ಭೂಮಿಯ ಕಕ್ಷೆಯಿಂದ ಯಶಸ್ವಿಯಾಗಿ ಹೊರಹೋದ ಆದಿತ್ಯ ಎಲ್​-1, ಭೂಮಿಯ ದತ್ತಾಂಶ ಸಂಗ್ರಹ ಕಾರ್ಯ ಆರಂಭ

|

Updated on: Sep 19, 2023 | 9:30 AM

ಚಂದ್ರಯಾನ 3ರ ಬಳಿಕ ಇಸ್ರೋದ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆ ಆದಿತ್ಯ ಎಲ್​1(Aditya l1) ಮೇಲೆ ಎಲ್ಲರ ಭರವಸೆ ನೆಟ್ಟಿದೆ. ಇದೀಗ ಆದಿತ್ಯ ಎಲ್​1 ಭೂಮಿಯ ಐದು ಕಕ್ಷೆಗಳ ಬದಲಿಸಿ ಇದೀಗ ಭೂಮಿಯಿಂದ ಹೊರಗೆ ಬಂದಿದೆ, ಭೂಮಿಯ ಸುತ್ತಲಿನ ದತ್ತಾಂಶಗಳ ಸಂಗ್ರಹ ಕಾರ್ಯವನ್ನು ಶುರು ಮಾಡಿದೆ. ಭೂಮಿಯಿಂದ 50,000 ಕಿ.ಮೀ.ಗಿಂತ ಹೆಚ್ಚಿನ ದೂರದಲ್ಲಿ ಸೂಪರ್ ಥರ್ಮಲ್, ಅಯಾನುಗಳು, ಎಲೆಕ್ಟ್ರಾನ್‌ಗಳ ಬಗ್ಗೆ ಅಧ್ಯಯನ ಮಾಡಲಿದೆ. ಭೂಮಿಯ ಕಕ್ಷೆಯಿಂದ ಹೊರಬಂದು ಆದಿತ್ಯ L-1 ಅಧ್ಯಯನ ಆರಂಭಿಸಿರುವ ಬಗ್ಗೆ ಇಸ್ರೋ ಮಾಹಿತಿ ನೀಡಿದೆ.

ಭೂಮಿಯ ಕಕ್ಷೆಯಿಂದ ಯಶಸ್ವಿಯಾಗಿ ಹೊರಹೋದ ಆದಿತ್ಯ ಎಲ್​-1, ಭೂಮಿಯ ದತ್ತಾಂಶ ಸಂಗ್ರಹ ಕಾರ್ಯ ಆರಂಭ
ಆದಿತ್ಯ ಎಲ್​1
Follow us on

ಚಂದ್ರಯಾನ 3ರ ಬಳಿಕ ಇಸ್ರೋದ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆ ಆದಿತ್ಯ ಎಲ್​1(Aditya l1) ಮೇಲೆ ಎಲ್ಲರ ಭರವಸೆ ನೆಟ್ಟಿದೆ. ಇದೀಗ ಆದಿತ್ಯ ಎಲ್​1 ಭೂಮಿಯ ಐದು ಕಕ್ಷೆಗಳ ಬದಲಿಸಿ ಇದೀಗ ಭೂಮಿಯಿಂದ ಹೊರಗೆ ಬಂದಿದೆ, ಭೂಮಿಯ ಸುತ್ತಲಿನ ದತ್ತಾಂಶಗಳ ಸಂಗ್ರಹ ಕಾರ್ಯವನ್ನು ಶುರು ಮಾಡಿದೆ. ಭೂಮಿಯಿಂದ 50,000 ಕಿ.ಮೀ.ಗಿಂತ ಹೆಚ್ಚಿನ ದೂರದಲ್ಲಿ ಸೂಪರ್ ಥರ್ಮಲ್, ಅಯಾನುಗಳು, ಎಲೆಕ್ಟ್ರಾನ್‌ಗಳ ಬಗ್ಗೆ ಅಧ್ಯಯನ ಮಾಡಲಿದೆ. ಭೂಮಿಯ ಕಕ್ಷೆಯಿಂದ ಹೊರಬಂದು ಆದಿತ್ಯ L-1 ಅಧ್ಯಯನ ಆರಂಭಿಸಿರುವ ಬಗ್ಗೆ ಇಸ್ರೋ ಮಾಹಿತಿ ನೀಡಿದೆ.

