Aadhaar Verification: ಗುರುತಿನ ದಾಖಲೆಯಾಗಿ ಆಧಾರ್ ಸ್ವೀಕರಿಸುವ ಮೊದಲು ಪ್ರಮಾಣಿಸಿಕೊಳ್ಳಿ: ಮಂಗಳೂರು ಕೃತ್ಯದ ನಂತರ ಎಚ್ಚರಿಸಿದ UIDAI

ವ್ಯಕ್ತಿಯ ಗುರುತಿನ ದಾಖಲೆಗಾಗಿ ಭೌತಿಕ ಅಥವಾ ಎಲೆಕ್ಟ್ರಾನಿಕ್ ರೂಪದಲ್ಲಿ ಆಧಾರ್( Aadhaar) ಸ್ವೀಕರಿಸುವ ಮೊದಲು ಆಧಾರ್ ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ಯುಐಡಿಎಐ ಹೇಳಿದೆ.

Aadhaar Verification: ಗುರುತಿನ ದಾಖಲೆಯಾಗಿ ಆಧಾರ್ ಸ್ವೀಕರಿಸುವ ಮೊದಲು ಪ್ರಮಾಣಿಸಿಕೊಳ್ಳಿ: ಮಂಗಳೂರು ಕೃತ್ಯದ ನಂತರ ಎಚ್ಚರಿಸಿದ UIDAI
Aadhaar
Follow us
TV9 Web
| Updated By: ನಯನಾ ರಾಜೀವ್

Updated on: Nov 25, 2022 | 12:10 PM

ವ್ಯಕ್ತಿಯ ಗುರುತಿನ ದಾಖಲೆಗಾಗಿ ಭೌತಿಕ ಅಥವಾ ಎಲೆಕ್ಟ್ರಾನಿಕ್ ರೂಪದಲ್ಲಿ ಆಧಾರ್( Aadhaar) ಸ್ವೀಕರಿಸುವ ಮೊದಲು ಆಧಾರ್ ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಹೇಳಿದೆ. ಈ ನಿಟ್ಟಿನಲ್ಲಿ ಯುಐಡಿಎಐ ಎಲ್ಲಾ ರಾಜ್ಯಗಳಿಗೆ ಮನವಿ ಮಾಡಿದ್ದು, ಆಧಾರ್ ಕಾರ್ಡ್​ ಅನ್ನು ಗುರುತಿನ ಪುರಾವೆ ಅಥವಾ ವಿಳಾಸದ ಪುರಾವೆಗಾಗಿ ಸ್ವೀಕರಿಸಿದರೆ , ಆಧಾರ್ ಸಂಖ್ಯೆಯನ್ನು ಪರಿಶೀಲಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಬೇಸ್​ನಲ್ಲಿರುವ ಬಾರ್ ಕೋಡ್​ ಅನ್ನು ಸ್ಕ್ಯಾನ್ ಮಾಡುವ ಮೂಲಕ ಪರಿಶೀಲನೆಯನ್ನು ಮಾಡಬಹುದು.

ಆಧಾರ್ ಹೊಂದಿರುವವರ ಒಪ್ಪಿಗೆ ಬಳಿಕ ಆಧಾರ್ ಸಂಖ್ಯೆಯ ಪರಿಶೀಲನಯು ಆಧಾರ್ ಪತ್ರ, ಇ ಆಧಾರ್, ಆಧಾರ್ ಪಿವಿಸಿ ಕಾರ್ಡ್​ನಂತಹ ಸಂಬಂಧಿತ ವ್ಯಕ್ತಿ ನೀಡಿದ ಆಧಾರ್​ ಅನ್ನು ಪರಿಶೀಲಿಸಬೇಕು ಎಂದು ಹೇಳಿದೆ. ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರದ ಪ್ರಕಾರ, ಇದು ಆಧಾರ್ ನಕಲಿಯಾಗುವುದನ್ನು ತಡೆಯುತ್ತದೆ. ಹೆಚ್ಚಿನ ಫೋರ್ಜರಿ ಫೋಟೊಶಾಪ್ ಮೂಲಕ ನಡೆಯುತ್ತದೆ.

