Agra News: ಯಪ್ಪಾ ಕಾಲ ಎಲ್ಲಿಗೆ ಬಂತು? 11 ತಿಂಗಳ ಕಂದಮ್ಮನನ್ನು ರೇಪ್ ಮಾಡಿದ 12 ವರ್ಷದ ಅಪ್ರಾಪ್ತ ಬಾಲಕ

|

Updated on: Jun 24, 2023 | 8:12 AM

12 ವರ್ಷದ ಬಾಲಕ 11 ತಿಂಗಳ ಪುಟ್ಟ ಕಂದಮ್ಮನ  ಎಸಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಮಗುವನ್ನು ರಕ್ತಸಿಕ್ತ ಸ್ಥಿತಿಯಲ್ಲಿ ಬಿಟ್ಟು ಅಪ್ರಾಪ್ತ ವಯಸ್ಸಿನ ಆರೋಪಿ ಬಾಲಕ ಮನೆಯಿಂದ ಪರಾರಿಯಾಗಿದ್ದಾನೆ

Agra News: ಯಪ್ಪಾ ಕಾಲ ಎಲ್ಲಿಗೆ ಬಂತು? 11 ತಿಂಗಳ ಕಂದಮ್ಮನನ್ನು ರೇಪ್ ಮಾಡಿದ 12 ವರ್ಷದ ಅಪ್ರಾಪ್ತ ಬಾಲಕ
ಸಾಂದರ್ಭಿಕ ಚಿತ್ರ
Follow us on

ಆಗ್ರಾ: ಎಂದೂ ಕೇಳಿರದ, ಊಹಿಸಲೂ ಅಸಾಧ್ಯವಾದ ಅಘಾತಕಾರಿ ಘಟನೆಯೊಂದು ಆಗ್ರಾದ ಅಲಿಗಢದಲ್ಲಿ ನಡೆದಿದೆ. 12 ವರ್ಷದ ಬಾಲಕ 11 ತಿಂಗಳ ಪುಟ್ಟ ಕಂದಮ್ಮನ  ಎಸಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಮಗುವನ್ನು ರಕ್ತಸಿಕ್ತ ಸ್ಥಿತಿಯಲ್ಲಿ ಬಿಟ್ಟು ಅಪ್ರಾಪ್ತ ವಯಸ್ಸಿನ ಆರೋಪಿ ಬಾಲಕ ಮನೆಯಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜಗತ್ತು ಅರಿಯದ ತಮ್ಮ ಪುಟ್ಟ ಮಗಳ ಜೊತೆ ನಡೆದ ಹೀನಾಯ ಕೃತ್ಯ ತಿಳಿಯುತ್ತಿದ್ದಂತೆ ಮಗುವಿನ ಪೋಷಕರು ತಮ್ಮ ಪಕ್ಕದ ಮನೆಯಲ್ಲೇ ವಾಸವಿದ್ದ ಆರೋಪಿ ಅಪ್ರಾಪ್ತ ಬಾಲಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಂತರ ಪೊಲೀಸರು ಜೂನ್ 22ರ ಗುರುವಾರ ಮುಂಜಾನೆ ಆರೋಪಿ ಬಾಲಕನ್ನು ವಶಕ್ಕೆ ಪಡೆದಿದ್ದಾರೆ. ನಂತರ ಆರೋಪಿಯನ್ನು ಬಾಲನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಿದ್ದು, ಸದ್ಯ ಆಗ್ರಾದ ಮಕ್ಕಳ ಸುಧಾರಣಾ ಕೇಂದ್ರಕ್ಕೆ ಕಳುಹಿಸಲಾಗಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಠಾಣಾಧಿಕಾರಿ ರಾಜೇಶ್ ಕುಮಾರ್ ಶುಕ್ರವಾರ ತಿಳಿಸಿದರು ಎಂದು ಖಾಸಗಿ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: Bengaluru News: ಅಪಾರ್ಟ್ಮೆಂಟ್ ಲಿಫ್ಟ್​ನಲ್ಲಿ 10 ವರ್ಷದ ಬಾಲಕಿ ಮೇಲೆ ಫುಡ್ ಡೆಲಿವರಿ ಬಾಯ್ ಲೈಂಗಿಕ ದೌರ್ಜನ್ಯ, ಕಾಮುಖ ಅರೆಸ್ಟ್

ಆರೋಪಿ ಬಾಲಕ ಆಗಾಗ ಸಂತ್ರಸ್ತ ಮಗುವಿನ ಮನೆಗೆ ಬಂದು ಹೋಗುತ್ತಿದ್ದ. ಆದ್ರೆ ಅದೊಂದು ದಿನ ಮಗುವನ್ನು ಟೆರೇಸ್‌ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮಗುವಿನ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ, ಐಪಿಸಿ ಸೆಕ್ಷನ್ 376-ಎಬಿ (12 ವರ್ಷದೊಳಗಿನ ಬಾಲಕಿ ಮೇಲೆ ಅತ್ಯಾಚಾರ) ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ದೂರಿನ ಪ್ರಕಾರ, “ಆರೋಪಿಯು ನಮ್ಮ ನೆರೆಹೊರೆಯವನಾಗಿದ್ದು, ಬುಧವಾರ ಸಂಜೆ ನಾನು ಮನೆಕೆಲಸದಲ್ಲಿ ನಿರತಳಾಗಿದ್ದಾಗ ಅವನು ಬಂದು ನನ್ನ ಮಗಳನ್ನ ಟೆರೇಸ್‌ಗೆ ಕರೆದೊಯ್ದಿದ್ದಾನೆ. ನನ್ನ ಮಗಳ ಅಳು ಕೇಳಿದ ನಂತರ ನಾನು ಅಲ್ಲಿಗೆ ಧಾವಿಸಿದೆ. ಅಗ ಆಕೆಗೆ ರಕ್ತಸ್ರಾವವಾಗುತ್ತಿತ್ತು ಎಂದು ನೊಂದ ತಾಯಿ ದೂರು ದಾಖಲಿಸಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