ಕ್ರಿಕೆಟ್​ ವಿಶೇಷ: ಅಶ್ವಿನ್​ ಪಾಲಾದ 2 ವಿಶಿಷ್ಠ ದಾಖಲೆಗಳು, ಬಜ್ಜಿ ದಾಖಲೆ ಪುಡಿಪುಡಿ, ಮುಂದಿನ ಟಾರ್ಗೆಟ್​ ಕುಂಬ್ಲೆ..!

india vs england: ಕಳೆದೆರಡು ಪಂದ್ಯಗಳಲ್ಲಿ 5 ವಿಕೆಟ್‌ಗಳನ್ನು 2 ಭಾರಿ ತೆಗೆದು ಮಿಂಚಿರುವ ಅಶ್ವಿನ್​, ಇಂಗ್ಲೆಂಡ್​ ಆಟಗಾರ ಬ್ರಾಡ್ ವಿಕೆಟ್​ ತೆಗೆಯುವ ಮೂಲಕ ಅತೀ ಹೆಚ್ಚು ಎಡಗೈ ದಾಂಡಿಗರನ್ನು ಪೆವಿಲಿಯನ್​ಗೆ ಕಳುಹಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದುವರೆಗೆ ಅಶ್ವಿನ್​ 200 ಎಡಗೈ ಆಟಗಾರರನ್ನು ಔಟ್​ ಮಾಡಿದ್ದಾರೆ.

ಕ್ರಿಕೆಟ್​ ವಿಶೇಷ: ಅಶ್ವಿನ್​ ಪಾಲಾದ 2 ವಿಶಿಷ್ಠ ದಾಖಲೆಗಳು, ಬಜ್ಜಿ ದಾಖಲೆ ಪುಡಿಪುಡಿ, ಮುಂದಿನ ಟಾರ್ಗೆಟ್​ ಕುಂಬ್ಲೆ..!
ಈ 32 ವಿಕೆಟ್‌ಗಳಲ್ಲಿ ಅಶ್ವಿನ್‌ 7 ವಿಕೆಟ್‌ಗಳನ್ನು ಪಡೆದಿದ್ದರು. ಎರಡನೇ ಇನಿಂಗ್ಸ್ ನಲ್ಲಿ 15 ಓವರ್ ಬೌಲಿಂಗ್ ಮಾಡಿದ್ದ ಅಶ್ವಿನ್ 27 ರನ್ ನೀಡಿ 6 ಬ್ಯಾಟ್ಸ್ ಮನ್ ಗಳನ್ನು ಔಟ್ ಮಾಡಿದ್ದರು. ಹಾಗೆಯೇ ಮೊದಲ ಇನ್ನಿಂಗ್ಸ್‌ನಲ್ಲಿ ಒಂದು ವಿಕೆಟ್ ಪಡೆದಿದ್ದರು. ಅಶ್ವಿನ್ ಅವರಂತೆ ಇಂಗ್ಲೆಂಡ್ ಸ್ಪಿನ್ನರ್ ಜಾಕ್ ಲೀಚ್ ಕೂಡ ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ಉರುಳಿಸಿದ್ದರು. ಹೀಗಾಗಿಯೇ ಓವಲ್ ಮೈದಾನ ಸ್ಪಿನ್ನರ್​ಗಳ ಸ್ವರ್ಗ ಎನ್ನಲಾಗುತ್ತದೆ.
Follow us
ಪೃಥ್ವಿಶಂಕರ
|

Updated on:Feb 15, 2021 | 3:28 PM

ಚೆನ್ನೈ: ಇಂಗ್ಲೆಂಡ್​ ವಿರುದ್ಧದ 4 ಟೆಸ್ಟ್​ ಪಂದ್ಯಗಳ ಸರಣಿಯ ಮೊದಲೆರಡು ಟೆಸ್ಟ್​ಗಳಲ್ಲಿ, ಇಂಗ್ಲೆಂಡ್​ ದಾಂಡಿಗರನ್ನು ಅಕ್ಷರಶಃ ನಡುಗಿಸಿರುವ ಟೀಂ ಇಂಡಿಯಾದ ಸ್ಪಿನ್ನರ್​ ಆರ್​. ಅಶ್ವಿನ್​ ನಿನ್ನೆಯ ಆಟದಲ್ಲಿ ಸ್ಟುವರ್ಟ್ ಬ್ರಾಡ್ ವಿಕೆಟ್​ ತೆಗೆಯುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ. ಕಳೆದೆರಡು ಪಂದ್ಯಗಳಲ್ಲಿ 5 ವಿಕೆಟ್‌ಗಳನ್ನು 2 ಭಾರಿ ತೆಗೆದು ಮಿಂಚಿರುವ ಅಶ್ವಿನ್​, ಇಂಗ್ಲೆಂಡ್​ ಆಟಗಾರ ಬ್ರಾಡ್ ವಿಕೆಟ್​ ತೆಗೆಯುವ ಮೂಲಕ ಅತೀ ಹೆಚ್ಚು ಎಡಗೈ ದಾಂಡಿಗರನ್ನು ಪೆವಿಲಿಯನ್​ಗೆ ಕಳುಹಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದುವರೆಗೆ ಅಶ್ವಿನ್​ 200 ಎಡಗೈ ಆಟಗಾರರನ್ನು ಔಟ್​ ಮಾಡಿದ್ದಾರೆ.

