ಗಂಭೀರವಾಗಿದೆ.
ಬಸ್ ಮತ್ತು ಟ್ರಕ್ ಎರಡೂ ವಾಹನಗಳು ಅತಿಯಾದ ವೇಗದಲ್ಲಿ ಹೋಗುತ್ತಿದ್ದವು. ಬಸ್ ಬಹ್ರೈಚ್ಗೆ ಹೋಗುತ್ತಿದ್ದರೆ, ಟ್ರಕ್ ಎದುರಿನಿಂದ ಬರುತ್ತಿತ್ತು. ಇವೆರಡರ ಮಧ್ಯೆ ಜಾನುವಾರವೊಂದು ಬಂದ ಕಾರಣ ಈ ಎರಡೂ ವಾಹನಗಳು ಅದನ್ನು ತಪ್ಪಿಸಲು ಮುಂದಾದವು. ಆದರೆ ಚಾಲಕರು ಸಮತೋಲನ ಕಳೆದುಕೊಂಡಿದ್ದಾರೆ. ಈ ಎರಡೂ ವಾಹನಗಳು ಡಿಕ್ಕಿಯಾಗಿವೆ. ಬಸ್ನಲ್ಲಿ ಸುಮಾರು 70 ಜನರಿದ್ದರು. ಹಾಗೇ ಟ್ರಕ್ ಮರಳು ತುಂಬಿಕೊಂಡು ಬರುತ್ತಿತ್ತು. ಸದ್ಯ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದು, ಗಾಯಗೊಂಡವರನ್ನೆಲ್ಲ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಡಿಕ್ಕಿಯ ರಭಸಕ್ಕೆ ಬಸ್ ಮತ್ತು ಟ್ರಕ್ ಒಂದಕ್ಕೊಂದು ಎಷ್ಟರ ಮಟ್ಟಿಗೆ ಅಂಟಿಕೊಂಡಿದ್ದವು ಎಂದರೆ, ಅದನ್ನು ಜೆಸಿಬಿ ತಂದು ಪ್ರತ್ಯೇಕ ಮಾಡಲಾಯಿತು. ಬಸ್ ಮತ್ತು ಟ್ರಕ್ಗಳ ಮುಂದಿನ ಭಾಗ ಸಂಪೂರ್ಣ ಜಖಂಗೊಂಡಿದೆ. ಅತಿಯಾದ ವೇಗ, ಮತ್ತು ಜಾನುವಾರ ಮಧ್ಯೆ ಬಂದಿದ್ದೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದ್ದರೂ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇನ್ನಷ್ಟು ತನಿಖೆ ಶುರು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Viral Video: ಬಟ್ಟೆ ತೊಳೆಯಲು ದೇಸಿ ವಾಶಿಂಗ್ ಮಷೀನ್ ಕಂಡುಹಿಡಿದ ವಿದ್ಯಾರ್ಥಿ! ವಿಡಿಯೋ ಮಿಸ್ ಮಾಡ್ಕೊಳ್ಬೇಡಿ
ಎಲ್ಲ ಚುನಾವಣೆಗಳೂ ಮುಂದಿನ ಚುನಾವಣೆಗಳಿಗೆ ದಿಕ್ಸೂಚಿ ಅಂತಾ ಹೇಳೋಕಾಗಲ್ಲ: ಡಿ.ಕೆ. ಶಿವಕುಮಾರ್ ಯಾಕೆ ಹೀಗಂದ್ರು?
Published On - 9:59 am, Thu, 7 October 21