ಎಲ್ಲ ಚುನಾವಣೆಗಳೂ ಮುಂದಿನ ಚುನಾವಣೆಗಳಿಗೆ ದಿಕ್ಸೂಚಿ ಅಂತಾ ಹೇಳೋಕಾಗಲ್ಲ: ಡಿ.ಕೆ. ಶಿವಕುಮಾರ್ ಯಾಕೆ ಹೀಗಂದ್ರು?
ಬೈ ಎಲೆಕ್ಷನ್ ಅನ್ನೋದು ಈ ಹಿಂದೆ ಆಗಿರುವ ನೋವನ್ನ ಹೇಳಿಕೊಳ್ಳೋಕೆ ಮತದಾರರಿಗೆ ದೊರೆಯುವ ಅವಕಾಶ... ಹೀಗಂತ ಮುಂಬರುವ ವಿಧಾನಸಭಾ ಚುನಾವಣೆಗೆ ಈಗಿನ ಎರಡೂ ಬೈ ಎಲೆಕ್ಷನ್ ಎಫೆಕ್ಟ್ ಆಗುತ್ತಾ ಅನ್ನೋ ಪ್ರಶ್ನೆಗೆ ಶಿವಕುಮಾರ್ ಮಾರ್ಮಿಕವಾಗಿ ಉತ್ತರಿಸಿದರು.
ಹುಬ್ಬಳ್ಳಿ: ಹಾನಗಲ್ ಹಾಗೂ ಸಿಂಧಗಿ ಅಸೆಂಬ್ಲಿ ಉಪಚುನಾವಣೆ ವಿಚಾರವಾಗಿ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಎಲ್ಲಾ ಚುನಾವಣೆಗೂ ಮುಂದಿನ ಚುನಾವಣೆ ದಿಕ್ಸೂಚಿ ಅಂತಾ ಹೇಳೊಕಾಗಲ್ಲ; ಬೈ ಎಲೆಕ್ಷನ್ ಅನ್ನೋದು ಈ ಹಿಂದೆ ಆಗಿರುವ ನೋವನ್ನ ಹೇಳಿಕೊಳ್ಳೋಕೆ ಮತದಾರರಿಗೆ ದೊರೆಯುವ ಅವಕಾಶ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಗೆ ಈಗಿನ ಎರಡೂ ಬೈ ಎಲೆಕ್ಷನ್ ಎಫೆಕ್ಟ್ ಆಗುತ್ತಾ ಅನ್ನೋ ಪ್ರಶ್ನೆಗೆ ಶಿವಕುಮಾರ್ ಉತ್ತರಿಸಿದರು.
ಅಕ್ಟೋಬರ್ 30ರಂದು ಹಾನಗಲ್ ಹಾಗೂ ಸಿಂದಗಿ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಪ್ರಚಾರ ರಾಜಕೀಯ ಕಾವೇರುತ್ತಿದೆ. ಉಮೇದುವಾರಿಕೆ ಸಲ್ಲಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಇಂದು ಇಲ್ಲಿಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಈ ಕ್ಷೇತ್ರಗಳಲ್ಲಿ ಆಡಳಿತ ಯಂತ್ರವೂ ಕೂಡ ಬಹಳ ಬಿಗಿಯಾಗಿದೆ. ಬಿಜೆಪಿಯವರಿಗೆ ಅದು ಚೆನ್ನಾಗಿ ಗೊತ್ತಿದೆ. ಬಿಜೆಪಿಯವರು ಯಾವುದೇ ರೀತಿ ಆಡಳಿತ ದುರುಪಯೋಗ ಮಾಡಿಕೊಂಡರೂ ಮತದಾರರ ತೀರ್ಪು ಅಂತಿಮವಾಗಿರುತ್ತದೆ. ಜನರು ಯಾವುದೇ ಒತ್ತಡಕ್ಕೆ ಹಾಗೂ ಆಮಿಷಕ್ಕೆ ಒಳಗಾಗಿ ಮತ ಹಾಕಲು ಹೋಗಲ್ಲ ಎಂಬ ನಂಬಿಕೆ ಇದೆ ಎಂಬ ಆಶಯ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ ಅವಧಿ ಇನ್ನೂ ಒಂದೂವರೆ ವರ್ಷ ಇದೆಯಾ ಎಂದು ಪರೋಕ್ಷವಾಗಿ ಬಿಜೆಪಿ ಸರ್ಕಾರದ ಬಗ್ಗೆ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದರು. ಚುನಾವಣೆ ಬಗ್ಗೆ ಬಿಜೆಪಿಯವರನ್ನೇ ಕೇಳಿ. ಬಿಜೆಪಿ ಆಂತರಿಕದ ಬಗ್ಗೆ ಅವರ ನಾಯಕರಿಗೇ ಗೊತ್ತಿದೆ. ಅರುಣ ಸಿಂಗ್ ಅವರು ರಾಜ್ಯದ ನಮ್ಮ ನಾಯಕರು ಪ್ರಾಮಾಣಿಕರು ಎಂದು ಹೇಳಿದ್ರು. ಆದರೆ ಯತ್ನಾಳ, ಬೆಲ್ಲದ ಅವರು ಪರೀಕ್ಷೆ ಪಾಸ್ ಮಾಡೋಕೆ ಓಡಾಡುತ್ತಿದ್ರು. ಬಿಜೆಪಿ ಯವರ ಯಾವುದೇ ಮಾತುಗಳಲ್ಲಿಯೂ ನಂಬಿಕೆ ಇಲ್ಲ. ರಾಜಕಾರದಲ್ಲಿ ಏನು ಬೇಕಾದರೂ ಆಗಬಹುದು ಎಂದರು.
ಇದನ್ನೂ ಓದಿ: Karnataka Bypolls 2021: ಹಾನಗಲ್ ಉಪಚುನಾವಣೆ: ಮೂರೂ ಪಕ್ಷಗಳಲ್ಲಿ ಸಿದ್ಧತೆ ಚುರುಕು, ತ್ರಿಕೋನ ಸ್ಪರ್ಧೆ ನಿರೀಕ್ಷಿತ
ಇದನ್ನೂ ಓದಿ: Karnataka Byelection: ಸಿಂದಗಿ, ಹಾನಗಲ್ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಘೋಷಣೆ
Published On - 9:51 am, Thu, 7 October 21