Jammu Kashmir: ಕಾಶ್ಮೀರದಲ್ಲಿ ಉಗ್ರನ ಬಂಧನ; ಹೊರಬಿತ್ತು ಆಘಾತಕಾರಿ ಸತ್ಯ, ಪಾಕ್ ಸೇನೆಯ ಹಸ್ತಕ್ಷೇಪಕ್ಕೆ ದೊರಕಿತು ಸಾಕ್ಷ್ಯ

ಭಾರತೀಯ ಸೇನೆಯ ಮುಂಚೂಣಿ ಪೋಸ್ಟ್​ಗಳ ಮೇಲೆ ದಾಳಿ ನಡೆಸಲು ಮಾಡಿದ್ದ ಸಂಚನ್ನು ಸಂಚನ್ನು ವಿಫಲಗೊಳಿಸಿದ್ದಾಗಿ ಭಾರತೀಯ ಸೇನೆ ಹೇಳಿದೆ.

Jammu Kashmir: ಕಾಶ್ಮೀರದಲ್ಲಿ ಉಗ್ರನ ಬಂಧನ; ಹೊರಬಿತ್ತು ಆಘಾತಕಾರಿ ಸತ್ಯ, ಪಾಕ್ ಸೇನೆಯ ಹಸ್ತಕ್ಷೇಪಕ್ಕೆ ದೊರಕಿತು ಸಾಕ್ಷ್ಯ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 25, 2022 | 8:02 AM

ದೆಹಲಿ: ಕಳೆದ ಎರಡು ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದ (Jammu Kashmir) ರಾಜೌರಿ ಜಿಲ್ಲೆಯಲ್ಲಿ ಪಾಕಿಸ್ತಾನದ ಭಯೋತ್ಪಾದಕನನ್ನು (Pakistan Terrorist) ಸೆರೆಹಿಡಿದಿದ್ದಾರೆ. ನೆಲಬಾಂಬ್ ಸ್ಫೋಟದಿಂದ ಇಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು. ದೊಡ್ಡಮಟ್ಟದ ಭಯೋತ್ಪಾದನೆ ಕೃತ್ಯ ನಡೆಸುವ ಸಂಚನ್ನು ವಿಫಲಗೊಳಿಸಿದ್ದಾಗಿ ಭಾರತೀಯ ಸೇನೆ (Indian Army) ಹೇಳಿತ್ತು. ವಿಚಾರಣೆಯ ನಂತರ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಇದೀಗ ಬಂಧಿಸಿರುವ ಭಯೋತ್ಪಾದಕ ಈ ಹಿಂದೆಯೂ ಒಮ್ಮೆ ಅಕ್ರಮವಾಗಿ ಗಡಿ ದಾಟಿದ್ದ. ಇದೇ ಕಾರಣಕ್ಕೆ ಈತನನ್ನು ಬಂಧಿಸಿ, ಮಾನವೀಯ ದೃಷ್ಟಿಯಿಂದ ವಾಪಸ್ ಪಾಕಿಸ್ತಾನಕ್ಕೆ ಕಳಿಸಿದ್ದರು. ಆದರೆ ಮತ್ತೆ ಗಡಿ ದಾಟಿ ಬಂದ ಬಂದಿರುವ ಭಯೋತ್ಪಾದಕ ಅಕ್ರಮ ಕೃತ್ಯಗಳನ್ನು ಎಸಗಲು ಮುಂದಾಗಿದ್ದ. ಗಡಿ ನಿಯಂತ್ರಣ ರೇಖೆಯಲ್ಲಿರುವ ಭಾರತದ ಮುಂಚೂಣಿ ಸೇನಾ ಠಾಣೆಯೊಂದರ (ಮಿಲಿಟರಿ ಪೋಸ್ಟ್) ಮೇಲೆ ದಾಳಿ ನಡೆಸಲು ಈತನಿಗೆ ಪಾಕಿಸ್ತಾನ ಸೇನೆಯ ಕರ್ನಲ್ ಒಬ್ಬರು 30,000 ಪಾಕಿಸ್ತಾನಿ ರೂಪಾಯಿ ಕೊಟ್ಟಿದ್ದರು ಎಂದು ಸೇನೆಯ ಮೂಲಗಳನ್ನು ಉಲ್ಲೇಖಿಸಿ ಎನ್​ಡಿಟಿವಿ ವರದಿ ಮಾಡಿದೆ.

ಆಗಸ್ಟ್ 21ರಂದು ನೌಶೇರಾ ವಲಯದ ಝಂಗಾರ್ ಎಂಬಲ್ಲಿ ಗಸ್ತು ತಿರುಗುತ್ತಿದ್ದ ಯೋಧರು ಗಡಿ ನಿಯಂತ್ರಣ ರೇಖೆಯ ಭಾರತದ ಕಡೆ ಇಬ್ಬರು-ಮೂವರು ಸಂಚರಿಸುತ್ತಿದ್ದುದನ್ನು ಗುರುತಿಸಿದ್ದರು. ಈ ಪೈಕಿ ಒಬ್ಬ ನುಸುಳುಕೋರ ಸೇನಾಠಾಣೆಗೆ ಅತಿಸಮೀಪ ಬಂದಿದ್ದ. ಭದ್ರತೆಗೆ ಹಾಕಿದ್ದ ತಂತಿಬೇಲಿಯನ್ನು ಕತ್ತರಿಸಲು ಪ್ರಯತ್ನಿಸುತ್ತಿದ್ದ. ಅವನು ಓಡಲು ಯತ್ನಿಸಿದಾಗ ಯೋಧರು ಗುಂಡು ಹಾರಿಸುತ್ತಾ ಬೆನ್ನಟ್ಟಿದರು. ಈ ವೇಳೆ ಗಾಯಗೊಂಡ ಅವನನ್ನು ಸೆರೆ ಹಿಡಿಯಲಾಯಿತು.

