ಮುಲ್ಲಪೆರಿಯಾರ್ ಡ್ಯಾಮ್ ನೀರಿನ ಮಟ್ಟ ಹೆಚ್ಚಳ: ಮುಂಜಾಗ್ರತೆಗಾಗಿ ಎಂಕೆ ಸ್ಟಾಲಿನ್​ಗೆ ಪತ್ರ ಬರೆದ ಪಿಣರಾಯಿ ವಿಜಯನ್

Mullaperiyar Dam: ಮುಲ್ಲಪೆರಿಯಾರ್ ಡ್ಯಾಮ್ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಇದ್ದು ಉಸ್ತುವಾರಿಯನ್ನು ತಮಿಳುನಾಡು ಸರ್ಕಾರ ನೋಡಿಕೊಳ್ಳುತ್ತಿದೆ. ಈ ಡ್ಯಾಮ್​ 1895 ರಲ್ಲಿ ಬ್ರಿಟೀಷರು ನಿರ್ಮಿಸಿದ್ದಾಗಿದೆ. ತಮಿಳುನಾಡಿನ ಮಧುರೈಗೆ ನೀರಿನ ಪೂರೈಕೆ ನೋಡಿಕೊಳ್ಳಲು ಈ ಡ್ಯಾಮ್ ಕಟ್ಟಲಾಗಿದೆ.

ಮುಲ್ಲಪೆರಿಯಾರ್ ಡ್ಯಾಮ್ ನೀರಿನ ಮಟ್ಟ ಹೆಚ್ಚಳ: ಮುಂಜಾಗ್ರತೆಗಾಗಿ ಎಂಕೆ ಸ್ಟಾಲಿನ್​ಗೆ ಪತ್ರ ಬರೆದ ಪಿಣರಾಯಿ ವಿಜಯನ್
ಎಂಕೆ ಸ್ಟಾಲಿನ್​ಗೆ ಪತ್ರ ಬರೆದ ಪಿಣರಾಯಿ ವಿಜಯನ್
Follow us
TV9 Web
| Updated By: ganapathi bhat

Updated on:Oct 24, 2021 | 9:00 PM

ತಿರುವನಂತಪುರ: ಮುಲ್ಲಪೆರಿಯಾರ್ ಡ್ಯಾಮ್​ನಿಂದ ಹಂತಹಂತವಾಗಿ ನೀರು ಬಿಡುಗಡೆ ಮಾಡುವಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​ಗೆ ಪತ್ರ ಬರೆದಿದ್ದಾರೆ. ಡ್ಯಾಮ್​ನ ನೀರಿನ ಮಟ್ಟ ಏರಿಕೆ ಆಗುತ್ತಿದೆ. ಈ ಬಗ್ಗೆ ತಮಿಳುನಾಡಿನಿಂದ ಮೊದಲ ಎಚ್ಚರಿಕೆ ಅಕ್ಟೋಬರ್ 23 ರಂದು ಹೇಳಲಾಗಿತ್ತು.

ಇಂದು (ಅಕ್ಟೋಬರ್ 24) ಪಿಣರಾಯಿ ವಿಜಯನ್ ತಮ್ಮ ಪತ್ರದಲ್ಲಿ, ಕೇರಳದಲ್ಲಿ ಇತ್ತೀಚೆಗೆ ಉಂಟಾದ ಪ್ರವಾಹ ಪರಿಸ್ಥಿತಿ, ಭೂಕುಸಿತ ಪ್ರಕರಣಗಳನ್ನು ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಡ್ಯಾಮ್​ನ ನೀರಿನ ಮಟ್ಟವನ್ನು ಗಮನಿಸಬೇಕು. ಅದರಿಂದಾಗಿ ಅಹಿತಕರ ಘಟನೆಗಳು ಆಗದಂತೆ ತಡೆಯಬೇಕು ಎಂದು ಕೇಳಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದೂ ಹೇಳಿದ್ದಾರೆ.

ಮುಲ್ಲಪೆರಿಯಾರ್ ಡ್ಯಾಮ್ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಇದ್ದು ಉಸ್ತುವಾರಿಯನ್ನು ತಮಿಳುನಾಡು ಸರ್ಕಾರ ನೋಡಿಕೊಳ್ಳುತ್ತಿದೆ. ಈ ಡ್ಯಾಮ್​ 1895 ರಲ್ಲಿ ಬ್ರಿಟೀಷರು ನಿರ್ಮಿಸಿದ್ದಾಗಿದೆ. ತಮಿಳುನಾಡಿನ ಮಧುರೈಗೆ ನೀರಿನ ಪೂರೈಕೆ ನೋಡಿಕೊಳ್ಳಲು ಈ ಡ್ಯಾಮ್ ಕಟ್ಟಲಾಗಿದೆ.

