ಸಿಡಿಲಿಗೆ ಹರಿದ್ವಾರದ ದೇಗುಲ ಗೋಡೆ ಕುಸಿತ, ಭಕ್ತರನ್ನ ಆ ಹರಿಯೇ ಕಾಪಾಡಿದನಾ?
ಹರಿದ್ವಾರ: ದೇಶದ ಪ್ರಮುಖ ಯಾತ್ರಸ್ಥಳಗಲ್ಲಿ ಒಂದಾದ ಉತ್ತರಾಖಂಡದ ಹರಿದ್ವಾರಲ್ಲಿ ಸಂಭವಿಸಿದ ಸಿಡಿಲು ಅವಘಡದಲ್ಲಿ ಗೋಡೆ ಕುಸಿದು ಬಿದ್ದ ಪರಿಣಾಮ ಭಾರೀ ತೊಂದರೆಯಾದ ಘಟನೆ ಸಂಭವಿಸಿದೆ. ಹೌದು ಕಳೆದ ಕೆಲದಿನಗಳಿಂದ ಉತ್ತರಾಖಂಡದಲ್ಲಿ ಮೇಘಸ್ಫೋಟದ ಮಳೆ ಸುರಿಯುತ್ತಿದೆ. ಅದು ಯಾವ ಮಟ್ಟಿಗೆ ಅಂದ್ರೆ ಭಾರೀ ಸಿಡಿಲಿಗೆ ಹರಿದ್ವಾರದ ಹರಿ ಕಿ ಪೌರಿಯ ಬ್ರಹ್ಮಕುಂಡ ಬಳಿಯ ವಿದ್ಯುತ್ ಟ್ರಾನ್ಸಫಾರ್ಮರ್ ಸುಟ್ಟುಹೋಗಿದೆ. ಇದಕ್ಕೆ ಹೊಂದಿಕೊಂಡಿದ್ದ ಗೋಡೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಈ ಸಮಯದಲ್ಲಿ ಯಾವುದೇ ಭಕ್ತರು ಸ್ಥಳದಲ್ಲಿರಲಿಲ್ಲ. ಹೀಗಾಗಿ ಯಾವುದೇ ಸಾವು ನೋವು […]
ಹರಿದ್ವಾರ: ದೇಶದ ಪ್ರಮುಖ ಯಾತ್ರಸ್ಥಳಗಲ್ಲಿ ಒಂದಾದ ಉತ್ತರಾಖಂಡದ ಹರಿದ್ವಾರಲ್ಲಿ ಸಂಭವಿಸಿದ ಸಿಡಿಲು ಅವಘಡದಲ್ಲಿ ಗೋಡೆ ಕುಸಿದು ಬಿದ್ದ ಪರಿಣಾಮ ಭಾರೀ ತೊಂದರೆಯಾದ ಘಟನೆ ಸಂಭವಿಸಿದೆ.
ಹೌದು ಕಳೆದ ಕೆಲದಿನಗಳಿಂದ ಉತ್ತರಾಖಂಡದಲ್ಲಿ ಮೇಘಸ್ಫೋಟದ ಮಳೆ ಸುರಿಯುತ್ತಿದೆ. ಅದು ಯಾವ ಮಟ್ಟಿಗೆ ಅಂದ್ರೆ ಭಾರೀ ಸಿಡಿಲಿಗೆ ಹರಿದ್ವಾರದ ಹರಿ ಕಿ ಪೌರಿಯ ಬ್ರಹ್ಮಕುಂಡ ಬಳಿಯ ವಿದ್ಯುತ್ ಟ್ರಾನ್ಸಫಾರ್ಮರ್ ಸುಟ್ಟುಹೋಗಿದೆ. ಇದಕ್ಕೆ ಹೊಂದಿಕೊಂಡಿದ್ದ ಗೋಡೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಈ ಸಮಯದಲ್ಲಿ ಯಾವುದೇ ಭಕ್ತರು ಸ್ಥಳದಲ್ಲಿರಲಿಲ್ಲ. ಹೀಗಾಗಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಆದ್ರೆ ವಿದ್ಯುತ್ ಟ್ರಾನ್ಸಫಾರ್ಮರ್ ಸುಟ್ಟ ಪರಿಣಾಮ ಹರಿದ್ವಾರ ಕೆಲ ಹೊತ್ತು ಕತ್ತಲಲ್ಲಿ ಮುಳಗಿದೆ.
ಇದಾದ ನಂತರ ಸ್ಥಳೀಯ ಪೊಲೀಸರು ಮತ್ತು ಶ್ರೀ ಗಂಗಾ ಸಭಾ ಸ್ವಯಂ ಸೇವಕರು ಬ್ರಹ್ಮಕುಂಡ ಪ್ರದೇಶವನ್ನ ಬ್ಯಾರಿಕೇಡ್ ಹಾಕಿ ಸಾರ್ವಜನಿಕರು ಬಾರದಂತೆ ತಡೆ ಹಾಕಿದ್ದಾರೆ. ನಂತರ ಸ್ಥಳದಲ್ಲಿದ್ದ ಗೋಡೆಯ ಮಣ್ಣನ್ನು ತೆರವುಗೊಳಿಸಿದ್ದಾರೆ.
Uttarakhand: A wall near Har Ki Pauri collapsed in an incident of a lightning strike in Haridwar last night. No injuries reported. pic.twitter.com/mXZAj7MgoN
— ANI (@ANI) July 21, 2020
Published On - 3:21 pm, Tue, 21 July 20