ಮನಾಲಿ: ಅಟಲ್ ಬಿಹಾರಿ ವಾಜಪೇಯಿ ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್ ಮತ್ತು ಅಲೈಡ್ ಸ್ಪೋರ್ಟ್ಸ್ (ABVIMAS), ಮನಾಲಿ ಮತ್ತು ಲಾಹೌಲ್ ಮತ್ತು ಸ್ಪಿತಿ ಪೊಲೀಸರ ಜಂಟಿ ತಂಡವು 6,264 ಮೀಟರ್ ಪಾದಯಾತ್ರೆಯಲ್ಲಿದ್ದಾಗ ಆಳವಾದ ಬಿರುಕಿನಲ್ಲಿ ಬಿದ್ದ ಎರಡು ತಿಂಗಳ ನಂತರ ಬೆಂಗಳೂರಿನ ಪಾದಯಾತ್ರಿಕನ ಮೃತದೇಹವನ್ನು ಹೊರತೆಗೆಯಲಾಗಿದೆ.
ಬೆಂಗಳೂರಿನ ಖಾಸಗಿ ಸೆಕ್ಯುರಿಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮೃತ ಪರ್ವತಾರೋಹಿ ವೇದವ್ಯಾಸ್ ಅವರು ಐವರು ಸದಸ್ಯರ ಟ್ರೆಕ್ಕಿಂಗ್ ತಂಡದ ಭಾಗವಾಗಿದ್ದರು. ತಂಡವು ಟ್ರೆಕ್ಕಿಂಗ್ ಕೈಗೊಳ್ಳುವ ಮೊದಲು ಭಾರತೀಯ ಪರ್ವತಾರೋಹಣ ಫೆಡರೇಶನ್‌ನಿಂದ ಅನುಮತಿಯನ್ನು ಕೋರಿತ್ತು, ಆದರೆ ಮುಂಚಿತವಾಗಿ ಸ್ಥಳೀಯ ಆಡಳಿತಕ್ಕೆ ತಿಳಿಸಲು ಸಾಧ್ಯವಾಗಿರಲಿಲ್ಲ.
ಜೂನ್ 16 ರಂದು 5,300 ಮೀಟರ್ ಎತ್ತರದ ಹಿಮನದಿಯನ್ನು ದಾಟುವಾಗ ಅವರು ಸಂದಿನ ಒಳಗೆ ಬಿದ್ದಿದ್ದಾರೆ. ಆರಂಭದಲ್ಲಿ, ಅವರ ಜೊತೆಗಿದ್ದ ಉಳಿದ ಪರ್ವತಾರೋಹಿಗಳು ವೇದವ್ಯಾಸ್ ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದರೆ, ಆದರೆ ಅವರನ್ನು ಆ ಕಂದಕದಿಂದ ಮೇಲೆ ತರಲು ಸಾಧ್ಯವಾಗಿರಲಿಲ್ಲ, ನಂತರ ಅವರು ಸ್ಥಳೀಯ ಆಡಳಿತ ಮತ್ತು ಸೇನೆಗೆ ಮಾಹಿತಿ ನೀಡಿದ್ದಾರೆ.
ಲಹೌಲ್ ಮತ್ತು ಸ್ಪಿತಿ ಆಡಳಿತದಿಂದ ಕಳುಹಿಸಲಾದ ತುರ್ತು ತಂಡ ಮತ್ತು ಭಾರತೀಯ ಸೇನೆಯ ಡೋಗ್ರಾ ಸ್ಕೌಟ್ಸ್‌ನ ಏಳು ಸದಸ್ಯರ ತಂಡವು ಅವರನ್ನು ರಕ್ಷಿಸಲು ಆಗಿರಲಿಲ್ಲ ಏಕೆಂದರೆ ಪ್ರತಿಕೂಲ ಹವಾಮಾನವು ಕಾರ್ಯಾಚರಣೆಗೆ ಅಡ್ಡಿಯಾಗಿತ್ತು.
ಲಾಹೌಲ್ ಮತ್ತು ಸ್ಪಿತಿ ಪೊಲೀಸ್ ಅಧೀಕ್ಷಕ (ಎಸ್‌ಪಿ) ಮಾನವ್ ವರ್ಮಾ ಅವರು ಆಗಸ್ಟ್ 17 ರಂದು ಮತ್ತೊಮ್ಮೆ ಶೋಧ ಮತ್ತು ರಕ್ಷಣಾ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ. ಎಬಿವಿಮಾಸ್ ಇನ್ಸ್‌ಪೆಕ್ಟರ್ ಜಿತೇಂದರ್ ನೇತೃತ್ವದ ತಂಡ ಆಗಸ್ಟ್ 23 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಎರಡು ಗಂಟೆಗಳ ಕಾರ್ಯಾಚರಣೆಯ ನಂತರ ದೇಹವನ್ನು ಹೊರತೆಗೆದಿದೆ ಎಂದು ವರ್ಮಾ ಹೇಳಿದರು.
ಮೃತರ ಪಾರ್ಥಿವ ಶರೀರವನ್ನು ಎಂಟು ಗಂಟೆ ಮತ್ತು 17 ಕಿಮೀ ಇಳಿದ ನಂತರ ಹತ್ತಿರದ ರಸ್ತೆಗೆ ತರಲಾಗಿದೆ. ದೇಹವನ್ನು ಕುಲುವಿನಲ್ಲಿ ಇರಿಸಲಾಗಿದೆ ಮತ್ತು ಅವರ ಕುಟುಂಬ ಸದಸ್ಯರಿಗೆ ತಿಳಿಸಲಾಗಿದೆ ಎಂದು ಎಸ್ಪಿ ಹೇಳಿದರು.
Published On - 9:33 am, Thu, 25 August 22