ಅದಾನಿ-ಹಿಂಡನ್​​ಬರ್ಗ್ ಪ್ರಕರಣ: ಪ್ರಧಾನಿ ನರೇಂದ್ರ ಮೋದಿ ಚಿತ್ರ ಹಂಚಿಕೊಳ್ಳುವ ಮೂಲಕ ಪ್ರಶ್ನೆ ಮಾಡಿದ ನಟ ಪ್ರಕಾಶ್ ರಾಜ್

ಪ್ರ+ಅದಾನಿ ಯಾವ ಸಂಧಿ??? ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಅದಾನಿಯ ನೆರಳುಳ್ಳ ಚಿತ್ರವನ್ನು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಳ್ಳುವ ಮೂಲಕ ನಟ ಪ್ರಕಾಶ್​ ರಾಜ್​ ಪ್ರಶ್ನೆ ಮಾಡಿದ್ದಾರೆ.

ಅದಾನಿ-ಹಿಂಡನ್​​ಬರ್ಗ್ ಪ್ರಕರಣ: ಪ್ರಧಾನಿ ನರೇಂದ್ರ ಮೋದಿ ಚಿತ್ರ ಹಂಚಿಕೊಳ್ಳುವ ಮೂಲಕ ಪ್ರಶ್ನೆ ಮಾಡಿದ ನಟ ಪ್ರಕಾಶ್ ರಾಜ್
ಪ್ರಧಾನಿ ನರೇಂದ್ರ ಮೋದಿ, ನಟ ಪ್ರಕಾಶ್​ ರಾಜ್​
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Feb 13, 2023 | 9:09 PM

ಅದಾನಿ (Adani) ಸಮೂಹದ ಷೇರು ಅಕ್ರಮದ ಕುರಿತು ಇತ್ತೀಚೆಗೆ ಹಿಂಡನ್​ ಬರ್ಗ್​​ ಎಂಬ ಸಂಶೋಧನಾ ಸಂಸ್ಥೆ ವರದಿಯೊಂದನ್ನು ಬಿಡುಗಡೆ ಮಾಡಿತ್ತು. ಅದಾನಿ ಸಮೂಹದ ವಿರುದ್ಧ ಕೆಲ ಅಕ್ರಮದ ಆರೋಪ ಕೂಡ ಕೇಳಿಬಂದಿದೆ. ಈ ಆರೋಪದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಹೆಸರು ಕೇಳಿಬಂದಿದೆ. ಗೌತಮ್ ಅದಾನಿಯನ್ನು ಮೋದಿ ಅವರು ಕಾಪಾಡುತ್ತಿದ್ದಾರೆ ಎಂದು ಕೆಲ ಮಾತುಗಳು ಸಹ ಕೇಳಿಬಂದಿದ್ದವು. ಇನ್ನು ಇತ್ತೀಚೆಗೆ ಸಂಸತ್ತಿನಲ್ಲಿ ರಾಹುಲ್ ಗಾಂಧಿ ಕೂಡ ಮೋದಿ ಮತ್ತು ಅದಾನಿ ಮೇಲೆ ಹರಿಹಾಯ್ದಿದ್ದರು. ಸದ್ಯ ಇದೀಗ ನಟ ಪ್ರಕಾಶ್ ರಾಜ್​ ಟ್ವೀಟ್​ ಮಾಡುವ ಮೂಲಕ ಪ್ರಶ್ನಿಸಿದ್ದಾರೆ.

ಸರ್ಕಾರ, ರಾಜಕೀಯ ಪಕ್ಷಗಳನ್ನು, ನಾಯಕರನ್ನು ವಿಮರ್ಶೆ ಮಾಡುವ ನಟ ಪ್ರಕಾಶ್​ ರಾಜ್​ ಅವರು ಸದ್ಯ #justasking ಹ್ಯಾಷ್​ಟ್ಯಾಗ್​ ಮೂಲಕ ಪ್ರಶ್ನೆಯೊಂದನ್ನು ಮಾಡಿದ್ದಾರೆ. ಪ್ರ+ಅದಾನಿ ಯಾವ ಸಂಧಿ??? ಎಂದು ಪ್ರಶ್ನೆ ಮಾಡಿರುವ ಪ್ರಕಾಶ್​ ರಾಜ್​, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅದಾನಿಯ ನೆರಳುಳ್ಳ ಚಿತ್ರವನ್ನು ತಮ್ಮ ಟ್ವಿಟರ್​ನಲ್ಲಿ ಅವರು ಹಂಚಿಕೊಂಡಿದ್ದಾರೆ. ಆ ಮೂಲಕ ಮೋದಿ ಮತ್ತು ಅದಾನಿ ಅವರ ನಡುವಿನ ಸಂಬಂಧದ ಕುರಿತಾಗಿ ಅವರು ಪ್ರಸ್ತಾಪಿಸಿದಂತಿದೆ.  ಪ್ರಕಾಶ್​ ರಾಜ್​​ ಅವರು ಕ್ಯಾಚ್ ಮಿ ಇಫ್ ಯು  ಕ್ಯಾನ್ ಎಂಬ ಸಾಲನ್ನು ಕೂಡಾ ಇಲ್ಲಿ ಸೇರಿಸಿದ್ದಾರೆ

