Shocking News: ಕೊಲ್ಲುವುದು ಹೇಗೆಂದು ಆನ್​ಲೈನ್​​ನಲ್ಲಿ ಸರ್ಚ್ ಮಾಡಿ, ತನ್ನ ಶಿಶುವನ್ನೇ ಹತ್ಯೆ ಮಾಡಿದ ಮಹಿಳೆ

ಅಕ್ಟೋಬರ್ 12ರಂದು ಈ ಮಹಿಳೆ ತನ್ನ ಹೆಣ್ಣು ಮಗು ಕಾಣುತ್ತಿಲ್ಲ ಎಂದು ಹೇಳಿಕೊಂಡಿದ್ದಾಳೆ. ಗಾಬರಿಗೊಂಡ ಕುಟುಂಬದವರು ಮಗುವನ್ನು ಹುಡುಕಲು ಪ್ರಾರಂಭ ಮಾಡಿದ್ದಾರೆ.

Shocking News: ಕೊಲ್ಲುವುದು ಹೇಗೆಂದು ಆನ್​ಲೈನ್​​ನಲ್ಲಿ ಸರ್ಚ್ ಮಾಡಿ, ತನ್ನ ಶಿಶುವನ್ನೇ ಹತ್ಯೆ ಮಾಡಿದ ಮಹಿಳೆ
ಪ್ರಾತಿನಿಧಿಕ ಚಿತ್ರ
Edited By:

Updated on: Oct 24, 2021 | 5:32 PM

ಒಬ್ಬ ವ್ಯಕ್ತಿಯನ್ನು ನೀರಿನಲ್ಲಿ ಮುಳುಗಿಸಿ ಕೊಲ್ಲುವುದು ಹೇಗೆ ಎಂದು ಆನ್​ಲೈನ್​​ನಲ್ಲಿ ನೋಡಿದ ಬಳಿಕ ಮಹಿಳೆಯೊಬ್ಬಳು ತನ್ನ ಮೂರು ತಿಂಗಳ ಮಗುವನ್ನು ಹತ್ಯೆ ಮಾಡಿದ್ದಾಳೆ. ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಕಚ್ರೋಡ್​ ಎಂಬಲ್ಲಿ ಘಟನೆ ನಡೆದಿದೆ. ಅಕ್ಟೋಬರ್​ 12ರಂದು ಘಟನೆ ನಡೆದಿದ್ದರೂ ಶುಕ್ರವಾರವಷ್ಟೇ ಆಕೆಯ ಬಂಧನವಾಗಿದೆ. ಘಟನೆ ಬಗ್ಗೆ ಪೊಲೀಸರು ಸಂಪೂರ್ಣ ಮಾಹಿತಿ ನೀಡಿದ್ದಾರೆ. 

ಅಕ್ಟೋಬರ್ 12ರಂದು ಈ ಮಹಿಳೆ ತನ್ನ ಹೆಣ್ಣು ಮಗು ಕಾಣುತ್ತಿಲ್ಲ ಎಂದು ಹೇಳಿಕೊಂಡಿದ್ದಾಳೆ. ಗಾಬರಿಗೊಂಡ ಕುಟುಂಬದವರು ಮಗುವನ್ನು ಹುಡುಕಲು ಪ್ರಾರಂಭ ಮಾಡಿದ್ದಾರೆ. ಎಲ್ಲ ಕಡೆ ಹುಡುಕಿದ ಬಳಿಕ ಅವರ ಮನೆಯ ಮೇಲಿದ್ದ ನೀರಿನ ಟ್ಯಾಂಕ್​​ನಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ.  ತನಿಖೆ ನಡೆಸಿದ ಪೊಲೀಸರು ಅಕ್ಟೋಬರ್​ 21ರಂದು ಮಹಿಳೆ ಮತ್ತಾಕೆಯ ಪತಿಯನ್ನು ಬಂಧಿಸಿದ್ದಾರೆ. ಅಂದಹಾಗೆ ಮಹಿಳೆ ತನ್ನ ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಲ್ಲುವ ಸಂದರ್ಭದಲ್ಲಿ ಆಕೆಯ ಪತಿ ಮನೆಯಲ್ಲಿಯೇ ಆನ್​​ಲೈನ್​ ಕ್ಲಾಸ್​ ತೆಗೆದುಕೊಳ್ಳುತ್ತಿದ್ದ ಎಂಬುದು ಗೊತ್ತಾಗಿದೆ.

2018ರಿಂದಲೂ ಈ ಮಹಿಳೆ ತಾವು ಪ್ರತ್ಯೇಕವಾಗಿ ವಾಸಿಸೋಣ ಎಂದು ಪತಿಯನ್ನು ಒತ್ತಾಯಿಸುತ್ತಲೇ ಇದ್ದಳು. ಆದರೆ ಆಗಿರಲಿಲ್ಲ. ಈಗ ಅದೇ ಸಿಟ್ಟಿಗೆ ಮೂರು ತಿಂಗಳ ಮಗುವನ್ನು ಕೊಂದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಆಕೆ ಮಗುವನ್ನು ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದರೂ ಅದರ ಹಿಂದಿನ ಕಾರಣವನ್ನು ಇನ್ನೂ ಸ್ಪಷ್ಟವಾಗಿ ತಿಳಿಸಿಲ್ಲ. ವಿಚಾರಣೆ ಮುಂದುವರಿಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಉಪ್ಪಾರ ಸಮುದಾಯದ ಅಭಿವೃದ್ಧಿಗೆ 50 ಕೋಟಿ ರೂಪಾಯಿ ನೀಡುವುದಾಗಿ ಬಸವರಾಜ ಬೊಮ್ಮಾಯಿ ಭರವಸೆ

Jaguar: ‘ಜಾಗ್ವಾರ್’ ಚಿತ್ರಕ್ಕೆ 5 ವರ್ಷಗಳ ಸಂಭ್ರಮ; ದಾಸರಹಳ್ಳಿಯಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಿಖಿಲ್

Published On - 5:29 pm, Sun, 24 October 21