ಒಬ್ಬ ವ್ಯಕ್ತಿಯು ತನ್ನ ಆಧಾರ್​ನ ಪ್ರತಿಯನ್ನು ರೆಸ್ಟೋರೆಂಟ್​ಗೆ ಅಥವಾ ಬೇರೆಡೆಗೆ ನೀಡಿದ್ದರೆ ವಂಚಕರು ಅಂತಹ ದಾಖಲೆಗಳಲ್ಲಿ ಅವರ ಫೋಟೊವನ್ನು ಇಟ್ಟುಕೊಂಡು ಅದನ್ನು ನಕಲು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.

ಅಥವಾ ಫೋಟೊಶಾಪ್ ಬಳಸಿ ಬೇರೆಯವರ ಆಧಾರ್ ಕಾರ್ಡ್​ನಲ್ಲಿ ತಮ್ಮ ಫೋಟೋ ಹಾಕಿಕೊಳ್ಳುತ್ತಾರೆ. ನಂತರ ಈ ಮೂಲಕ ಅವರು ತಮ್ಮ ತಪ್ಪು ಯೋಜನೆಗಳನ್ನು ಕಾರ್ಯಗತಗೊಳಿಸುತ್ತಾರೆ. ಆಧಾರ್ ಅನ್ನು ದಾಖಲೆಯಾಗಿ ಸ್ವೀಕರಿಸುವಾಗ ಅನ್ನು ಪರಿಶೀಲಿಸದಿದ್ದರೆ ದೋಷ ಸಂಭವಿಸುವ ಸಾಧ್ಯತೆ ಇದೆ.

ಯುಐಎಡಿಐ ಪ್ರಕಾರ, ಪ್ರತಿ 12 ಅಂಕೆಗಳ ಸಂಖ್ಯೆಯೂ ಆಧಾರ್ ಆಗಿರುವುದಿಲ್ಲ, ಅಂತಹ ಪರಿಸ್ಥಿತಿಯಲ್ಲಿ, ಎಲ್ಲಾ ಸಂಸ್ಥೆಗಳು ಆಧಾರ್ ಅನ್ನು ಪರಿಶೀಲಿಸಲು ಪ್ರಾರಂಭಿಸಿದರೆ , ನಂತರ ವ್ಯಕ್ತಿಯ ಸರಿಯಾದ ಗುರುತನ್ನು ಮಾತ್ರ ವ್ಯವಸ್ಥೆಯಲ್ಲಿ ದಾಖಲಿಸಲಾಗುತ್ತದೆ ಮತ್ತು ಅದರ ದುರುಪಯೋಗವನ್ನು ನಿಲ್ಲಿಸಬಹುದು.

ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣದ ಆರೋಪಿ ಶಾರೀಕ್ ಮತ್ತೊಬ್ಬರ ಹೆಸರಿನಲ್ಲಿದ್ದ ಆಧಾರ್ ಕಾರ್ಡ್​ ಬಳಸಿಕೊಂಡಿದ್ದ. ಈ ಪ್ರಕರಣದ ನಂತರ ಆಧಾರ್ ಕಾರ್ಡ್​ ಬಳಕೆ ಬಗ್ಗೆ ಎಚ್ಚರದಿಂದ ಇರುವಂತೆ ಎಡಿಜಿಪಿ ಅಲೋಕ್ ಕುಮಾರ್ ಸಾರ್ವಜನಿಕರನ್ನು ಎಚ್ಚರಿಸಿದ್ದರು. ಇದೀಗ ಆಧಾರ್ ಸಂಖ್ಯೆ ಕೊಡುವ ವಿಶಿಷ್ಟ ಗುರುತು ಪ್ರಾಧಿಕಾರ ಸಹ ಜನರನ್ನು ಎಚ್ಚರಿಸಿದೆ.

ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