AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Delhi MCD By-Election Result: ದೆಹಲಿ ಪಾಲಿಕೆ ಉಪಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗ; 5ರಲ್ಲಿ 4ವಾರ್ಡ್​ ಗೆದ್ದ ಆಪ್​

ವಾರ್ಡ್​ ನಂ.32 ಎನ್​, ವಾರ್ಡ್​ ನಂ.62 ಎನ್​, ವಾರ್ಡ್​ ನಂ.02 ಇ, ವಾರ್ಡ್​ ನಂ.08-ಇ ಮತ್ತು ವಾರ್ಡ್​ ನಂ.41-ಇ ಗಳಿಗೆ ಫೆಬ್ರವರಿ 28ರಂದು ಚುನಾವಣೆ ನಡೆದು ಶೇ.50ಕ್ಕಿಂತಲೂ ಹೆಚ್ಚು ಮತದಾನ ನಡೆದಿತ್ತು. ಉಪಚುನಾವಣೆಗೂ ಮೊದಲು ಈ ಐದು ವಾರ್ಡ್​ಗಳಲ್ಲಿ ನಾಲ್ಕು ವಾರ್ಡ್​ಗಳು ಆಪ್​ ಕೈಯಲ್ಲಿದ್ದವು.

Delhi MCD By-Election Result: ದೆಹಲಿ ಪಾಲಿಕೆ ಉಪಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗ; 5ರಲ್ಲಿ 4ವಾರ್ಡ್​ ಗೆದ್ದ ಆಪ್​
ಅರವಿಂದ್​ ಕೇಜ್ರಿವಾಲ್​
Lakshmi Hegde
|

Updated on: Mar 03, 2021 | 4:19 PM

Share

ದೆಹಲಿ ನಗರ ಪಾಲಿಕೆ​ ಉಪಚುನಾವಣೆಯಲ್ಲಿ ಆಮ್​ ಆದ್ಮಿ ಪಕ್ಷ (AAP)ಭರ್ಜರಿ ಜಯಸಾಧಿಸಿದೆ. ಒಟ್ಟು 5 ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಆಪ್​ 4 ಸ್ಥಾನಗಳನ್ನು ಗೆದ್ದಿದ್ದು, ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಜಯಗಳಿಸಿದೆ. ಬಿಜೆಪಿ ಒಂದೂ ಸ್ಥಾನವನ್ನು ಗೆಲ್ಲಲಾಗದೆ ತೀವ್ರ ಮುಖಭಂಗ ಅನುಭವಿಸಿದೆ. ಗುಜರಾತ್​ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಗೆದ್ದು ಬೀಗಿದ್ದ ಬಿಜೆಪಿಗೆ ಇದೊಂದು ಆಘಾತವೇ ಆಗಿದೆ.

ಭಾನುವಾರ ದೆಹಲಿ ನಗರ ಪಾಲಿಕೆಯ ಐದು ವಾರ್ಡ್​ಗಳಿಗೆ ಚುನಾವಣೆ ನಡೆದಿತ್ತು. ಈ ಐದರಲ್ಲಿ ಆಪ್​-ಕಾಂಗ್ರೆಸ್​ 4-1 ಸೀಟುಗಳನ್ನು ಹಂಚಿಕೊಂಡಿವೆ. ವಾರ್ಡ್​ ನಂ.32 ಎನ್​, ವಾರ್ಡ್​ ನಂ.62 ಎನ್​, ವಾರ್ಡ್​ ನಂ.02 ಇ, ವಾರ್ಡ್​ ನಂ.08-ಇ ಮತ್ತು ವಾರ್ಡ್​ ನಂ.41-ಇ ಗಳಿಗೆ ಫೆಬ್ರವರಿ 28ರಂದು ಚುನಾವಣೆ ನಡೆದು ಶೇ.50ಕ್ಕಿಂತಲೂ ಹೆಚ್ಚು ಮತದಾನ ನಡೆದಿತ್ತು. ಉಪಚುನಾವಣೆಗೂ ಮೊದಲು ಈ ಐದು ವಾರ್ಡ್​ಗಳಲ್ಲಿ ನಾಲ್ಕು ವಾರ್ಡ್​ಗಳು ಆಪ್​ ಕೈಯಲ್ಲಿದ್ದವು, ಒಂದು ವಾರ್ಡ್ ಬಿಜೆಪಿ ಕೈಯಲ್ಲಿತ್ತು. ಆದರೆ ಈಗ ಬಿಜೆಪಿಗೆ ಒಂದೂ ವಾರ್ಡ್​ ಕೂಡ ಸಿಗಲಿಲ್ಲ.

ಆಪ್​ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ದೆಹಲಿ ಉಪಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ಅವರು, 5ವಾರ್ಡ್​ಗಳಲ್ಲಿ, 4 ವಾರ್ಡ್​ಗಳನ್ನು ಗೆದ್ದ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಹಾಗೂ ಅಭಿನಂದನೆ ಸಲ್ಲಿಸುತ್ತೇನೆ. ದೆಹಲಿ ಜನರು ಬಿಜೆಪಿ ಆಡಳಿತವನ್ನು ಯಾವ ಕಾರಣಕ್ಕೂ ಇಷ್ಟಪಡುತ್ತಿಲ್ಲ. ಬರುವ 2022ರಲ್ಲಿ ದೆಹಲಿ ಮಹಾನಗರ ಪಾಲಿಕೆಯ ಚುನಾವಣೆ ನಡೆಯಲಿದ್ದು, ಈ ಉಪಚುನಾವಣೆ ಅದರ ಪ್ರತಿಬಿಂಬವಾಗಿದೆ. ಇದೀಗ ಆಪ್​ ನಾಲ್ಕು ವಾರ್ಡ್ ಗೆದ್ದು, ಬಿಜೆಪಿ ಸಂಪೂರ್ಣ ಸೋತಿದೆ. ಹಾಗೇ ಮುಂದಿನ ವರ್ಷ 272 ವಾರ್ಡ್​ಗಳಿಗೆ ನಡೆಯಲಿರುವ ಚುನಾವಣೆಯಲ್ಲೂ ಇದೇ ಮರುಕಳಿಸಲಿದೆ. ಬಿಜೆಪಿ ಸಂಪೂರ್ಣವಾಗಿ ಸೋಲುಣ್ಣಲಿದೆ ಎಂದು ಸಿಸೋಡಿಯಾ ಹೇಳಿದ್ದಾರೆ.

ಇದನ್ನೂ ಓದಿ: ಗುಜರಾತ್ ಸ್ಥಳೀಯ ಸಂಸ್ಥೆಗಳ ಚುನಾವಣೆ: ಬಿಜೆಪಿ ಮೇಲುಗೈ, ಆಪ್ ಗಮನಾರ್ಹ ಸಾಧನೆ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