ಚುನಾವಣಾ ಆಯೋಗದಿಂದ ಆಧಾರ್​ನೊಂದಿಗೆ ವೋಟರ್ ಐಡಿ ಲಿಂಕ್​ಗೆ ಶೀಘ್ರ ಕ್ರಮ; ಚುನಾವಣಾ  ಆಯುಕ್ತ ಜ್ಞಾನೇಶ್ ಕುಮಾರ್

ಭಾರತದ ಚುನಾವಣಾ ಆಯೋಗವು ಆಧಾರ್ ಸಂಖ್ಯೆಗಳನ್ನು ಮತದಾರರ ಫೋಟೋ ಗುರುತಿನ ಚೀಟಿಗಳೊಂದಿಗೆ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಕಾನೂನಿಗೆ ಮತ್ತು ಸುಪ್ರೀಂ ಕೋರ್ಟ್‌ನ ನಿರ್ದೇಶನಗಳಿಗೆ ಅನುಗುಣವಾಗಿ ಕಟ್ಟುನಿಟ್ಟಾಗಿ ನಡೆಸಲಾಗುವುದು ಎಂದು ಹೇಳಿದೆ. ಈ ಪ್ರಕ್ರಿಯೆಯು ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿರುತ್ತದೆ ಮತ್ತು ಸಾಂವಿಧಾನಿಕ ನಿಬಂಧನೆಗಳಿಂದ ಮಾರ್ಗದರ್ಶಿಸಲ್ಪಡುತ್ತದೆ ಎಂದು ಚುನಾವಣಾ ಆಯೋಗ ಇಂದು ನಡೆದ ಸಭೆಯ ಬಳಿಯ ಸ್ಪಷ್ಟಪಡಿಸಿದೆ.

ಚುನಾವಣಾ ಆಯೋಗದಿಂದ ಆಧಾರ್​ನೊಂದಿಗೆ ವೋಟರ್ ಐಡಿ ಲಿಂಕ್​ಗೆ ಶೀಘ್ರ ಕ್ರಮ; ಚುನಾವಣಾ  ಆಯುಕ್ತ ಜ್ಞಾನೇಶ್ ಕುಮಾರ್
Election Commission Meeting

Updated on: Mar 18, 2025 | 7:26 PM

ನವದೆಹಲಿ, ಮಾರ್ಚ್ 18: ಆಧಾರ್ ಕಾರ್ಡ್ ನೊಂದಿಗೆ ಎಪಿಕ್ (EPIC ) ಸಂಖ್ಯೆಯನ್ನು ಕೂಡಲೇ ಲಿಂಕ್ ಮಾಡಲು ಕ್ರಮ ವಹಿಸಲಾಗುವುದು ಎಂದು ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ತಿಳಿಸಿದ್ದಾರೆ. ಆಧಾರ್-ಮತದಾರರ ಗುರುತಿನ ಚೀಟಿ ಲಿಂಕ್ ಮಾಡುವ ಕುರಿತು ಚರ್ಚಿಸಲು ಚುನಾವಣಾ ಆಯೋಗವು ಕೇಂದ್ರ ಗೃಹ ಕಾರ್ಯದರ್ಶಿ, ಶಾಸಕಾಂಗ ಕಾರ್ಯದರ್ಶಿ (ಕಾನೂನು ಸಚಿವಾಲಯ), ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ (UIDAI) ಸಿಇಒ ಅವರೊಂದಿಗೆ ಇಂದು ಉನ್ನತ ಮಟ್ಟದ ಸಭೆ ನಡೆಸಿತು.

ನವದೆಹಲಿಯಲ್ಲಿ ಚುನಾವಣಾ ಭಾರತೀಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚುನಾವಣಾ ಆಯುಕ್ತರಾದ ಡಾ. ಸುಖಬೀರ್ ಸಿಂಗ್ ಸಂಧು ಮತ್ತು ಡಾ. ವಿವೇಕ್ ಜೋಶಿ ಅವರು ಕೇಂದ್ರ ಗೃಹ ಕಾರ್ಯದರ್ಶಿ, ಕಾರ್ಯದರ್ಶಿ ಶಾಸಕಾಂಗ ಇಲಾಖೆ, ಕಾರ್ಯದರ್ಶಿ ಮೇಟಿ ಮತ್ತು ಯುಐಡಿಎಐ ಮುಖ್ಯ ಕಾರ್ಯ ನಿರ್ವಣಾಧಿಕಾರಿ ಮತ್ತು ಇಸಿಐನ ತಾಂತ್ರಿಕ ತಜ್ಞರೊಂದಿಗೆ ಇಂದು ಸಭೆ ನಡೆಸಿ ಚರ್ಚಿಸಿದರು.