ಇಬ್ಬರು ನುಸುಳುಕೋರರು ವಾಪಸ್ ಪಾಕ್ ಆಕ್ರಮಿತ ಪ್ರದೇಶಕ್ಕೆ ಹಿಂದಿರುಗುವಲ್ಲಿ ಯಶಸ್ವಿಯಾದರು. ಈ ಸ್ಥಳದಲ್ಲಿ ಕಾಡು ದಟ್ಟವಾಗಿದ್ದ ಕಾರಣ ಯೋಧರು ಬೆನ್ನಟ್ಟಲು ಸಾಧ್ಯವಾಗಲಿಲ್ಲ. ಆದರೆ ಜೀವಂತ ಸೆರೆಸಿಕ್ಕ ಪಾಕಿಸ್ತಾನದ ಭಯೋತ್ಪಾದಕನಿಗೆ ತಕ್ಷಣ ವೈದ್ಯಕೀಯ ನೆರವು ಒದಗಿಸಿ, ಜೀವ ಉಳಿಸಲು ಅತ್ಯಗತ್ಯವಾಗಿದ್ದ ಶಸ್ತ್ರಚಿಕಿತ್ಸೆ ಮಾಡಲಾಯಿತು. ನಂತರ ವಿಚಾರಣೆಗೆ ಒಳಪಡಿಸಿದಾಗ ಹಲವು ಆಘಾತಕಾರಿ ಅಂಶಗಳು ಬೆಳಕಿಗೆ ಬಂದವು.

ಬಂಧಿತನನ್ನು ತಬರಕ್ ಹುಸೇನೆ ಎಂದು ಗುರುತಿಸಲಾಗಿದೆ. ಇವನು ಪಾಕ್ ಆಕ್ರಮಿತ ಕಾಶ್ಮೀರದ ಸಬ್ಜ್​ಕೋಟ್​ ಗ್ರಾಮಕ್ಕೆ ಸೇರಿದವನು. ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಕರ್ನಲ್ ಚೌಧರಿ ಎನ್ನುವವರು 30,000 ಪಾಕ್​ ರೂಪಾಯಿ ಕೊಟ್ಟು ಇವನನ್ನು ಭಾರತದ ಗಡಿದಾಟುವಂತೆ ಸೂಚಿಸಿದ್ದರು. ಬಂಧನದ ವೇಳೆ ಅವನ ಬಳಿ ಪಾಕಿಸ್ತಾನದ ಕರೆನ್ಸಿ ಸಹ ಪತ್ತೆಯಾಗಿತ್ತು. ದಾಳಿಗೆ ಮೊದಲು ಭಾರತದ ಮುಂಚೂಣಿ ಸೇನಾ ನೆಲೆಗಳ ಚಟುವಟಿಕೆಗಳನ್ನು ಹಲವು ದಿನಗಳಿಂದ ಭಯೋತ್ಪಾದಕರು ಮತ್ತು ಪಾಕಿಸ್ತಾನದ ಸೇನಾ ಸಿಬ್ಬಂದಿ ಸೂಕ್ಷ್ಮವಾಗಿ ಗಮನಿಸಿದ್ದರು ಎಂದು ಭಾರತೀಯ ಸೇನೆ ಹೇಳಿದೆ.

ಇದೇ ವ್ಯಕ್ತಿಯನ್ನು 2016ರಲ್ಲಿ ಅವನ ಸೋದರ ಹರೂನ್ ಆಲಿ ಎಂಬಾತನೊಂದಿಗೆ ಭಾರತೀಯ ಸೇನೆಯು ಬಂಧಿಸಿತ್ತು. ನಂತರ ನವೆಂಬರ್ 2017ರಲ್ಲಿ ಅವನನ್ನು ಮಾನವೀಯತೆ ದೃಷ್ಟಿಯಿಂದ ವಾಪಸ್ ಕಳಿಸಲಾಗಿತ್ತು. ಭಾರತದ ಗಡಿಯೊಳಗೆ ನುಸುಳಿದ ಭಯೋತ್ಪಾದಕರು ನೆಲಬಾಂಬ್ (ಮೈನ್​) ಮೇಲೆ ಕಾಲಿಟ್ಟಿದ್ದರಿಂದ ಸರಣಿ ಸ್ಫೋಟಗಳು ಸಂಭವಿಸಿ, ಇಬ್ಬರು ಭಯೋತ್ಪಾದಕರು ಮೃತಪಟ್ಟಿದ್ದರು. ಇವರ ಜೊತೆಗೆ ಬಂದಿದ್ದ ಇನ್ನೂ ಹಲವರು ಗಾಯಗೊಂಡು ವಾಪಸ್ ಪಾಕಿಸ್ತಾನಕ್ಕೆ ಓಡಿ ಹೋಗಿರಬಹುದು ಎಂದು ಭಾರತೀಯ ಸೇನೆ ಶಂಕಿಸಿದೆ. ಮಾರನೇ ದಿನ ಭಾರತೀಯ ಸೇನೆ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಎರಡು ಮೃತದೇಹಗಳು ಮತ್ತು ಎಕೆ-56 ರೈಫಲ್​ಗಳು ಹಾಗೂ ಆಹಾರ ಪತ್ತೆಯಾಗಿತ್ತು.

Published On - 8:01 am, Thu, 25 August 22

ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್