ಈ ದತ್ತಾಂಶವು ವಿಜ್ಞಾನಿಗಳಿಗೆ ಭೂಮಿಯ ಸುತ್ತಲಿನ ಕಣಗಳ ನಡವಳಿಕೆಗಳನ್ನು ಅಳೆಯಲು ಸಹಾಯ ಮಾಡಲಿದೆ.
ಸೆಪ್ಟೆಂಬರ್ 2 ರಂದು ಪ್ರಾರಂಭವಾದ ಆದಿತ್ಯ-ಎಲ್1 ಮಿಷನ್‌ನ ಉದ್ದೇಶವು ಸೂರ್ಯನ ದ್ಯುತಿಗೋಳ, ವರ್ಣಗೋಳ ಮತ್ತು ಕರೋನಾವನ್ನು ಅಧ್ಯಯನ ಮಾಡುವುದಾಗಿದೆ.

ಇಲ್ಲಿಂದ ನೌಕೆಯು 15 ಲಕ್ಷ ಕಿಲೋಮೀಟರ್ ಪ್ರಯಾಣ ಆರಂಭಿಸಲಿದೆ. ಇದು ಜನವರಿ 2024 ರಲ್ಲಿ 110 ದಿನಗಳ ನಂತರ ಲಾಗ್ರಾಂಜಿಯನ್ ಪಾಯಿಂಟ್ 1 ಅನ್ನು ತಲುಪುತ್ತದೆ.

ಆದಿತ್ಯ L1 ಅನ್ನು ಸೆಪ್ಟೆಂಬರ್ 2 ರಂದು ಬೆಳಿಗ್ಗೆ 11.50 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ PSLV-C57 ನ XL ಆವೃತ್ತಿಯ ರಾಕೆಟ್ ಬಳಸಿ ಉಡಾವಣೆ ಮಾಡಲಾಯಿತು.

ಉಡಾವಣೆಯಾದ 63 ನಿಮಿಷಗಳು ಮತ್ತು 19 ಸೆಕೆಂಡುಗಳ ನಂತರ, ಬಾಹ್ಯಾಕಾಶ ನೌಕೆಯನ್ನು ಭೂಮಿಯ 235 ಕಿಮೀ x 19500 ಕಿಮೀ ಕಕ್ಷೆಯಲ್ಲಿ ಇರಿಸಲಾಯಿತು.

ಆದಿತ್ಯ ಎಲ್1 ವೈಜ್ಞಾನಿಕ ಮಾಹಿತಿ ಸಂಗ್ರಹಿಸಲು ಆರಂಭಿಸಿದೆ ಎಂದು ಇಸ್ರೋ ತಿಳಿಸಿತ್ತು. ಬಾಹ್ಯಾಕಾಶ ನೌಕೆಯಲ್ಲಿ ಅಳವಡಿಸಲಾಗಿರುವ ಸುಪ್ರಾ ಥರ್ಮಲ್ ಮತ್ತು ಎನರ್ಜಿಟಿಕ್ ಪಾರ್ಟಿಕಲ್ ಸ್ಪೆಕ್ಟ್ರೋಮೀಟರ್ ಅಥವಾ STEPS ಉಪಕರಣವನ್ನು ಸೆಪ್ಟೆಂಬರ್ 10 ರಂದು ಭೂಮಿಯಿಂದ 50,000 ಕಿಲೋಮೀಟರ್ ದೂರದಲ್ಲಿ ಸಕ್ರಿಯಗೊಳಿಸಲಾಯಿತು.
ದತ್ತಾಂಶದ ಸಹಾಯದಿಂದ, ಸೂರ್ಯನ ಮೇಲೆ ಉಂಟಾಗುವ ಬಿರುಗಾಳಿಗಳು ಮತ್ತು ಬಾಹ್ಯಾಕಾಶ ಹವಾಮಾನದ ಬಗ್ಗೆ ಮಾಹಿತಿ ಲಭ್ಯವಾಗಲಿದೆ.