ಇದನ್ನೂ ಓದಿ: ಆಧಾರ್, ವೋಟರ್ ಐಡಿ ಲಿಂಕ್ ಬಗ್ಗೆ ಚರ್ಚಿಸಲು ಸಭೆ ಕರೆದ ಚುನಾವಣಾ ಆಯೋಗ

ಚುನಾವಣಾ ಆಯೋಗವು ಆರ್ಟಿಕಲ್ 326, ಆರ್‌ಪಿ ಆಕ್ಟ್, 1950 ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳ ಪ್ರಕಾರ ಕ್ರಮ ಕೈಗೊಳ್ಳುತ್ತದೆ. UIDAI ಮತ್ತು ಚುನಾವಣಾ ಆಯೋಗದ ತಜ್ಞರ ನಡುವಿನ ತಾಂತ್ರಿಕ ಸಮಾಲೋಚನೆಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ ಎಂದು ಸಭೆಯ ಬಳಿಕ ಮಾಹಿತಿ ನೀಡಲಾಗಿದೆ.

ಭಾರತದ ಸಂವಿಧಾನದ 326 ನೇ ವಿಧಿಯ ಪ್ರಕಾರ, ಮತದಾನದ ಹಕ್ಕನ್ನು ಭಾರತದ ನಾಗರಿಕರಿಗೆ ಮಾತ್ರ ನೀಡಲಾಗುವುದು. ಆಧಾರ್ ಕಾರ್ಡ್ ವ್ಯಕ್ತಿಯ ಗುರುತನ್ನು ಮಾತ್ರ ಸ್ಥಾಪಿಸುತ್ತದೆ. ಆದ್ದರಿಂದ, EPIC ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದನ್ನು ಸಂವಿಧಾನದ 326 ನೇ ವಿಧಿ, 1950 ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 23(4), 23(5) ಮತ್ತು 23(6) ರ ನಿಬಂಧನೆಗಳ ಪ್ರಕಾರ ಕ್ರಮವಹಿಸಲಾಗುವುದು.  ಅದರಂತೆ, ಯುಐಡಿಎಐ ಮತ್ತು ಇಸಿಐನ ತಾಂತ್ರಿಕ ತಜ್ಞರ ನಡುವಿನ ತಾಂತ್ರಿಕ ಸಮಾಲೋಚನೆಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ‌ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.


ಲಿಂಕ್ ಮಾಡುವುದು ಕಡ್ಡಾಯವಲ್ಲ:

ಮತದಾರರ ಪಟ್ಟಿಯೊಂದಿಗೆ ಆಧಾರ್ ಅನ್ನು ಸ್ವಯಂಪ್ರೇರಿತವಾಗಿ ಜೋಡಿಸಲು ಕಾನೂನು ಅನುಮತಿಸುತ್ತದೆ ಎಂದು ಚುನಾವಣಾ ಆಯೋಗ ಪುನರುಚ್ಚರಿಸಿದೆ. ಈ ಪ್ರಕ್ರಿಯೆಗೆ ಯಾವುದೇ ಅಂತಿಮ ಸಮಯವನ್ನು ನಿಗದಿಪಡಿಸಲಾಗಿಲ್ಲ ಎಂದು ಸರ್ಕಾರ ಸಂಸತ್ತಿಗೆ ತಿಳಿಸಿದೆ. ಮುಖ್ಯವಾಗಿ, ಆಧಾರ್ ಅನ್ನು ಲಿಂಕ್ ಮಾಡದಿರುವ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುವುದಿಲ್ಲ ಎಂದು ತಿಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

 

Published On - 7:24 pm, Tue, 18 March 25