BBC ಶೋನಲ್ಲಿ ಪ್ರಧಾನಿ ನರೇಂದ್ರ ಮೋದಿ ತಾಯಿ ಬಗ್ಗೆ ಕೆಟ್ಟದಾಗಿ ಮಾತಾಡಿದ ರೇಡಿಯೋ ಕಾಲರ್; ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆ

BBC Asian Network ‘Big Debate’: ಘಟನೆಯ ವಿಡಿಯೊವನ್ನು ಜನರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಟ್ವಿಟರ್ ಮತ್ತು ಇತರ ವೇದಿಕೆಗಳಲ್ಲಿ ಷೇರ್ ಮಾಡಿಕೊಂಡು ಅಸಮಾಧಾನ ಹೊರಹಾಕಿದ್ದಾರೆ.

BBC ಶೋನಲ್ಲಿ ಪ್ರಧಾನಿ ನರೇಂದ್ರ ಮೋದಿ ತಾಯಿ ಬಗ್ಗೆ ಕೆಟ್ಟದಾಗಿ ಮಾತಾಡಿದ ರೇಡಿಯೋ ಕಾಲರ್; ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆ
ಪ್ರಧಾನಿ ನರೇಂದ್ರ ಮೋದಿ ಮತ್ತು ಹೀರಾಬೆನ್ ಮೋದಿ
Follow us
TV9 Web
| Updated By: ganapathi bhat

Updated on:Apr 06, 2022 | 7:28 PM

BBC Asian Network ‘Big Debate’: ಬಿಬಿಸಿ ಏಷಿಯನ್ ನೆಟ್​ವರ್ಕ್ ಬಿಗ್ ಡಿಬೇಟ್ ರೇಡಿಯೋ ಶೋನ ಸಂಚಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ರೇಡಿಯೋ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಒಬ್ಬಾತ ಭಾರತದ ಪ್ರಧಾನಿ ನರೇಂದ್ರ ಮೋದಿ ತಾಯಿಯ ಬಗ್ಗೆ ತಪ್ಪಾಗಿ ಮಾತನಾಡಿರುವ ಕಾರಣ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಗ್ ಡಿಬೇಟ್ ರೇಡಿಯೋ ಶೋನಲ್ಲಿ ಯುನೈಟೆಡ್ ಕಿಂಗ್ಡಮ್​ನಲ್ಲಿ ನೆಲೆಸಿರುವ ಸಿಖ್ಖರ ಮತ್ತು ಭಾರತೀಯರ ಬಗ್ಗೆ ಚರ್ಚೆ ನಡೆಯುತ್ತಿತ್ತು. ಈ ಮಾತುಕತೆಯು ದೆಹಲಿಯಲ್ಲಿ ಪ್ರಸ್ತುತ ನಡೆಯುತ್ತಿರುವ ರೈತ ಚಳುವಳಿಯ ಬಗ್ಗೆಯೂ ಮುಂದುವರಿಯಿತು. ಈ ಸಂದರ್ಭ ಕರೆ ಮಾಡಿ ಅಭಿಪ್ರಾಯ ಹಂಚಿಕೊಂಡ ಓರ್ವ ವ್ಯಕ್ತಿ, ಮೋದಿ ತಾಯಿ ಹೀರಾಬೆನ್ ಮೋದಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ.

