ಮುಂಬೈನ ಕುರ್ಲಾದಲ್ಲಿ ಅಗ್ನಿ ಅವಘಡ: 20 ದ್ವಿಚಕ್ರವಾಹನಗಳು ಸುಟ್ಟು ಭಸ್ಮ

ಮುಂಬೈನ ನೆಹರು ನಗರದ ಕುರ್ಲಾದ ವಸತಿ ಸೊಸೈಟಿ ಮುಂದೆ ನಿಲ್ಲಿಸಿದ್ದ 20 ದ್ವಿಚಕ್ರವಾಹನಗಳು ಸುಟ್ಟು ಹೋಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಮುಂಬೈನ ಕುರ್ಲಾದಲ್ಲಿ ಅಗ್ನಿ ಅವಘಡ: 20 ದ್ವಿಚಕ್ರವಾಹನಗಳು ಸುಟ್ಟು ಭಸ್ಮ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Oct 13, 2021 | 11:25 AM

ಮುಂಬೈ: ಮುಂಬೈನ ನೆಹರು ನಗರದ ಕುರ್ಲಾದ ವಸತಿ ಸೊಸೈಟಿಯಲ್ಲಿ ಬುಧವಾರ ಅಗ್ನಿ ಅವಘಡ ಸಂಭವಿಸಿದ್ದು ಅಲ್ಲಿ ನಿಲ್ಲಿಸಿದ್ದ ಸುಮಾರು 20 ಮೋಟಾರ್ ಸೈಕಲ್‌ ಸುಟ್ಟು ಹೋಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದರು.

ಪ್ರಸ್ತುತ, ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿದ್ದು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆದರೆ, ಬೆಂಕಿಯ ಹಿಂದಿನ ಕಾರಣ ಇನ್ನೂ ಪತ್ತೆಯಾಗಿಲ್ಲ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಬೃಹತ್ ಜ್ವಾಲೆಗಳು ಕಟ್ಟಡದ ಎಂಟನೇ ಮಹಡಿಯಷ್ಟು ಎತ್ತರಕ್ಕೆ  ಹಾರಿತ್ತು.

ಯಾರೋ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿದ್ದಾರೆ  ಅಥವಾ ಸಿಗರೇಟ್ ಸೇದಿದ್ದು ಕಟ್ಟಡದ ಮೇಲ್ಭಾಗದಿಂದ ನಂದಿಸದ ಸಿಗರೇಟ್ ತುಂಡನ್ನು ಅಜಾಗರೂಕತೆಯಿಂದ ಎಸೆದಿದ್ದಾರೆ ಎಂದು ಕಟ್ಟಡದ ನಿವಾಸಿಗಳು ಶಂಕೆ ವ್ಯಕ್ತಪಡಿಸಿದ್ದಾರೆ

ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ದಳ ಈ ಬಗ್ಗೆ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ: Coronavirus cases in India: ಭಾರತದಲ್ಲಿ 15,823 ಹೊಸ ಕೊವಿಡ್ ಪ್ರಕರಣ ಪತ್ತೆ, 226 ಮಂದಿ ಸಾವು

Published On - 11:09 am, Wed, 13 October 21