ಜಗತ್ತಿನಲ್ಲೇ ಅತ್ಯಂತ ದೊಡ್ಡ ಪಾಪ್​-ಅಪ್​ ಗ್ರೀಟಿಂಗ್ ಕಾರ್ಡ್​ ತಯಾರಿಸಿದ ಭಾರತೀಯ ಮೂಲದ ದುಬೈ ನಿವಾಸಿ; ಗಿನ್ನೆಸ್ ದಾಖಲೆ

17ವರ್ಷಗಳ ಹಿಂದೆ ಚೆನ್ನೈನಿಂದ ದುಬೈಗೆ ಹೋಗಿ ನೆಲೆಸಿರುವ ಸಾರಂಗಪಾಣಿಗೆ ದಾಖಲೆಗಳು ಹೊಸದಲ್ಲ. ಭಾರತ ಮತ್ತು ದುಬೈನಲ್ಲಿ ಸೇರಿ ಇದು ಅವರ 19ನೇ ವಿಶ್ವದಾಖಲೆಯಾಗಿದೆ.

ಜಗತ್ತಿನಲ್ಲೇ ಅತ್ಯಂತ ದೊಡ್ಡ ಪಾಪ್​-ಅಪ್​ ಗ್ರೀಟಿಂಗ್ ಕಾರ್ಡ್​ ತಯಾರಿಸಿದ ಭಾರತೀಯ ಮೂಲದ ದುಬೈ ನಿವಾಸಿ; ಗಿನ್ನೆಸ್ ದಾಖಲೆ
ರಾಮಕುಮಾರ್ ಸಾರಂಗಪಾಣಿ ಮತ್ತು ಅವರು ತಯಾರಿಸಿದ ಗ್ರೀಟಿಂಗ್ ಕಾರ್ಡ್​
Follow us
Lakshmi Hegde
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 03, 2021 | 3:48 PM

ದುಬೈ: ಭಾರತೀಯ ಮೂಲದ ರಾಮ್​ಕುಮಾರ್ ಸಾರಂಗಪಾಣಿ ಅವರು ವಿಶ್ವದ ಅತ್ಯಂತ ದೊಡ್ಡ ಪಾಪ್​-ಅಪ್​ ಗ್ರೀಟಿಂಗ್ ಕಾರ್ಡ್​ (3ಡಿ ಆಯಾಮ) ತಯಾರಿಸುವ ಮೂಲಕ ಗಿನ್ನೆಸ್​ ದಾಖಲೆ ನಿರ್ಮಿಸಿದ್ದಾರೆ.

ಈ ಶುಭಾಶಯ ಪತ್ರ 8.2 ಚದರ ಮೀಟರ್​ ವಿಸ್ತಾರವಾಗಿದೆ. ಯುಎಇ ಪ್ರಧಾನಿ, ಉಪಾಧ್ಯಕ್ಷ ಹಾಗೂ ದುಬೈನ ರಾಜನಾಗಿರುವ ಶೇಖ್​ ಮೊಹಮ್ಮದ್​ ಬಿನ್​ ರಶೀದ್​ ಮಕ್ತುಮ್​ ಅವರ 15ನೇ ಪದಗ್ರಹಣ ದಿನದ ನಿಮಿತ್ತ ರಾಮ್​ಕುಮಾರ್​ ಗ್ರೀಟಿಂಗ್​ ಕಾರ್ಡ್​ ತಯಾರಿಸಿದ್ದು, ವಿಶ್ವದಲ್ಲೇ ಅತ್ಯಂತ ದೊಡ್ಡ ಪಾಪ್ ಅಪ್ ಶುಭಾಶಯ ಪತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಕಾರ್ಡ್ ಒಂದು ಸಹಜ ಅಳತೆಯ ಶುಭಾಶಯ ಪತ್ರಕ್ಕಿಂತ 100 ಪಟ್ಟು ದೊಡ್ಡ ಗ್ರೀಟಿಂಗ್​ ಕಾರ್ಡ್ ಆಗಿದೆ. ದುಬೈ ಮೂಲದ ಕಲಾವಿದ ಅಕ್ಬರ್​ ಸಾಹೇಬ್​ ರಚಿಸಿರುವ ಶೇಖ್​ ಮೊಹಮದ್​ ಅವರ ಪೇಂಟಿಂಗ್​ ಈ ಕಾರ್ಡ್​ನಲ್ಲಿದೆ ಎಂದು ಗಲ್ಫ್​ ನ್ಯೂಸ್ ವರದಿ ಮಾಡಿದೆ.

ಇಷ್ಟು ದೊಡ್ಡ, ವಿಶೇಷ ಗ್ರೀಟಿಂಗ್ ಕಾರ್ಡ್ ತಯಾರಿಸಲು 6 ತಿಂಗಳು ಬೇಕಾಯಿತು. ದೋಹಾದಲ್ಲಿ ಜನವರಿ 4ರಿಂದ 18ರವರೆಗೆ ಇದರ ಪ್ರದರ್ಶನ ನಡೆಯಲಿದೆ ಎಂದು ಸಾರಂಗಪಾಣಿ ತಿಳಿಸಿದ್ದಾರೆ. ಈ ಮೊದಲು ಹಾಂಗ್​ಕಾಂಗ್​ ಮೂಲದ ವ್ಯಕ್ತಿಯೋರ್ವರು 6.729 ಚದರ ಮೀಟರ್ ವಿಸ್ತೀರ್ಣದ ಗ್ರೀಟಿಂಗ್ ಕಾರ್ಡ್​ ತಯಾರಿಸಿ ಗಿನ್ನೆಸ್ ದಾಖಲೆ ನಿರ್ಮಿಸಿದ್ದರು. ಅದನ್ನೀಗ ಸಾರಂಗಪಾಣಿ ಮುರಿದಿದ್ದಾರೆ. ಇವರ ಪಾಪ್​ಅಪ್​ ಶುಭಾಶಯ ಪತ್ರ 8.2 ಚದರ ಮೀಟರ್​ ಇದೆ.

17 ವರ್ಷಗಳ ಹಿಂದೆ ಚೆನ್ನೈನಿಂದ ದುಬೈಗೆ ಹೋಗಿ ನೆಲೆಸಿರುವ ಸಾರಂಗಪಾಣಿಗೆ ದಾಖಲೆಗಳು ಹೊಸದಲ್ಲ. ಭಾರತ ಮತ್ತು ದುಬೈನಲ್ಲಿ ಸೇರಿ ಇದು ಅವರ 19ನೇ ವಿಶ್ವದಾಖಲೆಯಾಗಿದೆ.

‘ಕೊರೊನಾ ನಿಯಮ ಪಾಲಿಸಲಾಗದಿದ್ದರೆ ನೀವು ಬರೋದೇ ಬೇಡ’- ಟೀಂ ಇಂಡಿಯಾಗೆ ಆಸ್ಟ್ರೇಲಿಯಾ ಎಚ್ಚರಿಕೆ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್