ಬಜ್ಜಿ-ಬೋಂಡಾ ಮಾರುತ್ತಿದ್ದಾರೆ ಚಿನ್ನದ ಪದಕ ಗೆದ್ದು ಇಡೀ ರಾಷ್ಟ್ರವೇ ಮೆಚ್ಚಿಕೊಂಡಿದ್ದ ಈ ಕ್ರೀಡಾಪಟು
ಪ್ರಾವಿಣ್ಯರು. 2018ರಲ್ಲಿ ರಾಂಚಿಯ ತರಬೇತಿ ಕೇಂದ್ರದಲ್ಲಿ ಮಮತಾ ತರಬೇತಿಗೆ ತೆರಳಿದ್ದರು. 2020ರ ಆರಂಭದಲ್ಲಿ ಕೊರೊನಾ ಕಾಣಿಸಿಕೊಂಡಿದ್ದರಿಂದ ತರಬೇತಿ ನೀಡುವ ಅಕಾಡೆಮಿಯನ್ನು ಮುಚ್ಚಲಾಗಿತ್ತು.
ಯಾವುದೇ ಕ್ರೀಡೆಯಲ್ಲಾದರೂ ಗೆದ್ದು ಸಾಧನೆ ಮಾಡಬೇಕು ಎಂದರೆ ಅದು ಸುಲಭದ ಮಾತಲ್ಲ. ಅದಕ್ಕೆ ಸಾಕಷ್ಟು ಶ್ರಮ ಬೇಕು. ಸೋತರೂ ಎದೆಗುಂದದೆ ಮತ್ತೆ ಮುನ್ನುಗ್ಗುವ ಛಲ ಬೇಕು. ಇದೇ ರೀತಿ ಎಲ್ಲವನ್ನೂ ಮೆಟ್ಟಿನಿಂತು ಬಿಲ್ಲುಗಾರಿಕೆಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದ್ದ ಕ್ರೀಡಾಪಟು ಒಬ್ಬರು ಈಗ ಬಡತನದಿಂದ ಊರಿನಲ್ಲಿ ಬಜ್ಜಿ-ಬೋಂಡಾ ಮಾರುತ್ತಿದ್ದಾರೆ. ಈ ಸುದ್ದಿ ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅಲ್ಲದೆ, ಸರ್ಕಾರ ಇವರ ನೆರವಿಗೆ ಬರುವಂತೆ ಆಗ್ರಹ ಕೇಳಿ ಬಂದಿದೆ.
ಅವರ ಹೆಸರು ಮಮತಾ ಟುಡ್ಡು. ಬಿಹಾರದ ದಾಮೋದರ್ಪುರ ಊರಿನವರು. ವಯಸ್ಸು 23 ವರ್ಷ. 2010ರಲ್ಲಿ ಜೂನಿಯರ್ ಮಟ್ಟ ಹಾಗೂ 2014ರಲ್ಲಿ ಸಬ್ ಜೂನಿಯರ್ ಮಟ್ಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಲಾಕ್ಡೌನ್ನಿಂದ ಜೀವನವೇ ಜರ್ಜರಿತವಾಗಿ ಹೋಗಿದೆ. ಬೇರೆ ದಾರಿ ಕಾಣದೆ ಅವರು ಊರಿನಲ್ಲೇ ಉಳಿದುಕೊಂಡಿದ್ದಾರೆ.
ಮಮತಾ ತಂದೆ ಬಿಸಿಸಿಎಲ್ ಮಾಜಿ ನೌಕರ. ಇವರು ಬಿಲ್ಲುಗಾರ ಪ್ರಾವಿಣ್ಯರು. 2018ರಲ್ಲಿ ರಾಂಚಿಯ ತರಬೇತಿ ಕೇಂದ್ರದಲ್ಲಿ ಮಮತಾ ತರಬೇತಿಗೆ ತೆರಳಿದ್ದರು. 2020ರ ಆರಂಭದಲ್ಲಿ ಕೊರೊನಾ ಕಾಣಿಸಿಕೊಂಡಿದ್ದರಿಂದ ತರಬೇತಿ ನೀಡುವ ಅಕಾಡೆಮಿಯನ್ನು ಮುಚ್ಚಲಾಗಿತ್ತು. ಹೀಗಾಗಿ, ಅವರು ತಮ್ಮ ಊರಾದ ದಾಮೋದರ್ಪುರಕ್ಕೆ ವಾಪಾಸಾಗಿದ್ದರು. ಮನೆಯ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದರಿಂದ ಅವರು ಮತ್ತೆ ತರಬೇತಿ ಪಡೆಯಲು ಹೋಗಲೇ ಇಲ್ಲ.
ನನ್ನ ತಂದೆಗೆ 7 ಮಕ್ಕಳಿದ್ದಾರೆ. ಅವರಲ್ಲಿ ನಾನೇ ದೊಡ್ಡವನು. ಆರ್ಥಿಕ ತೊಂದರೆಯಿಂದ ನನ್ನ ತಮ್ಮಂದಿರು ಓದುವುದನ್ನು ಬಿಟ್ಟಿದ್ದಾರೆ. ನಮ್ಮ ತಂದೆಯ ಪೆನ್ಶನ್ ಕೂಡ ಇನ್ನಷ್ಟೇ ಆರಂಭವಾಗಬೇಕಿದೆ. ಹೀಗಾಗಿ, ನಾವು ನಡೆಸುತ್ತಿರುವ ಬಜ್ಜಿ-ಬೋಂಡದ ಅಂಗಡಿ ಮೇಲೆ ಎಲ್ಲವೂ ನಿಂತಿದೆ ಎನ್ನುತ್ತಾರೆ ಅವರು.
ನಾನು ಅಂಗಡಿಗೆ ಹೋಗಿ ಕೆಲಸ ಮಾಡಿಲ್ಲ ಎಂದರೆ ನನ್ನ ಕುಟುಂಬ ಹಸಿವಿನಿಂದ ಕಂಗೆಡಬೇಕಾಗುತ್ತದೆ. ಸರ್ಕಾರ ಏನಾದರೂ ಸಹಕಾರ ನೀಡಿದರೆ ನಮಗೆ ನಮ್ಮ ಕುಟುಂಬಕ್ಕೆ ಸಹಕಾರ ಆಗುತ್ತದೆ. ಇಲ್ಲದಿದ್ದರೆ ವಿಶ್ವಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಬೇಕು ಎನ್ನುವ ಕನಸು ಹಾಗೆಯೇ ಉಳಿದು ಹೋಗುತ್ತದೆ ಎಂದು ಕಣ್ಣೀರು ಹಾಕುತ್ತಾರೆ.