ನೆರೆಮನೆಯಲ್ಲಿ ಒಂದು ಸಾವಾಗುತ್ತಿದ್ದಂತೆ, ಕತ್ತಲಕೋಣೆಯೊಳಗೆ ತಮ್ಮನ್ನು ಬಂಧಿಯಾಗಿಸಿಕೊಂಡ ತಾಯಿ, ಇಬ್ಬರು ಹೆಣ್ಣುಮಕ್ಕಳು

| Updated By: Lakshmi Hegde

Updated on: Jul 20, 2021 | 1:29 PM

ಗ್ರಾಮದ ಕೆಲವು ಸ್ವಯಂಸೇವಕರ ಗಮನಕ್ಕೆ ಇದು ಬಂತು. ಅನೇಕ ಕಾಲದಿಂದಲೂ ಈ ಮನೆಯಿಂದ ಮೂವರು ಮಹಿಳೆಯರು ಹೊರಬೀಳುತ್ತಿಲ್ಲ ಎಂಬುದನ್ನು ಗಮನಿಸಿದ ಇವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನೆರೆಮನೆಯಲ್ಲಿ ಒಂದು ಸಾವಾಗುತ್ತಿದ್ದಂತೆ, ಕತ್ತಲಕೋಣೆಯೊಳಗೆ ತಮ್ಮನ್ನು ಬಂಧಿಯಾಗಿಸಿಕೊಂಡ ತಾಯಿ, ಇಬ್ಬರು ಹೆಣ್ಣುಮಕ್ಕಳು
ಮೂವರು ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಿರುವುದು
Follow us on

ಕೊವಿಡ್​ 19 (Covid 19) ಸಾಂಕ್ರಾಮಿಕಕ್ಕೆ ಹೆದರಿ ಮನೆಯಿಂದ ಆಚೆ ಬಾರದವರು ಎಷ್ಟೋ ಮಂದಿ ಇದ್ದರೂ, ನಾವು ಈಗ ಹೇಳಲು ಹೊರಟಿರುವ ವಿಷಯ ಸ್ವಲ್ಪ ವಿಭಿನ್ನವಾಗಿದೆ. ಆಂಧ್ರಪ್ರದೇಶ (Andra Pradesh)ದ ಒಂದು ಕುಟುಂಬದ ಕತೆ. ಕೊರೊನಾ ಸೋಂಕಿನಿಂದ ನೆರೆಮನೆಯಲ್ಲಿ ಒಂದು ಸಾವು ಆದ ಬಳಿಕ ತಾಯಿ ಮತ್ತು ಇಬ್ಬರು ಹೆಣ್ಣುಮಕ್ಕಳು ಮನೆಯ ಕತ್ತಲು ಕೋಣೆ ಸೇರಿ ಕುಳಿತ ವಿಚಿತ್ರ ಘಟನೆ. ಕೊರೊನಾ ಭಯದಿಂದ ಈ ತಾಯಿ-ಮಕ್ಕಳು ಬರೋಬ್ಬರಿ 15 ತಿಂಗಳ ಕಾಲ ಕತ್ತಲ ಕೋಣೆಯೊಳಗೆ ಬಾಗಿಲಿಗೆ ಬೀಗ ಹಾಕಿಕೊಂಡು ಕುಳಿತುಬಿಟ್ಟಿದ್ದರು. ಇದೀಗ ಪೊಲೀಸರು ಅವರನ್ನು ರಕ್ಷಿಸಿದ್ದಾರೆ.

ಆಂಧ್ರಪ್ರದೇಶದ ರಜೋಲ್​ನ ಕಡಾಲಿ ಗ್ರಾಮದಲ್ಲಿ ಘಟನೆ ನಡೆದಿದೆ. ಇಲ್ಲಿನ ಮನೆಯೊಂದರಲ್ಲಿ ಕೊರೊನಾದಿಂದ ಒಬ್ಬರು ಮೃತಪಟ್ಟಿದ್ದರು. ಅದನ್ನು ನೋಡಿ ಹೆದರಿದ ಪಕ್ಕದ ಮನೆಯ ತಾಯಿ ಮತ್ತು ಹೆಣ್ಣು ಮಕ್ಕಳು ಒಂದು ಚಿಕ್ಕ ಕೋಣೆಯಲ್ಲಿ ತಮ್ಮನ್ನು ತಾವು ಬಂಧಿಯಾಗಿಸಿಕೊಂಡುಬಿಟ್ಟಿದ್ದರು. ಅದೆಷ್ಟು ಹೆದರಿಕೆಯಿತ್ತೆಂದರೆ 15 ತಿಂಗಳುಗಳಿಂದ ಒಂದಿನವೂ ಹೊರಗೆ ಬಂದೇ ಇಲ್ಲ. ಇದರಿಂದ ಅವರು ಖಿನ್ನತೆಗೂ ಜಾರಿದ್ದಾರೆ. ಇನ್ನು ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನೆಲ್ಲ ತಂದೆ ಮತ್ತು ಒಬ್ಬ ಮಗನೇ ತಂದುಕೊಡುತ್ತಿದ್ದರು ಎಂದು ಪೊಲೀಸರೇ ತಿಳಿಸಿದ್ದಾರೆ.

ಗ್ರಾಮದ ಕೆಲವು ಸ್ವಯಂಸೇವಕರ ಗಮನಕ್ಕೆ ಇದು ಬಂತು. ಅನೇಕ ಕಾಲದಿಂದಲೂ ಈ ಮನೆಯಿಂದ ಮೂವರು ಮಹಿಳೆಯರು ಹೊರಬೀಳುತ್ತಿಲ್ಲ ಎಂಬುದನ್ನು ಗಮನಿಸಿದ ಇವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಆರೋಗ್ಯ ಕಾರ್ಯಕರ್ತರೊಂದಿಗೆ ಮನೆಗೆ ಹೋದ ಪೊಲಿಸರು ಅವರನ್ನು ಅಲ್ಲಿಂದ ಹೊರಗೆ ಕರೆತಂದಿದ್ದಾರೆ. ಇದೀಗ ಎಲ್ಲರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: PAN Card: ಡಿಜಿಲಾಕರ್​ನಲ್ಲಿ PAN ಕಾರ್ಡ್​ ಸ್ಟೋರ್ ಹೇಗೆ?

A Mother And her two Daughters locked themselves in tiny Dark room for fear of Covid in Andra