ಅಕ್ಟೋಬರ್ 23ರಂದು ಮುಲ್ಲಪೆರಿಯಾರ್ ಡ್ಯಾಮ್​ನ ನೀರಿನ ಮಟ್ಟ 136 ಅಡಿಗಳಷ್ಟು ಆಗಿತ್ತು. ಹಾಗೂ ಈ ಬಗ್ಗೆ ತಮಿಳುನಾಡು ಸರ್ಕಾರ ಇಡುಕ್ಕಿ ಜಿಲ್ಲಾಡಳಿತಕ್ಕೆ ಎಚ್ಚರಿಕೆಯನ್ನೂ ನೀಡಿತ್ತು. ಡ್ಯಾಮ್​ನ ಹೊರಹರಿವಿನ ಭಾಗದಲ್ಲಿ ವಾಸಿಸುವ ಜನರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಹೇಳಲಾಗಿತ್ತು. ಭಾನುವಾರ 5 ಗಂಟೆಯಂತೆ, ಇಲ್ಲಿನ ನೀರಿನ ಮಟ್ಟ 136.90 ಅಡಿ ಆಗಿದೆ.

ಭಾರತೀಯ ಹವಾಮಾನ ಇಲಾಖೆ(India Meteorological Department) ಅಕ್ಟೋಬರ್​ 25ರವರೆಗೂ ಕೇರಳದ ಹಲವು ಜಿಲ್ಲೆಗಳಲ್ಲಿ ಆರೆಂಜ್​ ಮತ್ತು ಯೆಲ್ಲೋ ಅಲರ್ಟ್​​ ಘೋಷಿಸಿದೆ. ಅದರಲ್ಲಿ ಕೊಟ್ಟಾಯಂ, ಇಡುಕ್ಕಿ, ಪಲಕ್ಕಾಡ್​​, ಮಲಪ್ಪುರಂ, ಕೊಯಿಕ್ಕೊಡ್​, ವಯಾನಾಡ್​ ಮತ್ತು ಕಣ್ಣೂರು, ಪಥನಂತಿಟ್ಟ ಜಿಲ್ಲೆಗಳಲ್ಲಿ ಆರೆಂಜ್​ ಅಲರ್ಟ್​ ಹೇರಲಾಗಿದ್ದು, ತಿರುವನಂತಪುರಂ, ಕೊಲ್ಲಂ, ಆಲಪ್ಪುಳ, ಎರ್ನಾಕುಲಂ, ತ್ರಿಶೂರ್ ಮತ್ತು ಕಾಸರಗೋಡು ಜಿಲ್ಲೆಗಳಿಗೆ  ಹಳದಿ ಎಚ್ಚರಿಕೆ ನೀಡಲಾಗಿದೆ. ಆರೆಂಜ್​ ಅಲರ್ಟ್​ ಎಂದರೆ 6 ಸಿಎಂನಿಂದ 20 ಸಿಎಂನವರೆಗೆ ಮಳೆಯಾಗಬಹುದು ಎಂಬ ಎಚ್ಚರಿಕೆಯಾಗಿದೆ. ಹಾಗೇ ಹಳದಿ ಅಲರ್ಟ್​ ಎಂದರೆ 6ಸಿಎಂನಿಂದ 11 ಸಿಎಂವರೆಗೆ ಮಳೆಯಾಗಬಹುದು ಎಂಬ ಮುನ್ಸೂಚನೆಯಾಗಿದೆ.

ಸದ್ಯ ಕೇರಳದಲ್ಲಿ ನೈಋತ್ಯ ಮಾನ್ಸೂನ್​ ಸಕ್ರಿಯವಾಗಿದೆ. ಹೀಗಾಗಿ ಕೇರಳದ ಬಹುತೇಕ ಪ್ರದೇಶಗಳಲ್ಲಿ ಮತ್ತು ಲಕ್ಷದ್ವೀಪದ ವಿವಿಧ ಕಡೆಗಳಲ್ಲಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹಾಗೇ, ಇಂದು ಕೇರಳದ ಕರಾವಳಿ ತೀರದಲ್ಲಿ ಗಾಳಿಯ ವೇಗ ಗಂಟೆಗೆ 40-50 ಕಿಮೀ ಇರಬಹುದಾದ ಹಿನ್ನೆಲೆಯಲ್ಲಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯಬಾರದೆಂದು ಸೂಚಿಸಲಾಗಿದೆ.

ಇದನ್ನೂ ಓದಿ: Kerala Floods: ಕರ್ನಾಟಕ ಬಿಜೆಪಿಯಿಂದ ಕೇರಳಕ್ಕೆ ಅಗತ್ಯ ವಸ್ತುಗಳ ರವಾನೆ

ಇದನ್ನೂ ಓದಿ: ಕೇರಳದಲ್ಲಿ ಅ.25ರವರೆಗೂ ಮಳೆಯ ಎಚ್ಚರಿಕೆ; 8 ಜಿಲ್ಲೆಗಳಲ್ಲಿ ಐಎಂಡಿಯಿಂದ ಆರೆಂಜ್​ ಅಲರ್ಟ್​​

Published On - 8:57 pm, Sun, 24 October 21