ರಾಹುಲ್ ಗಾಂಧಿ ಆರೋಪ

ಯುಎಸ್ ಇನ್ವೆಸ್ಟ್‌ಮೆಂಟ್ ಗ್ರೂಪ್ ಹಿಂಡೆನ್‌ಬರ್ಗ್ ರಿಸರ್ಚ್ ಗುಂಪಿನಿಂದ ಲೆಕ್ಕಪತ್ರ ವಂಚನೆ ಆರೋಪದ ನಂತರ , ಅದಾನಿ ಅವರ ಕಂಪನಿಗಳು ಸುಮಾರು $ 120 ಬಿಲಿಯನ್ ಮೌಲ್ಯವನ್ನು ಕಳೆದುಕೊಂಡಿದೆ. ವಿವಿಧ ಕ್ಷೇತ್ರಗಳಲ್ಲಿ ಪ್ರಧಾನಿ ಮೋದಿ ಅವರು ಗೌತಮ್ ಅದಾನಿ ಅವರ ವ್ಯಾಪಾರ ಸಾಮ್ರಾಜ್ಯಕ್ಕೆ ಸಹಾಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಆರೋಪಿಸಿದ್ದು ಬಿಜೆಪಿ ಪ್ರತ್ಯಾರೋಪಗಳನ್ನು ಮಾಡಿದೆ. ಅದಾನಿ ಜೀ ಅವರು ಸೌರಶಕ್ತಿ, ಪವನ ಶಕ್ತಿಯಲ್ಲಿ ವ್ಯವಹಾರ ಮಾಡಿದ್ದು ಅವರು ಎಂದಿಗೂ ವಿಫಲರಾಗುವುದಿಲ್ಲ.

ಇದನ್ನೂ ಓದಿ: Adani Row: ಅದಾನಿ-ಹಿಂಡನ್​​ಬರ್ಗ್ ಪ್ರಕರಣ; ತಜ್ಞರ ಸಮಿತಿ ರಚನೆಗೆ ಕೇಂದ್ರ ಸಮ್ಮತಿ

‘ಅದಾನಿ ಅನೇಕ ಕ್ಷೇತ್ರಗಳಲ್ಲಿ ಅಂತಹ ಯಶಸ್ಸನ್ನು ಹೇಗೆ ಪಡೆದರು, ಪ್ರಧಾನಿಯೊಂದಿಗೆ ಅವರ ಸಂಬಂಧವೇನು ಎಂದು ಭಾರತ್ ಜೋಡೋ ಯಾತ್ರೆಯಲ್ಲಿ ಜನರು ನನ್ನಲ್ಲಿ ಕೇಳಿದ್ದರು ಎಂದು ರಾಹುಲ್ ಗಾಂಧಿ ಲೋಕಸಭೆಯಲ್ಲಿ ಹೇಳಿದ್ದಾರೆ. ಪ್ರಧಾನಿ ಮೋದಿ ಭೇಟಿ ನೀಡಿದ ದೇಶಗಳಲ್ಲಿ ಅದಾನಿ ಗುತ್ತಿಗೆ ಪಡೆದಿದ್ದಾರೆ ಎಂದು ರಾಹುಲ್ ಆರೋಪಿಸಿದ್ದಾರೆ. 2014 ಮತ್ತು 2022 ರ ನಡುವೆ ಅದಾನಿ ನಿವ್ವಳ ಮೌಲ್ಯವು $ 8 ಶತಕೋಟಿಯಿಂದ 140 ಶತಕೋಟಿಗೆ ಹೇಗೆ ಹೆಚ್ಚಾಯಿತು ಎಂದು ಜನರು ನನ್ನನ್ನು ಕೇಳಿದರು. 2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಉದ್ಯಮಿ ಅದಾನಿ 600 ನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಹೋದರು. ವ್ಯಥಾರೋಪ ಮಾಡಬೇಡಿ, ಪುರಾವೆ ನೀಡಿ ಎಂದು ಕಾನೂನು ಸಚಿವ ಕಿರಣ್ ರಿಜಿಜು ರಾಹುಲ್ ಗೆ ತಿರುಗೇಟು ನೀಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:57 pm, Mon, 13 February 23