ಈ ಘಟನೆಯ ವಿಡಿಯೊವನ್ನು ಜನರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಟ್ವಿಟ್ಟರ್ ಮತ್ತು ಇತರ ವೇದಿಕೆಗಳಲ್ಲಿ ಷೇರ್ ಮಾಡಿಕೊಂಡು ಅಸಮಾಧಾನ ಹೊರಹಾಕಿದ್ದಾರೆ. ಹಲವರು ರೇಡಿಯೋ ಶೋ ಬಗ್ಗೆಯೂ ವಿರೋಧ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅಂಥಾ ಅಭಿಪ್ರಾಯವನ್ನು ಪ್ರಸಾರವಾಗಲು ಬಿಟ್ಟಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಒಂದೆಡೆ, ಗಣರಾಜ್ಯೋತ್ಸವ ದಿನದಂದು ನಡೆದ ಟ್ರ್ಯಾಕ್ಟರ್ ಚಳುವಳಿಯ ಬಳಿಕ ರೈತ ಹೋರಾಟ ದಿಕ್ಕು ತಪ್ಪಿದಂತೆ ಆಗಿದ್ದರೆ, ಮತ್ತೊಂದೆಡೆ, ರೈತ ಸಮುದಾಯಕ್ಕೆ ಬೆಂಬಲವೂ ಸಿಗುತ್ತಿದೆ. ಪಂಜಾಬ್, ಹರ್ಯಾಣ, ಉತ್ತರ ಪ್ರದೇಶದ ಕೆಲವು ಭಾಗಗಳ ಸಾವಿರಾರು ರೈತರು ದೆಹಲಿ ಗಡಿಭಾಗದಲ್ಲಿ ಹೋರಾಟ ಮುಂದುವರಿಸಿದ್ದಾರೆ. ಮೂರು ತಿಂಗಳಿಗೂ ಹೆಚ್ಚು ಕಾಲದಿಂದ ಈ ಚಳುವಳಿ ನಡೆಯುತ್ತಿದೆ.

ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು, ಕನಿಷ್ಠ ಬೆಂಬಲ ಬೆಲೆ (MSP) ನೀಡುವ ಬಗ್ಗೆ ಕಾನೂನಾತ್ಮಕ ಭರವಸೆ ನೀಡಬೇಕು ಎಂಬುದು ರೈತರ ಅಹವಾಲಾಗಿದೆ. ಪಂಜಾಬ್​ನಲ್ಲಿ ಕೂಡ ಪ್ರತಿಭಟನೆ ಕಾವು ಜೋರಾಗಿದೆ. ಕಳೆದ ವಾರ, ಪಂಜಾಬ್​ನ ದೆಹಲಿ-ಲುಧಿಯಾನ-ಅಮೃತ್​ಸರ ರೈಲ್ವೇ ಟ್ರ್ಯಾಕ್ ಮೇಲೆ ಕುಳಿತು ರೈತರು ಪ್ರತಿಭಟನೆ ನಡೆಸಿದ್ದರು. ರೈಲ್ ರೋಕೊ ಚಳುವಳಿ ಮಾಡಿದ್ದರು.

Boycott BBC, Ban BBC ಹ್ಯಾಶ್​ ​ಟ್ಯಾಗ್ ಬಳಕೆ

ಮೋದಿ ತಾಯಿಯ ಬಗ್ಗೆ ಕೆಟ್ಟದಾಗಿ ಮಾತನಾಡಿರುವುದರ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. #BoycottBBC ಮತ್ತು #BanBBC ಹ್ಯಾಶ್​ ಟ್ಯಾಗ್ ಬಳಸಿ ಘಟನೆಯನ್ನು ವಿರೋಧಿಸಿದ್ದಾರೆ. ಕೆಲವರು ಬಿಬಿಸಿ ಧಿಕ್ಕರಿಸುವ ಬಗ್ಗೆ ಅಭಿಪ್ರಾಯ ಹಂಚಿಕೊಂಡರೆ, ಇನ್ನು ಕೆಲವರು ಧಿಕ್ಕಾರ ಸಾಲದು, ಬಿಬಿಸಿ ಬ್ಯಾನ್ ಮಾಡಬೇಕು ಎಂದು ಹೇಳಿದ್ದಾರೆ. ಸದ್ಯ, #BoycottBBC ಹ್ಯಾಷ್​ಟ್ಯಾಗ್ 99.8K ಬಾರಿ ರಿಟ್ವೀಟ್ ಆಗಿದೆ. ಟ್ವಿಟರ್ ಟ್ರೆಂಡಿಂಗ್​ನಲ್ಲಿ ಮೊದಲನೇ ಸ್ಥಾನದಲ್ಲಿದೆ. #BanBBC 32.4K ಟ್ವೀಟ್​ಗಳ ಮೂಲಕ ಎರಡನೇ ಸ್ಥಾನದಲ್ಲಿದೆ.

Published On - 5:22 pm, Wed, 3 March 21