ಗುಜರಾತ್‌ನಲ್ಲಿದ್ದ (Gujarat) ಕಾಂಗ್ರೆಸ್ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮತ್ತು ಕೋಮುಗಲಭೆ ತಡೆಯುವಲ್ಲಿ ವಿಫಲವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಭಾನುವಾರ ಹೇಳಿದ್ದಾರೆ. ನರೇಂದ್ರ ಮೋದಿ (Narendra Modi) ಮುಖ್ಯಮಂತ್ರಿಯಾದ ನಂತರವೇ ಜಗನ್ನಾಥ ರಥಯಾತ್ರೆಯ (Lord Jagannath Rath Yatra) ಮೇಲೆ ದಾಳಿ ಮಾಡಿದವರನ್ನು ಜೈಲಿಗೆ ಕಳುಹಿಸಲಾಯಿತು. ಈಗ ಅವರು ಜೈಲಿನಲ್ಲಿ ‘ಜಗನ್ನಾಥ ಜಗನ್ನಾಥ’ ಎಂದು ಜಪಿಸುತ್ತಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ. ಖೇಡಾ ಜಿಲ್ಲೆಯ ನಾಡಿಯಾಡ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ 25 ಜಿಲ್ಲೆಗಳಲ್ಲಿ ಪೊಲೀಸರಿಗೆ 57 ವಸತಿ ಮತ್ತು ಕಚೇರಿ ಸಂಕೀರ್ಣಗಳನ್ನು ಉದ್ಘಾಟಿಸಿದ ಶಾ, “ನಾನು ಗುಜರಾತ್‌ನವನು. ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಮತ್ತು ಮೋದಿಜಿ ಸಿಎಂ ಆಗುವ ಮೊದಲು ನಾನು ರಾಜ್ಯವನ್ನು ನೋಡಿದ್ದೇನೆ. ಇಂದು ನಾನು ಕಾಂಗ್ರೆಸ್ ಸರ್ಕಾರದ ಅವ್ಯವಹಾರದ ಬಗ್ಗೆ ಮಾತನಾಡಲು ಬಂದಿಲ್ಲ. ಸಮಾಜದಲ್ಲಿ ಆಂತರಿಕ ಕಚ್ಚಾಟವನ್ನು ಉತ್ತೇಜಿಸುವ ಮತ್ತು ಕೋಮು ಘಟನೆಗಳನ್ನು ಹರಡುವ ಮೂಲಕ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ನಾಶಪಡಿಸುವ ಕೆಲಸವನ್ನು ಕಾಂಗ್ರೆಸ್ ವರ್ಷಗಳಿಂದ ಮಾಡಿದೆ. ಅದರ ಫಲಿತಾಂಶ ಏನಾಯ್ತು?. ಒಂದು ವರ್ಷದಲ್ಲಿ ಗುಜರಾತ್‌ನಲ್ಲಿ 200 ದಿನಗಳ ಕರ್ಫ್ಯೂ ಇತ್ತು. ಒಬ್ಬ ವ್ಯಕ್ತಿ ಕೆಲಸಕ್ಕಾಗಿ ಬೆಳಿಗ್ಗೆ ರಿಲೀಫ್ ರಸ್ತೆಗೆ ಹೋದರೆ, ಅವನು ಹಿಂತಿರುಗುತ್ತಾನೆ ಎಂಬ ಖಾತರಿ ಇರಲಿಲ್ಲ. ಹಲವಾರು ದಿನಗಳವರೆಗೆ, ಬ್ಯಾಂಕುಗಳು, ಕಾರ್ಖಾನೆಗಳು ಮತ್ತು ವ್ಯವಹಾರಗಳು ಮುಚ್ಚಲ್ಪಟ್ಟವು. ಆರ್ಥಿಕತೆಗೆ ತುಂಬಾ ನಷ್ಟವಾಯಿತು. ರಥಯಾತ್ರೆ ನಡೆದಿದ್ದರೆ ಕೋಮುಗಲಭೆ ನಡೆಯುವುದು ನಿಶ್ಚಿತವಾಗಿತ್ತು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಥಯಾತ್ರೆಯ ಮೇಲೆ ದಾಳಿ ಮಾಡಲು ಒಬ್ಬನೇ ಧೈರ್ಯ ಮಾಡಿದ್ದಾನಾ? ಜೋರಾಗಿ ಹೇಳಿ ಯಾರಿಗಾದರೂ ಧೈರ್ಯವಿದೆಯೇ? ಧೈರ್ಯ ಮಾಡಿದವರು ಇಂದು ಲಾಕಪ್‌ಗಳಲ್ಲಿ ಜಗನ್ನಾಥ ಜಗನ್ನಾಥ ಎಂದು ಜಪಿಸುತ್ತಿದ್ದಾರೆ ಎಂದು ಶಾ ಹೇಳಿದ್ದಾರೆ.