ಮತ್ತಷ್ಟು ಓದಿ: Aditya L1 Mission: ಮೊದಲ ಕಕ್ಷೆಯನ್ನು ಪೂರ್ಣಗೊಳಿಸಿ ಸೂರ್ಯನತ್ತ ಮತ್ತೊಂದು ಹೆಜ್ಜೆ ಇಟ್ಟ ಆದಿತ್ಯ

ಲ್ಯಾಗ್ರೇಂಜ್ ಪಾಯಿಂಟ್ ಅನ್ನು ಇಟಾಲಿಯನ್-ಫ್ರೆಂಚ್ ಗಣಿತಜ್ಞ ಜೋಸೆಫ್-ಲೂಯಿಸ್ ಲಾಗ್ರೇಂಜ್ ಹೆಸರಿಡಲಾಗಿದೆ. ಇದನ್ನು ಆಡುಮಾತಿನಲ್ಲಿ L1 ಎಂದು ಕರೆಯಲಾಗುತ್ತದೆ. ಭೂಮಿ ಮತ್ತು ಸೂರ್ಯನ ನಡುವೆ ಅಂತಹ ಐದು ಬಿಂದುಗಳಿವೆ, ಅಲ್ಲಿ ಸೂರ್ಯ ಮತ್ತು ಭೂಮಿಯ ಗುರುತ್ವಾಕರ್ಷಣೆಯ ಬಲವು ಸಮತೋಲನವಾಗಿರುತ್ತದೆ.

ಮೊದಲ ಲ್ಯಾಗ್ರೇಂಜ್ ಪಾಯಿಂಟ್ ಭೂಮಿ ಮತ್ತು ಸೂರ್ಯನ ನಡುವೆ 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿದೆ. ಈ ಹಂತದಲ್ಲಿ ಗ್ರಹಣದ ಪರಿಣಾಮವಿಲ್ಲ.

ಆದಿತ್ಯ 7 ಪೇಲೋಡ್‌ಗಳನ್ನು ಹೊಂದಿದೆ

PAPA ಅಂದರೆ ಆದಿತ್ಯಗೆ ಪ್ಲಾಸ್ಮಾ ವಿಶ್ಲೇಷಕ ಪ್ಯಾಕೇಜ್: ಸೂರ್ಯನ ಬಿಸಿ ಗಾಳಿಯನ್ನು ಅಧ್ಯಯನ ಮಾಡುತ್ತದೆ.
VELC ಅಂದರೆ ವಿಸಿಬಲ್ ಲೈನ್ ಎಮಿಷನ್ ಕರೋನಾಗ್ರಾಫ್: ಸೂರ್ಯನ ಹೈ ಡೆಫಿನಿಷನ್ ಫೋಟೋಗಳನ್ನು ತೆಗೆದುಕೊಳ್ಳುತ್ತದೆ.
SUIT ಅಂದರೆ ಸೌರ ನೇರಳಾತೀತ ಇಮೇಜಿಂಗ್ ಟೆಲಿಸ್ಕೋಪ್: ನೇರಳಾತೀತ ತರಂಗಾಂತರಗಳಲ್ಲಿ ಸೂರ್ಯನ ಫೋಟೋಗಳನ್ನು ತೆಗೆದುಕೊಳ್ಳುತ್ತದೆ.
HEL10S ಅಂದರೆ ಹೈ ಎನರ್ಜಿ L1 ಆರ್ಬಿಟಿಂಗ್ ಎಕ್ಸ್-ರೇ ಸ್ಪೆಕ್ಟ್ರೋಮೀಟರ್: ಹೆಚ್ಚಿನ ಶಕ್ತಿಯ ಎಕ್ಸ್-ರೇಗಳನ್ನು ಅಧ್ಯಯನ ಮಾಡುತ್ತದೆ.
ASPEX : ಆಲ್ಫಾ ಕಣಗಳನ್ನು ಅಧ್ಯಯನ ಮಾಡುತ್ತದೆ.
MAG ಅಂದರೆ ಸುಧಾರಿತ ಟ್ರೈ-ಆಕ್ಸಿಯಲ್ ಹೈ ರೆಸಲ್ಯೂಷನ್ ಡಿಜಿಟಲ್ ಮ್ಯಾಗ್ನೆಟೋಮೀಟರ್‌ಗಳು: ಕಾಂತೀಯ ಕ್ಷೇತ್ರಗಳನ್ನು ಅಧ್ಯಯನ ಮಾಡುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