IT Raids: ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್, ನಟಿ ತಾಪ್ಸಿ ಪನ್ನು ಸೇರಿ ಹಲವರ ಮನೆ, ಕಚೇರಿ ಮೇಲೆ ಐಟಿ ದಾಳಿ
ಮುಂಬೈ: ತೆರಿಗೆ ವಂಚನೆ ಆರೋಪದಡಿ ಬಾಲಿವುಡ್ ನಿರ್ದಶಕ ಅನುರಾಗ್ ಕಶ್ಯಪ್, ನಿರ್ಮಾಪಕ ವಿಕಾಸ್ ಬಹಲ್ ಮತ್ತು ನಟಿ ತಾಪ್ಸೀ ಪನ್ನು ನಿವಾಸದ ಮೇಲೆ ಐಟಿ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ನಿರ್ಮಾಪಕ ಮಧು ಮಂಟೇನಾ ನಿವಾಸವನ್ನೂ ಐಟಿ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಅದರಲ್ಲೂ ಮುಖ್ಯವಾಗಿ ತೆರಿಗೆ ವಂಚನೆ ಆರೋಪ ಸಿನಿ ನಿರ್ಮಾಣ, ವಿತರಣಾ ಸಂಸ್ಥೆ ಫ್ಯಾಂಟಮ್ ಫಿಲ್ಮ್ಸ್ ವಿರುದ್ಧ ಕೇಳಿಬಂದಿದ್ದು, ಇದಕ್ಕೆ ಸಂಬಂಧಪಟ್ಟವರ ಮನೆ, ಕಚೇರಿ ಸೇರಿ ಮುಂಬೈನ ಒಟ್ಟು 22 ಪ್ರದೇಶಗಳಲ್ಲಿ […]
ಮುಂಬೈ: ತೆರಿಗೆ ವಂಚನೆ ಆರೋಪದಡಿ ಬಾಲಿವುಡ್ ನಿರ್ದಶಕ ಅನುರಾಗ್ ಕಶ್ಯಪ್, ನಿರ್ಮಾಪಕ ವಿಕಾಸ್ ಬಹಲ್ ಮತ್ತು ನಟಿ ತಾಪ್ಸೀ ಪನ್ನು ನಿವಾಸದ ಮೇಲೆ ಐಟಿ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ನಿರ್ಮಾಪಕ ಮಧು ಮಂಟೇನಾ ನಿವಾಸವನ್ನೂ ಐಟಿ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಅದರಲ್ಲೂ ಮುಖ್ಯವಾಗಿ ತೆರಿಗೆ ವಂಚನೆ ಆರೋಪ ಸಿನಿ ನಿರ್ಮಾಣ, ವಿತರಣಾ ಸಂಸ್ಥೆ ಫ್ಯಾಂಟಮ್ ಫಿಲ್ಮ್ಸ್ ವಿರುದ್ಧ ಕೇಳಿಬಂದಿದ್ದು, ಇದಕ್ಕೆ ಸಂಬಂಧಪಟ್ಟವರ ಮನೆ, ಕಚೇರಿ ಸೇರಿ ಮುಂಬೈನ ಒಟ್ಟು 22 ಪ್ರದೇಶಗಳಲ್ಲಿ ಐಟಿ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಅನುರಾಗ್ ಕಶ್ಯಪ್ ಅವರ ಫ್ಯಾಂಟಮ್ ಸಿನಿ ಹೌಸ್ 2018ರಲ್ಲೇ ನಿಷ್ಕ್ರಿಯಗೊಂಡಿದ್ದು, ಸದ್ಯ ಕೆಲಸ ನಿರ್ವಹಿಸುತ್ತಿಲ್ಲ. ಈ ಸಿನಿಮಾ ನಿರ್ಮಾಣ ಮತ್ತು ವಿತರಣಾ ಕಂಪನಿಯನ್ನು 2011ರಲ್ಲಿ ಅನುರಾಗ್ ಕಶ್ಯಪ್, ವಿಕ್ರಮಾದಿತ್ಯ ಮೋಟ್ವಾನೆ, ನಿರ್ಮಾಪಕರಾದ ಮಧು ಮಂಟೇನಾ, ವಿಕಾಸ್ ಬಹಲ್ ಸೇರಿ ಪ್ರಾರಂಭ ಮಾಡಿದ್ದರು. ಈ ಕಂಪನಿಗೆ ಸಂಬಂಧಪಟ್ಟವರನ್ನು ಇದೀಗ ಐಟಿ ಟಾರ್ಗೆಟ್ ಮಾಡಿದೆ. ತೆರಿಗೆ ವಂಚನೆ ಆರೋಪ ಕೇಳಿಬರುತ್ತಿದೆ.
ಇವರಲ್ಲಿ ಅನುರಾಗ್ ಕಶ್ಯಪ್ ಮತ್ತು ತಾಪ್ಸಿ ಪನ್ನು ಹಲವು ರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದವರು. ಸದ್ಯ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಪರವಾಗಿ ಮಾತನಾಡಿದ್ದ ತಾಪ್ಸಿ ಪನ್ನು, ವ್ಯವಸ್ಥೆಯನ್ನು ಸರಿಪಡಿಸುವಂತೆ ಸರ್ಕಾರಕ್ಕೆ ಸಲಹೆಯನ್ನೂ ನೀಡಿದ್ದರು. ಇನ್ನು ಅನುರಾಗ್ ಕಶ್ಯಪ್ 2019ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನಾಕಾರರಿಗೆ ಹಿಂಸೆ ನೀಡಲಾಗುತ್ತಿದೆ ಎಂದು ಸರ್ಕಾರದ ನಡೆಯನ್ನು ಖಂಡಿಸಿದ್ದರು. ಹಾಗೇ, ಸುಶಾಂತ್ ಸಿಂಗ್ ಸತ್ತಾಗ ಅವರ ಗೆಳತಿ ರಿಯಾರನ್ನು ವಹಿಸಿಕೊಂಡು ಮಾತನಾಡಿದ್ದರು. ಬಾಲಿವುಡ್ ಹುಳುಕು ಎತ್ತಿದ ಇತರ ನಟ-ನಟಿಯರ ನಡೆಯನ್ನು ಖಂಡಿಸಿದ್ದಾರೆ.
ಇದನ್ನೂ ಓದಿ: ‘ಅನಾರೋಗ್ಯ..ಸರ್ಜರಿ’: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಪೋಸ್ಟ್ ನೋಡಿ ಅಭಿಮಾನಿಗಳಲ್ಲಿ ಆತಂಕ
Published On - 1:58 pm, Wed, 3 March 21