ಇಂದು ಉತ್ತರ ಪ್ರದೇಶದಲ್ಲಿ ವಿಜಯ ಯಾತ್ರೆ ನಡೆಸಲಿರುವ ಆಪ್​; ಒಂದೂ ಕ್ಷೇತ್ರ ಗೆಲ್ಲದೆ ಇದ್ರೂ ಮೆರವಣಿಗೆ !

| Updated By: Lakshmi Hegde

Updated on: Mar 12, 2022 | 10:09 AM

ಉತ್ತರ ಪ್ರದೇಶದಲ್ಲಿ ಆಪ್​ ಸೋತಿರಬಹುದು. ಆದರೆ ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಹಳ್ಳಿಗಳ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವ ಕಾರ್ಯದಲ್ಲಿ ತೊಡಗುತ್ತೇವೆ. ತಕ್ಷಣವೇ ಕೆಲಸ ಶುರು ಮಾಡಿಕೊಳ್ಳುತ್ತೇವೆ ಎಂದು ಸಂಜಯ್ ಸಿಂಗ್​ ತಿಳಿಸಿದ್ದಾರೆ.

ಇಂದು ಉತ್ತರ ಪ್ರದೇಶದಲ್ಲಿ ವಿಜಯ ಯಾತ್ರೆ ನಡೆಸಲಿರುವ ಆಪ್​; ಒಂದೂ ಕ್ಷೇತ್ರ ಗೆಲ್ಲದೆ ಇದ್ರೂ ಮೆರವಣಿಗೆ !
ಅರವಿಂದ್ ಕೇಜ್ರಿವಾಲ್​ ಮತ್ತು ಭಗವಂತ್ ಮಾನ್​
Follow us on

ಲಖನೌ: ಉತ್ತರ ಪ್ರದೇಶದಲ್ಲಿ (Uttar Pradesh Assembly Election) ಒಂದೂ ಕ್ಷೇತ್ರದಲ್ಲಿ ಗೆಲ್ಲದ ಆಮ್​ ಆದ್ಮಿ ಪಕ್ಷ (Aam Aadmi Party) ಇಂದು ಅಲ್ಲಿ ವಿಜಯಯಾತ್ರೆ (Victory Rally)ನಡೆಸಲಿದೆ. ಮಾರ್ಚ್​ 12ರಂದು ಉತ್ತರಪ್ರದೇಶದಾದ್ಯಂತ ಆಪ್​ ಪಕ್ಷದ ಗೆಲುವಿನ ಮೆರವಣಿಗೆ ನಡೆಯಲಿದೆ ಎಂದು ಪಕ್ಷದ ರಾಜ್ಯಸಭಾ ಸಂಸದ ಸಂಜಯ್​ ಸಿಂಗ್ ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ಆಪ್​ ಒಂದೂ ಕ್ಷೇತ್ರ ಗೆಲ್ಲದೆ ಇದ್ದರೂ, ಪಂಜಾಬ್​ನಲ್ಲಿ ಸ್ಪಷ್ಟ ಬಹುಮತದಿಂದ ಗೆದ್ದುಕೊಂಡಿದೆ. ಪಂಜಾಬ್​​ನ್ನು ತೆಕ್ಕೆಗೆ ಎಳೆದುಕೊಂಡ ವಿಜಯವನ್ನು ಸಂಭ್ರಮಿಸಲು ಉತ್ತರ ಪ್ರದೇಶದಲ್ಲಿ ವಿಜಯಯಾತ್ರೆ ನಡೆಸಲಿದೆ. ಆಪ್​ ರಾಷ್ಟ್ರ ಮಟ್ಟದಲ್ಲಿ ಪರ್ಯಾಯ ಪಕ್ಷ ಎಂಬುದನ್ನು ಜನರು ಒಪ್ಪಿಕೊಂಡಿದ್ದಾರೆ ಎಂಬುದಕ್ಕೆ ಪಂಜಾಬ್​ ಗೆಲುವೇ ಸಾಕ್ಷಿ. ರಾಜಕೀಯವನ್ನು ಸ್ವಚ್ಛಗೊಳಿಸಲು ಜನರು ಪೊರಕೆಯನ್ನು  (ಆಪ್​ ಚಿಹ್ನೆ) ಬಳಸಲು ಇಚ್ಛಿಸುತ್ತಿದ್ದಾರೆ  ಎಂದೂ ಸಂಜಯ್ ಸಿಂಗ್ ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಆಪ್​ ಸೋತಿರಬಹುದು. ಆದರೆ ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಹಳ್ಳಿಗಳ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವ ಕಾರ್ಯದಲ್ಲಿ ತೊಡಗುತ್ತೇವೆ. ತಕ್ಷಣವೇ ಕೆಲಸ ಶುರು ಮಾಡಿಕೊಳ್ಳುತ್ತೇವೆ. ಲಖನೌದಲ್ಲಿ ಮಾರ್ಚ್​ 23 ಮತ್ತು 24ರಂದು ಪುನರವಲೋಕನ ಸಭೆ ನಡೆಸುತ್ತೇವೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಆಪ್​ ಸೋಲಲು ಕಾರಣವೇನು ಎಂಬ ಬಗ್ಗೆ ಈ ಸಭೆಯಲ್ಲಿ ಪರಾಮರ್ಶಿಸಲಾಗುವುದು ಎಂದೂ ಸಂಜಯ್ ಸಿಂಗ್​ ಮಾಹಿತಿ ನೀಡಿದ್ದಾರೆ.

ಉತ್ತರ ಪ್ರದೇಶದಲ್ಲಿ 403 ಕ್ಷೇತ್ರಗಳಲ್ಲಿ ಆಪ್​ ಸ್ಪರ್ಧಿಸಿದ್ದರೂ ಕೂಡ ಒಂದೇ ಒಂದು ಕ್ಷೇತ್ರವನ್ನೂ ಗೆಲ್ಲಲಿಲ್ಲ. ಈ ಬಗ್ಗೆ ಮಾತನಾಡಿದ ಸಂಜಯ್​ ಸಿಂಗ್​, ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷಗಳ ನಡುವೆ ನೇರ ಹಣಾಹಣಿ, ಸ್ಪರ್ಧೆ ಏರ್ಪಟ್ಟಿತ್ತು. ಹಾಗಾಗಿ ಆಪ್​ ಸೇರಿ ಇನ್ಯಾವುದೇ ರಾಜಕೀಯ ಪಕ್ಷಗಳಿಗೂ ಅಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಪ್ರೀತಿ ಜಿಂಟಾ ಮುಂದೆ ಸೈಫ್​ ಅಲಿ ಖಾನ್​ ಸ್ಟಂಟ್​ ಎಡವಟ್ಟು​; ಸತ್ತು ಹೋದ್ರು ಅಂತ ಭಾವಿಸಿದ್ದ ನಟಿ

Published On - 8:50 am, Sat, 12 March 22