ಪಂಜಾಬ್‌ನ ಸಿಎಂ ಅಭ್ಯರ್ಥಿಯಾಗಿ ಎಎಪಿಯಿಂದ ಸಿಖ್ ಸಮುದಾಯದವರೇ ಸ್ಪರ್ಧೆ: ಅರವಿಂದ್ ಕೇಜ್ರಿವಾಲ್

| Updated By: ರಶ್ಮಿ ಕಲ್ಲಕಟ್ಟ

Updated on: Jun 21, 2021 | 4:08 PM

Arvind Kejriwal: ಇಡೀ ಪಂಜಾಬ್ ಈಗ ಬದಲಾವಣೆಯನ್ನು ಬಯಸುತ್ತದೆ, ಒಂದೇ ಭರವಸೆ ‘ಆಪ್ ’. ಕುಂವರ್ ಸಾಹಿಬ್ ಅವರ ಬೆಂಬಲವು ಪಂಜಾಬ್ ಜನರ ಈ ಭರವಸೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಪಂಜಾಬ್‌ನ ಸಿಎಂ ಅಭ್ಯರ್ಥಿಯಾಗಿ ಎಎಪಿಯಿಂದ ಸಿಖ್ ಸಮುದಾಯದವರೇ ಸ್ಪರ್ಧೆ: ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
Follow us on

ಅಮೃತ್​ಸರ: 2022 ರ ವಿಧಾನಸಭಾ ಚುನಾವಣೆಗೆ ಮುನ್ನ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್‌ನಲ್ಲಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಸಿಖ್ ಸಮುದಾಯದವರು ಆಗಿರಲಿದ್ದಾರೆ ಎಂದು ಘೋಷಿಸಿದರು. ಅಮೃತ್​ಸರದಲ್ಲಿ ನಡೆದ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಇಡೀ ಪಂಜಾಬ್‌ಗೆ ಹೆಮ್ಮೆ ಎನಿಸುವ ವ್ಯಕ್ತಿಯಾಗಿರುತ್ತಾರೆ ಅವರು. ಇದು ಸಿಖ್ ಸಮುದಾಯದ ಹಕ್ಕು ಎಂದು ನಾವು ಭಾವಿಸುತ್ತೇವೆ” ಎಂದು ಹೇಳಿದರು.

ಮಾಜಿ ಐಪಿಎಸ್ ಕುಂವರ್ ವಿಜಯ್ ಪ್ರತಾಪ್ ಸಿಂಗ್ ಎಎಪಿಗೆ ಸೇರ್ಪಡೆಗೊಂಡಿದ್ದಾರೆ ಎಂದು ಪಕ್ಷ ಪ್ರಕಟಿಸಿದೆ. ಕುಂವರ್ ವಿಜಯ್ ಪ್ರತಾಪ್ ರಾಜಕಾರಣಿ ಅಲ್ಲ. ಅವರನ್ನು ‘ಆಮ್ ಆದ್ಮಿ ಕಾ ಪೊಲೀಸ್ವಾಲಾ’ ಎಂದು ಕರೆಯಲಾಯಿತು. ನಾವೆಲ್ಲರೂ ರಾಷ್ಟ್ರ ಸೇವೆ ಮಾಡಲು ಇಲ್ಲಿದ್ದೇವೆ. ಈ ಮನೋಭಾವದಿಂದ ಅವರು ಇಂದು ಪಕ್ಷಕ್ಕೆ ಸೇರಿದ್ದಾರೆ ಎಂದು ಪಕ್ಷದ ರಾಷ್ಟ್ರೀಯ ಕನ್ವೀನರ್ ಹೇಳಿದರು.


2015 ರಲ್ಲಿ ಗುರು ಗ್ರಂಥ ಸಾಹೀಬ್ ಅಪವಿತ್ರಗೊಳಿಸಿದ ನಂತರ ಪೊಲೀಸ್ ಗುಂಡಿನ ದಾಳಿ ಪ್ರಕರಣಗಳನ್ನು ತನಿಖೆ ಮಾಡಿದ್ದ ವಿಶೇಷ ತನಿಖಾ ತಂಡದ (ಎಸ್‌ಐಟಿ) ಭಾಗವಾಗಿದ್ದರು ಸಿಂಗ್. ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಬಾರ್ಗರಿ ಪವಿತ್ರ ಪ್ರಕರಣದ ಅಪರಾಧಿಗಳಿಗೆ ಶಿಕ್ಷೆ ಮತ್ತು ನ್ಯಾಯ ಒದಗಿಸಲಾಗುವುದು ಎಂದು  ಪಂಜಾಬ್ ಜನರಿಗೆ ಭರವಸೆ ನೀಡಲು ಬಯಸುತ್ತೇನೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.


ಇಡೀ ಪಂಜಾಬ್ ಈಗ ಬದಲಾವಣೆಯನ್ನು ಬಯಸುತ್ತದೆ, ಒಂದೇ ಭರವಸೆ ‘ಆಪ್ ’. ಕುಂವರ್ ಸಾಹಿಬ್ ಅವರ ಬೆಂಬಲವು ಪಂಜಾಬ್ ಜನರ ಈ ಭರವಸೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್  ಅಮೃತಸರಕ್ಕೆ ಒಂದು ದಿನದ ಭೇಟಿ ನೀಡಿದ್ದಾರೆ.

ಇದನ್ನೂ ಓದಿ: 2022 ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಸ್ಪರ್ಧೆ: ಅರವಿಂದ್ ಕೇಜ್ರಿವಾಲ್

ಇದನ್ನೂ ಓದಿ: ಪಿಜ್ಜಾ ಹೋಮ್ ಡೆಲಿವರಿ ಮಾಡುವುದಾದರೆ ರೇಷನ್ ಯಾಕೆ ಆಗಲ್ಲ?: ಅರವಿಂದ್ ಕೇಜ್ರಿವಾಲ್

(Aam Aadmi party’s chief minister candidate in Punjab will be from the Sikh community says Arvind Kejriwal)