ದೆಹಲಿ: ದೇಶದಲ್ಲಿ ದೈನಂದಿನ ಕೊವಿಡ್ (Covid-19) ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದ್ದು ಕಳೆದ24 ಗಂಟೆಗಳಲ್ಲಿ 26,115 ಹೊಸ ಪ್ರಕರಣಗಳು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (MoHFW) ಹೇಳಿದ. ಹೊಸ ರೋಗಿಗಳ ಸೇರ್ಪಡೆಯೊಂದಿಗೆ, ರಾಷ್ಟ್ರವ್ಯಾಪಿ ಸೋಂಕಿನ ಸಂಖ್ಯೆ 33,504,534 ಕ್ಕೆ ಏರಿದೆ ಎಂದು ಅಂಕಿಅಂಶಗಳು ತಿಳಿಸಿವೆ. ದೇಶದಲ್ಲಿ ಸಕ್ರಿಯ ರೋಗಿಗಳ ಸಂಖ್ಯೆ 8606 ರಿಂದ 309,575 ಕ್ಕೆ ಇಳಿದಿದೆ. ಸಕ್ರಿಯ ಪ್ರಕರಣಗಳು ಒಟ್ಟಾರೆ ಪ್ರಕರಣಗಳ ಶೇ 0.9 ಅನ್ನು ಒಳಗೊಂಡಿರುತ್ತವೆ. ಇದು ಮಾರ್ಚ್ 2020 ರ ನಂತರ ರಾಷ್ಟ್ರವ್ಯಾಪಿ ಸಂಖ್ಯೆಯಲ್ಲಿನ ಸಕ್ರಿಯ ಪ್ರಕರಣಗಳ ಇಳಿಕೆಯನ್ನು ತೋರಿಸುತ್ತದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಇದು 6 ತಿಂಗಳಲ್ಲಿ ಅಥವಾ 184 ದಿನಗಳಿಗಳಲ್ಲಿ ಸೋಮವಾರ ಅತೀ ಕಡಿಮೆ ಸಕ್ರಿಯ ಪ್ರಕರಣಗಳು ವರದಿ ಆಗಿವೆ. ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ಕೊವಿಡ್ -19 ರಿಂದ ಇಲ್ಲಿಯವರೆಗೆ ಚೇತರಿಸಿಕೊಂಡ ಜನರ ಸಂಖ್ಯೆ ಶೇ 97.75ಕ್ಕೆ ಏರಿದೆ. ಇದು ಕಳೆದ ಮಾರ್ಚ್‌ನಿಂದ ಅತಿ ಹೆಚ್ಚು. ಚೇತರಿಸಿಕೊಂಡ ನಂತರ ಆಸ್ಪತ್ರೆಯಿಂದ ಬಿಡುಗಡೆಯಾದ 34,469 ಜನರ ಸೇರ್ಪಡೆಯೊಂದಿಗೆ, ದೇಶದಲ್ಲಿ ಇಂತಹ ಒಟ್ಟು ಪ್ರಕರಣಗಳ ಸಂಖ್ಯೆ ಈಗ 32,749,574 ಕ್ಕೆ ತಲುಪಿದೆ. ಏತನ್ಮಧ್ಯೆ, 252 ಮಂದಿ ಸಾವಿಗೀಡಾಗಿದ್ದು ಸಾವುಗಳ ಸಂಖ್ಯೆ 445,385 ಅಥವಾ ಒಟ್ಟು ಪ್ರಕರಣಗಳಲ್ಲಿ ಶೇ 1.33 ಕ್ಕೆ ತಲುಪಿದೆ.
India reports 26,115 new #COVID19 cases, 252 deaths & 34,469 recoveries in last 24 hrs, says Health Ministry
Total Cases: 3,35,04,534 Total Active cases: 3,09,575 Total Recoveries: 3,27,49,574 Total Death toll: 4,45,385
Total vaccination: 81,85,13,827 (96,46,778 in 24 hrs) pic.twitter.com/CzL8Ugj7lq
— ANI (@ANI) September 21, 2021
ಸಾಪ್ತಾಹಿಕ (ಶೇ 2.08) ಮತ್ತು ದೈನಂದಿನ ಧನಾತ್ಮಕ ದರಗಳು (ಶೇ 1.85) ಶೇ 3ಕ್ಕಿಂತ ಕಡಿಮೆ ಉಳಿದಿವೆ,. ಸೆಪ್ಟೆಂಬರ್ 20 ರಂದು ಸಾಂಕ್ರಾಮಿಕ ರೋಗ ಪತ್ತೆಗಾಗಿ 1,413,951 ಮಾದರಿಗಳನ್ನು ಪರೀಕ್ಷಿಸಲಾಯಿತು. ಇದುವರೆಗೆ ಪರೀಕ್ಷಿಸಿದ ಮಾದರಿಗಳ ಸಂಖ್ಯೆ 555,035,717 ಕ್ಕೆ ತಲುಪಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ.
ಲಸಿಕೆ ವಿತರಣೆಯಲ್ಲಿ ಜನವರಿ 16 ರಂದು ರಾಷ್ಟ್ರವ್ಯಾಪಿ ಚಾಲನೆ ಆರಂಭವಾದಾಗಿನಿಂದ ಕನಿಷ್ಠ 818,513,827 ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಈ ಪೈಕಿ 9,646,778 ಅನ್ನು ಸೋಮವಾರ ನೀಡಲಾಯಿತು.
ಇದನ್ನೂ ಓದಿ: ಅಕ್ಟೋಬರ್ನಿಂದ ಕೊವಿಡ್ 19 ಲಸಿಕೆ ರಫ್ತು ಮತ್ತೆ ಪ್ರಾರಂಭ; ಇಂದು ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಸಚಿವ
(Active cases lowest in 6 months India reports 26,115 new Covid casesin last 24 hours)