ಪತಿ-ಪತ್ನಿಯ ಮಧ್ಯೆ ಜಗಳ, ಮನಸ್ತಾಪಗಳು ಸಹಜ. ಆದರೆ ಕೆಲವು ದಂಪತಿ ಚಿಕ್ಕಚಿಕ್ಕ ವಿಚಾರಗಳಿಗೂ ಆತ್ಮಹತ್ಯೆ, ಕೊಲೆಯಂಥ ಕೃತ್ಯಕ್ಕೆ ಮುಂದಾಗುತ್ತಾರೆ. ಇದೀಗ ಮಧ್ಯಪ್ರದೇಶದ ಶಾದೋಲ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಇಂಥದ್ದೇ ಸಣ್ಣ ವಿಚಾರಕ್ಕೆ ಹತ್ಯೆ ಮಾಡಿದ್ದಾನೆ. ಪತ್ನಿ ಚಿಕನ್ ಮಾಡಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಕೋಲಿನಿಂದ ಹೊಡೆದೇ ಕೊಂದಿದ್ದಾನೆ. ಘಟನೆ ನಡೆದಿದ್ದು ಆಗಸ್ಟ್ 23ರಂದಾದರೂ ಇದೀಗ ಬೆಳಕಿಗೆ ಬಂದಿದೆ.
ಮಧ್ಯಪ್ರದೇಶದ ಶಾದೋಲ್ ಜಿಲ್ಲೆಯ ಸಮರಟೋಲ ಎಂಬ ಗ್ರಾಮದಲ್ಲಿ ಘಟನೆ ನಡೆದಿದ್ದು, ಪಪೌಂಧ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖೆ ಪ್ರಾರಂಭವಾಗಿದೆ. ಆರೋಪಿಯನ್ನು ಕಮಲೇಶ್ ಕೋಲ್ ಎಂದು ಗುರುತಿಸಲಾಗಿದ್ದು, ಮೃತ ಮಹಿಳೆಯರ ಹೆಸರು ರಮಾಂಬೈ ಕೋಲ್. ಆಗಸ್ಟ್ 23ರಂದು ರಾತ್ರಿ ಚಿಕನ್ ಮಾಡು ಎಂದು ಪತ್ನಿಗೆ ಹೇಳುತ್ತಾನೆ. ಆದರೆ ಆಕೆ ಒಪ್ಪಲಿಲ್ಲ. ಇದೇ ವಿಚಾರಕ್ಕೆ ಅವರಿಬ್ಬರ ಮಧ್ಯೆ ಜಗಳ ಶುರುವಾಗಿ, ಕಮಲೇಶ್ ಕೋಲಿನಲ್ಲಿ ಪತ್ನಿಗೆ ಹೊಡೆಯುತ್ತಾನೆ. ತಲೆಗೆ ಹೊಡೆದಿದ್ದರಿಂದಲೇ ಜೀವ ಹೋಗಿದೆ ಎಂದು ಪೋಸ್ಟ್ಮಾರ್ಟಮ್ನಿಂದ ದೃಢಪಟ್ಟಿದೆ ಸಿಬ್ಬಂದಿ ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಶತಮಾನಗಳಿಂದ ಅಮೆರಿಕಾವನ್ನು ಚಂಡಮಾರುತ ಮತ್ತು ಬಿರುಗಾಳಿಗಳು ಅಪ್ಪಳಿಸುತ್ತಿವೆ, ಇಡಾ ಚಂಡಮಾರುತ ಲೇಟೆಸ್ಟ್!
Business Success Story: ಕಂಪೆನಿಯ ಷೇರಿನ ಪಾಲು ಮಾರಿ ತಲಾ 3500 ಕೋಟಿ ರೂಪಾಯಿ ಪಡೆದ ಮೂವರ ಯಶೋಗಾಥೆ