ಗಡಿ ರಾಜ್ಯದಲ್ಲಿ ಶಾಂತಿಯನ್ನು ತಂದದ್ದು ಬಿಜೆಪಿ ಸರ್ಕಾರ. “ನನ್ನ ವಿದ್ಯಾರ್ಥಿ ದಿನಗಳಲ್ಲಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತನಾಗಿ, ನಾನು ಪೋರಬಂದರ್‌ಗೆ ಹೋಗಿದ್ದೆ. ಅಲ್ಲಿ ನಾನು ಪೋರಬಂದರ್ ಗಡಿ ಇಲ್ಲಿ ಪ್ರಾರಂಭವಾಗುತ್ತದೆ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಇಲ್ಲಿ ಕೊನೆಗೊಳ್ಳುತ್ತದೆ ಎಂಬ ಜಾಹೀರಾತು ಫಲಕಗಳನ್ನು ನೋಡಿದೆ. ಕಳ್ಳಸಾಗಾಣಿಕೆದಾರರು ಮತ್ತು ಮಾಫಿಯಾದ ಆಳ್ವಿಕೆ ಇತ್ತು. ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ ಅಲ್ಲಿರುವ ಜೈಲನ್ನು ಮುಚ್ಚಬೇಕಾಯಿತು.
Live: Union Home Minister Shri @AmitShah inaugurates various police housing projects from Nadiad https://t.co/Nm2FUavA49
— BJP Gujarat (@BJP4Gujarat) May 29, 2022
ನಾನು ಗೃಹ ಸಚಿವನಾದಾಗ ಈ ಮಾಫಿಯಾಗಳ ಎದೆಯ ಮೇಲೆಯೇ ಜೈಲು ತೆರೆಯುವ ಕೆಲಸ ಆರಂಭಿಸಿದ್ದೆ. ಅಂತೆಯೇ ಕಛ್ ಗಡಿಯಲ್ಲಿ ಡ್ರಗ್ಸ್, ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳ ಕಳ್ಳಸಾಗಣೆ ತಡೆಯಬೇಕು ಎಂದು ಗುಜರಾತ್ ಸಿಎಂ ಆಗಿ ಮೋದಿಜಿ ಸ್ಪಷ್ಟ ಸೂಚನೆ ನೀಡಿದ್ದರು. ಇಂದು ಕಛ್ ಗಡಿಯ ಮೂಲಕ ರಾಜ್ಯವನ್ನು ಪ್ರವೇಶಿಸಲು ಯಾರಿಗೂ ಧೈರ್ಯವಿಲ್ಲ. ಗಡಿ ರಾಜ್ಯವಾಗಿದ್ದರೂ ಗುಜರಾತ್ ಯಾವುದೇ ತುಷ್ಟೀಕರಣ ಮಾಡದೆ ಶಾಂತಿ ನೆಲೆಸಿದೆ. ನಾವು ಪಾಕಿಸ್ತಾನದೊಂದಿಗೆ ಸುದೀರ್ಘ ಕರಾವಳಿ ಮತ್ತು ಗಡಿಯನ್ನು ಹೊಂದಿದ್ದೇವೆ. ಆದರೆ ಯಾರೂ ಗುಜರಾತ್‌ನಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯನ್ನು ಅಡ್ಡಿಪಡಿಸಲು ಸಾಧ್ಯವಿಲ್ಲ ಎಂದು ಶಾ ಹೇಳಿದರು.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