ಸಂಸತ್ ಭವನಕ್ಕೆ ಸದಸ್ಯರು ವಿದಾಯ ಹೇಳುವ ಮುನ್ನ ಅದರ ಸಭಾಂಗಣದಲ್ಲಿ ಫೋಟೋಶೂಟ್!

|

Updated on: Sep 19, 2023 | 12:33 PM

ಮುಂಭಾಗದಲ್ಲಿ ಪ್ರಧಾನಿ ಮೋದಿ, ಅವರ ಬಲಭಾಗದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಎಡಭಾಗದಲ್ಲಿ ಉಪ ರಾಷ್ಟ್ರಪತಿ ಜಗದೀಪ್ ಧನಕರ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಆಸೀನಾಗಿರುವುದನ್ನು ನೋಡಬಹುದು. ಅವರ ಮುಂದೆ ಕೆಲ ಸಂಸದರು ಕೂತಿದ್ದರೆ ಹೆಚ್ಚಿನವರು ಹಿಂಭಾಗದಲ್ಲಿ ನಿಂತಿದ್ದಾರೆ. ಮೇಲ್ಮನೆ ಹಾಗೂ ಕೆಳಮನೆಯ ಎಲ್ಲ ಸದಸ್ಯರು ಒಂದೇ ಫ್ರೇಮ್ ನಲ್ಲಿ ಬಂದಿರೋದು ಸಹ ಒಂದು ಅಭೂತಪೂರ್ವ ಕ್ಷಣವೇ.

ದೆಹಲಿ: ಸ್ವತಂತ್ರ ಮತ್ತು ಪ್ರಜಾಪ್ರಭುತ್ವ ಭಾರತದ ಇತಿಹಾಸದಲ್ಲಿ ಇವತ್ತು ಒಂದು ಮಹತ್ವಪೂರ್ಣ ದಿನ. ಹೊಸದಾಗಿ ನಿರ್ಮಿಸಲಾಗಿರುವ ಸಂಸತ್ ಭವನಕ್ಕೆ (Sansad Bhavan) ಸಂಸತ್ತು ಶಿಫ್ಟ್ ಆಯಿತು. ಮೇ 28, 2023 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ತ್ರಿಕೋನಾಕಾರ ವಿನ್ಯಾಸದ ನೂತನ ಮತ್ತು ಭವ್ಯ ಸಂಸದ್ ಭವನವನ್ನು ಲೋಕಾರ್ಪಣೆ ಮಾಡಿದ್ದರು. ಹೊಸ ಕಟ್ಟಡಕ್ಕೆ ಶಿಫ್ಟ್ ಆಗುವ ಮೊದಲು ಹಳೆಯ ಸಂಸತ್ ಕಟ್ಟಡದ ಸಭಾಂಗಣದಲ್ಲಿ (courtyard) ಪೋಟೋಶೂಟ್ ನಡೆಯಿತು. ರಾಜ್ಯ ಸಭಾ ಮತ್ತು ಲೋಕ ಸಭೆಯ ಸುಮಾರು 750 ಸದಸ್ಯರು ಪೋಟೋ ಶೂಟ್ ನಲ್ಲಿ ಪಾಲ್ಗೊಂಡರು. ಮುಂಭಾಗದಲ್ಲಿ ಪ್ರಧಾನಿ ಮೋದಿ, ಅವರ ಬಲಭಾಗದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh), ಎಡಭಾಗದಲ್ಲಿ ಉಪ ರಾಷ್ಟ್ರಪತಿ ಜಗದೀಪ್ ಧನಕರ್ (Jagdeep Dhankar), ಲೋಕಸಭಾ ಸ್ಪೀಕರ್ ಓಂ ಬಿರ್ಲಾ (Om Birla) ಆಸೀನಾಗಿರುವುದನ್ನು ನೋಡಬಹುದು. ಅವರ ಮುಂದೆ ಕೆಲ ಸಂಸದರು ಕೂತಿದ್ದರೆ ಹೆಚ್ಚಿನವರು ಹಿಂಭಾಗದಲ್ಲಿ ನಿಂತಿದ್ದಾರೆ. ಮೇಲ್ಮನೆ ಹಾಗೂ ಕೆಳಮನೆಯ ಎಲ್ಲ ಸದಸ್ಯರು ಒಂದೇ ಫ್ರೇಮ್ ನಲ್ಲಿ ಬಂದಿರೋದು ಸಹ ಒಂದು ಅಭೂತಪೂರ್ವ ಕ್ಷಣವೇ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 12:29 pm, Tue, 19 September 23

Follow us on