ಚಲಿಸುತ್ತಿದ್ದ ರೈಲು ಹತ್ತುವ ವೇಳೆ ಕಾಲು ಜಾರಿ ಪ್ಲಾಟ್‌ಫಾರ್ಮ್ ಮೇಲೆ ಬಿದ್ದ ಮಹಿಳೆ, ರಕ್ಷಿಸಿದ ಆರ್‌ಪಿಎಫ್ ಸಿಬ್ಬಂದಿ
ಮಹಿಳೆಯೊಬ್ಬರು ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಕಾಲು ಜಾರಿ ಪ್ಲಾಟ್‌ಫಾರ್ಮ್ ಮೇಲೆ ಬಿದ್ದು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಗುಜರಾತ್ನ ಗಾಂಧಿನಗರ ರೈಲು ನಿಲ್ದಾಣದಲ್ಲಿ ನಡೆದಿದೆ.
ಗಾಂಧಿನಗರ, ಜು.31: ಮಹಿಳೆಯೊಬ್ಬರು ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಕಾಲು ಜಾರಿ ಪ್ಲಾಟ್‌ಫಾರ್ಮ್ ಮೇಲೆ ಬಿದ್ದು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಗುಜರಾತ್ನ ಗಾಂಧಿನಗರ ರೈಲು ನಿಲ್ದಾಣದಲ್ಲಿ ನಡೆದಿದೆ. ರೈಲ್ವೆ ಪೊಲೀಸ್ ಪಡೆ (ಆರ್‌ಪಿಎಫ್) ಇನ್ಸ್ಪೆಕ್ಟರ್ರೊಬ್ಬರ ಸಮಯಪ್ರಜ್ಞೆಯಿಂದ ಆ ಮಹಿಳೆಯನ್ನು ಕಾಪಾಡಿದ್ದಾರೆ ಎಂದು ನ್ಯೂಸ್9 ವರದಿ ಮಾಡಿದೆ. ಈ ಘಟನೆಗೆ ಸಂಬಂಧಿಸಿದಂತೆ ದೃಶ್ಯವೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ವಿಡಿಯೋದಲ್ಲಿ ಕೆಂಪು ಮತ್ತು ಕಿತ್ತಳೆ ಬಣ್ಣದ ಸೀರೆಯನ್ನು ಧರಿಸಿದ ಮಹಿಳೆ ತನ್ನ ಕಂಪಾರ್ಟ್‌ಮೆಂಟ್ ಅನ್ನು ಹುಡುಕುತ್ತಾ ರೈಲಿನ ಕಡೆಗೆ ಹೋಗುತ್ತಿರುವುದನ್ನು ಕಾಣಬಹುದು. ಬಳಿಕ ಆಕೆ ಒಂದು ಕೋಚ್ ಹತ್ತಲು ಪ್ರಯತ್ನಿಸಿದಾಗ ರೈಲು ಮುಂದೆ ಚಲಿಸಿದೆ. ಈ ಸಮಯದಲ್ಲಿ ಮಹಿಳೆ ಕಾಲು ಜಾರಿ ರೈಲಿನ ಬಾಗಿಲು ಹಿಡಿದುಕೊಂಡು ಪ್ಲಾಟ್‌ಫಾರ್ಮ್ ಮೇಲೆ ಬಿದ್ದಿದ್ದರೆ. ರೈಲು ಚಲಿಸುತ್ತಿದ್ದ ಕಾರಣ, ಆಕೆಯನ್ನು ಸ್ವಲ್ಪ ದೂರ ವರೆಗೆ ಎಳೆದುಕೊಂಡು ಹೋಗಿದೆ. ಬಳಿಕ ಅಲ್ಲಿದ್ದ ಪೊಲೀಸ್ ಸಿಬ್ಬಂದಿ ಮಹಿಳೆಯನ್ನು ಕಾಪಾಡಿರುವುದನ್ನು ನೀವು ಈ ವಿಡಿಯೋದಲ್ಲಿ ಕಾಣಬಹುದು.
ಇದನ್ನೂ ಓದಿ: ಗುಜರಾತ್ನಲ್ಲಿ ಎರಡು ವರ್ಷದ ಮಗುವನ್ನು ಕಚ್ಚಿ ಕೊಂದ ಬೀದಿ ನಾಯಿಗಳು
ಇಂತಹದೇ ಒಂದು ಘಟನೆ ಜು.10ರಂದು ಮಹಾರಾಷ್ಟ್ರದ ಥಾಣೆ ಬಳಿಯ ದಿವಾ ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ಗರೀಬ್ ರಥ ಎಕ್ಸ್‌ಪ್ರೆಸ್ ರೈಲಿನಿಂದ ಬಿದ್ದ ಪ್ರಯಾಣಿಕನನ್ನು ಆರ್‌ಪಿಎಫ್ ಸಿಬ್ಬಂದಿ ರಕ್ಷಿಸಿದ್ದರು. ಅವರ ಸಮಯಪ್ರಜ್ಞೆಯಿಂದ ಒಂದು ಜೀವ ಉಳಿದ್ದಿದೆ ಎಂದು ಅವರ ಧೈರ್ಯಕ್ಕೆ ಮೆಚ್ಚಿ ಭಾರತೀಯ ರೈಲ್ವೇಯ ಆರ್‌ಪಿಎಫ್ ವಿಭಾಗ ಅವರನ್ನು ಸನ್ಮಾನಿಸಿದೆ. ಇಂತಹ ಅನೇಕ ಘಟನೆ ದೇಶದ ಬೇರೆ ಬೇರೆ ರೈಲು ನಿಲ್ದಾಣಗಳಲ್ಲಿ ನಡೆದಿದೆ. ಇದೀಗ ಭಾರತೀಯ ರೈಲ್ವೇ ಪ್ರಯಾಣಿಕರಿಗೆ ಜಾಗ್ರತೆ ವಹಿಸುವಂತೆ ಮತ್ತು ಸಿಬ್ಬಂದಿಗಳು ಪ್ರಯಾಣಿಕರ ಬಗ್ಗೆ ಹೆಚ್ಚು ಕಾಳಜಿ ವಹಿಸುವಂತೆ ತಿಳಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:26 pm, Mon, 31 July 23