+ve ನ್ಯೂಸ್: ಅಮೆರಿಕದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಮೆಕಾನಿಕ್ ಮಗ!
ಅಲಿಗಢ:ಉತ್ತರ ಪ್ರದೇಶದ ಅಲಿಗಢ ನಗರದ ಸಾಮಾನ್ಯ ಮೆಕಾನಿಕ್ ಒಬ್ಬರ ಮಗ ಈಗ ಅಮೆರಿಕದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾನೆ. ಹೌದು ಅಲಿಗಢದ ಗ್ಯಾರೆಜ್ ಒಂದರಲ್ಲಿ 25 ವರ್ಷಗಳಿಂದ ಮೋಟಾರ್ ಮೆಕಾನಿಕ್ ಆಗಿರುವ ವ್ಯಕ್ತಿಯೊಬ್ಬರ ಮಗನಾಗಿರುವ ಮೊಹ್ಮದ್ ಶದಾಬ್ ತನ್ನ ಪ್ರತಿಭೆಯಿಂದ ದೇಶಕ್ಕ ಕೀರ್ತಿ ತಂದಿದ್ದಾನೆ. ಕಳೆದ ವರ್ಷ ಭಾರತ-ಅಮೆರಿಕ ಯೂಥ್ ಎಕ್ಸ್‌ಚೆಂಜ್ ಪ್ರೋಗ್ರಾಮ್‌ನಡಿ ಕೆನ್ನಡಿ-ಲೂಗರ್ ಯುಥ್ ಎಕ್ಸ್‌ಚೆಂಜ್ ಸ್ಕಾಲರ್ ಶಿಪ್‌ಗೆ ಆಯ್ಕೆಯಾಗಿದ್ದ ಶದಾಬ್, ಒಂದು ವರ್ಷ ಅಮೆರಿಕಾದಲ್ಲಿ ಸ್ಟಡಿ ಮಾಡಿದ್ದಾನೆ. ಅಷ್ಟೇ ಅಲ್ಲ ಅಲ್ಲಿನ ಸುಮಾರು 800 ವಿದ್ಯಾರ್ಥಿಗಳಲ್ಲಿ […]
ಅಲಿಗಢ:ಉತ್ತರ ಪ್ರದೇಶದ ಅಲಿಗಢ ನಗರದ ಸಾಮಾನ್ಯ ಮೆಕಾನಿಕ್ ಒಬ್ಬರ ಮಗ ಈಗ ಅಮೆರಿಕದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾನೆ. ಹೌದು ಅಲಿಗಢದ ಗ್ಯಾರೆಜ್ ಒಂದರಲ್ಲಿ 25 ವರ್ಷಗಳಿಂದ ಮೋಟಾರ್ ಮೆಕಾನಿಕ್ ಆಗಿರುವ ವ್ಯಕ್ತಿಯೊಬ್ಬರ ಮಗನಾಗಿರುವ ಮೊಹ್ಮದ್ ಶದಾಬ್ ತನ್ನ ಪ್ರತಿಭೆಯಿಂದ ದೇಶಕ್ಕ ಕೀರ್ತಿ ತಂದಿದ್ದಾನೆ.
ಕಳೆದ ವರ್ಷ ಭಾರತ-ಅಮೆರಿಕ ಯೂಥ್ ಎಕ್ಸ್‌ಚೆಂಜ್ ಪ್ರೋಗ್ರಾಮ್‌ನಡಿ ಕೆನ್ನಡಿ-ಲೂಗರ್ ಯುಥ್ ಎಕ್ಸ್‌ಚೆಂಜ್ ಸ್ಕಾಲರ್ ಶಿಪ್‌ಗೆ ಆಯ್ಕೆಯಾಗಿದ್ದ ಶದಾಬ್, ಒಂದು ವರ್ಷ ಅಮೆರಿಕಾದಲ್ಲಿ ಸ್ಟಡಿ ಮಾಡಿದ್ದಾನೆ. ಅಷ್ಟೇ ಅಲ್ಲ ಅಲ್ಲಿನ ಸುಮಾರು 800 ವಿದ್ಯಾರ್ಥಿಗಳಲ್ಲಿ ಪ್ರಥಮ ಸ್ಥಾನಗಳಿಸಿ ಅತ್ಯುತ್ತಮ ವಿದ್ಯಾರ್ಥಿ ಎಂದು ಪುರಸ್ಕಾರವನ್ನು ಕೂಡಾ ಗಳಿಸಿದ್ದಾನೆ.
ಮಗನ ಈ ಸಾಧನೆಗೆ ಭಾರೀ ಖುಷಿಯಲ್ಲಿರುವ ತಂದೆ ಆರ್ಶದ್ ನೂರ್, ತನ್ನ ಮಗ ಹೀಗೆ ಚೆನ್ನಾಗಿ ಓದಿ ಐಎಎಸ್ ಆಫೀಸರ್ ಆಗಿ ದೇಶದ ಸೇವೆ ಮಾಡಲಿ ಎನ್ನುವ ಆಶಯ ಹೊಂದಿದ್ದಾರೆ. ಆದ್ರೆ ಮಗ ಮಾತ್ರ ತಾನು ಇನ್ನು ಚೆನ್ನಾಗಿ ಓದಿ ವಿಶ್ವಸಂಸ್ಥೆಯಲ್ಲಿ ಮಾನವ ಹಕ್ಕುಗಳ ಅಧಿಕಾರಿಯಾಗುವ ಗುರಿ ಹೊಂದಿದ್ದಾನೆ.
Published On - 1:36 pm, Tue, 21 July 20