ಅಶ್ವಿನ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 391 ವಿಕೆಟ್ ಪಡೆದಿದ್ದಾರೆ ಮತ್ತು ಅವರ 51.2 ಪ್ರತಿಶತದಷ್ಟು ವಿಕೆಟ್​ಗಳಲ್ಲಿ ಎಡಗೈ ಆಟಗಾರರ ಹೆಸರೇ ಹೆಚ್ಚಿದೆ. ಎಡಗೈ ಆಟಗಾರರ ವಿರುದ್ಧ ಅವರ ಬೌಲಿಂಗ್ ಸರಾಸರಿ 19.55 ಆಗಿದ್ದು, ಬಲಗೈ ಬ್ಯಾಟ್ಸ್‌ಮನ್‌ಗಳ ವಿರುದ್ಧ 31.24 ಆಗಿದೆ.

india vs england ಅಶ್ವಿನ್​ ನಂತರದ ಆಟಗಾರರ ಹೆಸರು ಹೀಗಿದೆ.. ಅಶ್ವಿನ್​ ಅವರ ಈ ಸಾಧನೆಗೂ ಮೊದಲು ಎಡಗೈ ಬ್ಯಾಟ್ಸ್‌ಮನ್‌ಗಳನ್ನ ಟೆಸ್ಟ್ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಬಾರಿ ಔಟ್​ ಮಾಡಿದ ಹೆಗ್ಗಳಿಕೆಗೆ ಶ್ರೀಲಂಕಾದ ಶ್ರೇಷ್ಠ ಬೌಲರ್ ಮುತ್ತಯ್ಯ ಮುರಳೀಧರನ್ ಪಾತ್ರರಾಗಿದ್ದರು. ಅವರು ತಮ್ಮ ವಿಶ್ವ ದಾಖಲೆಯ 800 ಟೆಸ್ಟ್ ವಿಕೆಟ್‌ಗಳಲ್ಲಿ 191 ಬಾರಿ ಎಡಗೈ ಆಟಗಾರರನ್ನು ಔಟ್ ಮಾಡಿದ್ದಾರೆ. 191 ವಿಕೆಟ್​ಗಳೊಂದಿಗೆ ಮರುಳೀಧರನ್​ 2ನೇ ಸ್ಥಾನದಲ್ಲಿ. ಭಾರತ ವಿರುದ್ಧದ 2ನೇ ಟೆಸ್ಟ್‌ಗೆ ವಿಶ್ರಾಂತಿ ಪಡೆದಿರುವ ಹಿರಿಯ ಇಂಗ್ಲೆಂಡ್ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ತೆಗೆದಿರುವ 611 ವಿಕೆಟ್​ಗಳಲ್ಲಿ, 190 ಎಡಗೈ ಬ್ಯಾಟ್ಸ್‌ಮನ್‌ಗಳನ್ನ ಬಲಿ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ.

ಆಸ್ಟ್ರೇಲಿಯಾದ ವೇಗದ ಬೌಲಿಂಗ್ ಶ್ರೇಷ್ಠ ಗ್ಲೆನ್ ಮೆಕ್‌ಗ್ರಾತ್ ತನ್ನ 563 ವಿಕೆಟ್‌ಗಳಲ್ಲಿ 172 ಬಾರಿ ಎಡಗೈ ಆಟಗಾರರನ್ನು ಔಟ್ ಮಾಡಿದ್ದರು. ಹಾಗೆಯೇ ಆಸ್ಟ್ರೇಲಿಯಾದ ಸ್ಪಿನ್ ಶ್ರೇಷ್ಠ ಶೇನ್ ವಾರ್ನ್ ಅವರ 708 ವಿಕೆಟ್‌ಗಳಲ್ಲಿ 172 ಬಾರಿ ಎಡಗೈ ಆಟಗಾರರನ್ನು ಔಟ್ ಮಾಡಿದ್ದರು. ಅಲ್ಲದೆ ಅಶ್ವಿನ್, ಭಾನುವಾರ ನಡೆದ 2ನೇ ದಿನದಾಟದಲ್ಲಿ ಭಾರತದ ನೆಲದಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರಲ್ಲಿ ಎರಡನೇ ಸ್ಥಾನದಲ್ಲಿದ್ದ ಹರ್ಭಜನ್ ಸಿಂಗ್ ಅವರನ್ನು ಹಿಂದಿಕ್ಕಿದ್ದಾರೆ. ಹರ್ಭಜನ್ 265 ವಿಕೆಟ್ ಪಡೆದಿದ್ದರೆ, 2ನೇ ಟೆಸ್ಟ್​ನ ಎರಡನೇ ದಿನ ಅಶ್ವಿನ್ ಐದು ವಿಕೆಟ್ ಪಡೆಯುವುದರ ಮೂಲಕ 268 ವಿಕೆಟ್ ಗಳಿಸಿದ್ದಾರೆ.

India vs England Test Series: ಚೆನೈ ಟೆಸ್ಟ್​ನಲ್ಲಿ 114 ವರ್ಷ ಹಿಂದಿನ ದಾಖಲೆ ಸರಿಗಟ್ಟಿದ ರವಿಚಂದ್ರನ್ ಅಶ್ವಿನ್

Published On - 12:29 pm, Mon, 15 February 21

ಬಸ್‌ ಪ್ರಯಾಣ ದರ ಹೆಚ್ಚಿಸಿದ್ದಕ್ಕೆ ಸಂಸದ ಯದುವೀರ್ ಗರಂ
ಬಸ್‌ ಪ್ರಯಾಣ ದರ ಹೆಚ್ಚಿಸಿದ್ದಕ್ಕೆ ಸಂಸದ ಯದುವೀರ್ ಗರಂ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