ಉತ್ತರಾಖಂಡ್​ನಲ್ಲಿ ಮತ್ತೆ ಮೇಘಸ್ಫೋಟ; ಇಬ್ಬರು ಸಾವು, ರಕ್ಷಣಾ ಕಾರ್ಯಾಚರಣೆಗೆ ಮಳೆ ಅಡ್ಡಿ

| Updated By: Lakshmi Hegde

Updated on: Aug 30, 2021 | 11:59 AM

ಮೇಘಸ್ಫೋಟದ ಬಗ್ಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್​ ಸಿಂಗ್​ ಧಮಿ ಟ್ವೀಟ್​ ಮಾಡಿದ್ದು, ಅವಶೇಷಗಳಡಿ ಸಿಲುಕಿರುವ ಜನರನ್ನು ಹೊರತೆಗೆಯುವ ಪ್ರಯತ್ನ ನಡೆಯುತ್ತಿದೆ.

ಉತ್ತರಾಖಂಡ್​ನಲ್ಲಿ ಮತ್ತೆ ಮೇಘಸ್ಫೋಟ; ಇಬ್ಬರು ಸಾವು, ರಕ್ಷಣಾ ಕಾರ್ಯಾಚರಣೆಗೆ ಮಳೆ ಅಡ್ಡಿ
ಮೇಘಸ್ಫೋಟದಿಂದ ಅವ್ಯವಸ್ಥೆ
Follow us on

ಉತ್ತರಾಖಂಡ್​​ನಲ್ಲಿ ಮತ್ತೊಮ್ಮೆ ಮೇಘಸ್ಫೋಟವಾಗಿದ್ದು, ಅವಘಡದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಏಳು ಮನೆಗಳು ನೆಲಸಮಗೊಂಡಿದ್ದು, ಅವಶೇಷಗಳಡಿ 5ಕ್ಕೂ ಹೆಚ್ಚು ಮಂದಿ ಸಿಲುಕಿದ್ದಾರೆ ಎಂದು ಹೇಳಲಾಗಿದೆ. ಧರ್ಚುಲಾದ ಜುಮ್ಮಾ ಗ್ರಾಮದಲ್ಲಿ ಮೇಘ ಸ್ಫೋಟಗೊಂಡಿದೆ. ಅದರ ಪರಿಣಾಮ ಎನ್​ಎಚ್​ಪಿ ಕಾಲನಿ, ತಪೋವನದವರೆಗೂ ಜಲಾವೃತವಾಗಿದೆ ಎಂದು ಹೇಳಲಾಗಿದೆ.

ದುರ್ಘಟನೆ ಬಗ್ಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್​ ಸಿಂಗ್​ ಧಮಿ ಟ್ವೀಟ್​ ಮಾಡಿದ್ದು, ಅವಶೇಷಗಳಡಿ ಸಿಲುಕಿರುವ ಜನರನ್ನು ಹೊರತೆಗೆಯುವ ಪ್ರಯತ್ನ ನಡೆಯುತ್ತಿದೆ. ಕಳೆದ ಕೆಲವು ದಿನಗಳಿಂದಲೂ ಉತ್ತರಾಖಂಡ್​ನಲ್ಲಿ ಸಿಕ್ಕಾಪಟೆ ಮಳೆ ಬೀಳುತ್ತಿದೆ. ಮಳೆಯಿಂದಾಗಿ ನಿರಂತರ ಹಾನಿಯಾಗುತ್ತಿದೆ ಎಂದು ಹೇಳಿದರು. ಹಾಗೇ, ಘರ್ವಾಲ್​ ಪ್ರದೇಶದಲ್ಲಿ ಪುಷ್ಕರ್​ ಸಿಂಗ್​ ಧಮಿ ಏರಿಯಲ್​ ಸರ್ವೇ ಕೂಡ ನಡೆಸಿದ್ದಾರೆ.

ಕಳೆದ ವಾರ ಖಬ್ರಾಳ ಗ್ರಾಮದ ಸತ್ಲಾ ದೇವಿ ದೇಗುಲದ ಸಮೀಪ ಮೇಘಸ್ಫೋಟವಾಗಿತ್ತು. ಇದರಿಂದಾಗಿ ನದಿಗಳು, ಹಳ್ಳಕೊಳ್ಳಗಳೆಲ್ಲ ತುಂಬಿ ಹರಿದಿದ್ದವು. ನೀರು ಮನೆಗಳಿಗೆ ನುಗ್ಗಿತ್ತು. ವಿದ್ಯುತ್​ ಕಂಬಗಳು, ಮರಗಳು ಮುರಿದುಬಿದ್ದು ಅವ್ಯವಸ್ಥೆ ಸೃಷ್ಟಿಸಿದ್ದವು. ದ್ವಿಚಕ್ರವಾಹನಗಳೂ ನೀರಿನಲ್ಲಿ ತೊಳೆದು ಹೋಗಿದ್ದವು. ಅಂದು ಯಾರೂ ಮೃತಪಟ್ಟಿರಲಿಲ್ಲ.

ಇದನ್ನೂ ಓದಿ: ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ; ಕದ್ದ ಮೊಬೈಲ್​ನಿಂದ ಸಿಕ್ಕಿಬಿದ್ದ ಆರೋಪಿಗಳು

Published On - 11:44 am, Mon, 30 August 21