- TV9 Kannada National News Stage collapses during TDP leader and former Home Minister Chinna Rajappa speech in Eluru, Andhra Pradesh
Video ನೋಡಿ: ಆಂಧ್ರಪ್ರದೇಶ ಟಿಡಿಪಿ ಮುಖಂಡನ ಭಾಷಣದ ವೇಳೆ ಕುಸಿದ ವೇದಿಕೆ, ಕಂಗಾಲಾದ ನಾಯಕರು
ವೇದಿಕೆ ಕುಸಿದ ಸಂದರ್ಭದಲ್ಲಿ ಟಿಡಿಪಿಯ ಅನೇಕ ಮುಖಂಡರು ವೇದಿಕೆಯಲ್ಲಿದ್ದರು.

Updated on: Jun 24, 2023 | 10:44 AM
ಶುಕ್ರವಾರ ಆಂಧ್ರಪ್ರದೇಶದ (Andhra Pradesh) ಏಲೂರು (Eluru) ಜಿಲ್ಲೆಯ ನುಜಿವೀಡು ಮಂಡಲದ ಬತುಲವರಿಗುಡೆಂ ಎಂಬಲ್ಲಿ ಟಿಡಿಪಿ ನಾಯಕರ (TDP leader) ಭಾಷಣದ ವೇಳೆ ವೇದಿಕೆ (Stage) ಕುಸಿದು ಸುಮಾರು 10 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ವೀಡಿಯೊ ಚಿತ್ರೀಕರಣದಲ್ಲಿ ಘಟನೆ ದಾಖಲಾಗಿದೆ.
ಮಾಜಿ ಗೃಹ ಸಚಿವ ಚಿನ್ನರಾಜಪ್ಪ ಭಾಷಣ ಮಾಡುವ ವೇಳೆ ಭಾರೀ ಗಾಳಿ ಬೀಸಿದ್ದು, ವೇದಿಕೆ ಕುಸಿದಿದೆ. ಈ ಸಂದರ್ಭದಲ್ಲಿ ಮಾಜಿ ಸಚಿವೆ ಪೀತಾಳ ಸುಜಾತಾ ಹಾಗೂ ಹಲವು ಮಾಜಿ ಶಾಸಕರು ವೇದಿಕೆಯಲ್ಲಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್ ನ್ಯೂಸ್ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್ ಆಲ್ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು. ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು



